ಶುಕ್ರದೆಸೆ ನ್ಯೂಸ್:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವಿಕರಿಸುವೆ ಮತದಾರರ ತೀರ್ಪಿಗೆ ತಲೆಬಾಗುವೆ ನಾನು ಅಂಕಿ ಸಂಖ್ಯೆಗಳಲ್ಲಿ ಸೋಲು ಅನುಭವಿಸಿರಬಹುದು ಅದರೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ನಾನು‌ ಗೆದ್ದಿದ್ದೆನೆ ಎಂದು ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ಹೇಳಿದರು ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಮಾಜಿ ಶಾಸಕರು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿದರು ನನ್ನ ಸ್ವಾಭಿಮಾನಿ ಹೋರಾಟಕ್ಕೆ ಕೈ ಜೋಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಪೈಪೋಟಿಯಾಗಿ ಪ್ರಚಾರ ನಡೆಸಿ 50 ಸಾವಿರ ಮತಗಳನ್ನು ಪಡೆದು ಅಲ್ಪ ಮತಗಳಲ್ಲಿಯೇ ಸೋಲು ಅನುಭವಿಸಿದ್ದೆನೆ .ಕೆಲ ಮತದಾರರು ಜಾಗೃತಿಯಿಲ್ಲದೆ 2 ಸಾವಿರ ಮತಗಳನ್ನು ನೋಟ್ ಕ್ಕೆ ಒತ್ತಿದ್ದರಿಂದ ಸೋಲು ಅನುಭವಿಸಬೇಕಾಯಿತು. ಕ್ಷೇತ್ರದ ಮತದಾರರ ತೀರ್ಪಿಗೆ ‌ನಾನು ತಲೆ ಬಾಗುವೆ ಸೋಲು ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಕಾರವಿದೆ .ನಮ್ಮ ಸ್ವಾಭಿಮಾನಿ ಕಾರ್ಯಕರ್ತರು ಎದೆಗುಂದಬೇಡಿ ನೋವುಂಟು ಮಾಡಿಕೊಳ್ಳಬಾರದು ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವುನ್ನ ಸಮಾನವಾಗಿ ಸ್ವೀಕರಿಸೊಣ ಎಂದು ಮತದಾರರಿಗೆ ಸ್ವಾಭಿಮಾನಿ ಕಾರ್ಯಕರ್ತರಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

You missed

error: Content is protected !!