ಶುಕ್ರದೆಸೆ ವೆಬ್ ನ್ಯೂಸ್:- ತಾಲ್ಲೂಕಿನ ಚದರಗೋಳ ಗ್ರಾಮದಲ್ಲಿ ಕೆರೆಗೆ ಈಜಲು ಹೋದ ಯುವಕ ಈಜು ಬಾರದೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಜಗಳೂರು ತಾಲ್ಲೂಕಿನ ಚದರಗೋಳ ಗ್ರಾಮದ ಕೆರೆಯಲ್ಲಿ ತನ್ನ ಮಾವನ ಮಕ್ಕಳ ಜೊತೆಗೂಡಿ ಸೋಮವಾರ ಕೆರೆಗೆ ಈಜಲು ಹೋಗಿದ್ದ ಇಬ್ರಾಹಿಂ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜರುಗಿದೆ .ತಾಯಿ ಬಿ ಬಿ ಜಾನ್ ಎಂಬುವರ ಪುತ್ರ ಪ್ರಥಮ ಪಿಯುಸಿ ಓದುತ್ತಿದ್ದ ಬೇಸಿಗೆ ರಜಾ ಅವಧಿಯಲ್ಲಿ ಗ್ರಾಮದ ಯುವಕರೊಂದಿಗೆ ಕೆರೆಗೆ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೆರೆ ಈಜಲು ಸ್ನೇಹಿತರೆಲ್ಲ ಕೆರೆಗೆ ಇಳಿದಿದ್ದರು ನೀರಿನಲ್ಲಿ ಹುಡುಗರೆಲ್ಲಾ ಜೂಟ್ ಮುಟ್ ಆಟವನ್ನು ಸಹ ಆಡಲು ನಿರತರಾಗಿದ್ದರು.ಈ ಸಂದರ್ಭದಲ್ಲಿ ಯುವಕ ಇಬ್ರಾಹಿಂನಿಗೆ ಈಜು ಬರುವುದಿಲ್ಲ ನೀರಿಗೆ ಇಳಿಯಬೇಡ ಕೆರೆ ದಡದ ಮೇಲೆಯೇ ಕುಳಿತಿರು ಎಂದು ಯುವಕರು ಹೇಳಿದ್ದರು ಇಬ್ರಾಹಿಂ ಸ್ನೇಹಿತರು ಆಡುವುದನ್ನ ಕಂಡು ನಾನು ಇಲ್ಲಿಯೇ ತುದಿಯಲ್ಲಿ ಈಜು ಆಡುವೆ ಎಂದು ನೀರಿಗೆ ಇಳಿದ ಇಬ್ರಾಹಿಂ ಈಜುವಾಗ ದೊಡ್ಡ ಗುಂಡಿಗೆ ಸಿಲುಕಿ ಈಜು ಬಾರದೇ ನಾಪತ್ತೆಯಾಗಿ ಸಾವನ್ನಪ್ಪಿದ ಘಟನೆ ಜರುಗಿದೆ.ಗಾಬರಿಗೊಂಡ ಯುವಕರು ಸಂಬಂಧಿಕರಿಗೆ ತಿಳಿಸುವಷ್ಟತ್ತಿಗೆ ಯುವಕ ಮೃತಪಟ್ಟಿದ್ದ ನೀರಿನಲ್ಲಿ ನಾಪತ್ತೆಯಾದ ಯುವಕನ ಮೃತದೇಹವನ್ನ ಹೊರತೆಗೆಯಲು ಈಜು ತಜ್ಘರಿಂದ ಹುಡುಕಾಟ ನಡೆಸಿ ನಿನ್ನೆ ಮಧ್ಯಾಹ್ನ 2 ಗಂಟೆಗೆ ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.ಗ್ರಾಮದಲ್ಲಿ ಸಂಬಂಧಿಕರ ಗೋಳಿನ ಆಕ್ರಂದನ ಮುಗಿಲು ಮುಟ್ಟುವಂತಿತ್ತು ಮೌನ ಅವರಿಸಿದೆ. ಮೃತ ಯುವಕನ ತಾಯಿಯ ಗೋಳಿನ ಕಡಲು ಮುಗಿಲು ಮುಟ್ಟುವಂತಿತ್ತು.