ಶುಕ್ರದೆಸೆ ನ್ಯೂಸ್:- ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗೆ ಮತದಾರರು ಮಾರುಹೋಗಿದ್ದಾರೆ ಮತದಾರರ ತೀರ್ಪಿಗೆ ನಾವು ತಲೆ ಬಾಗುತ್ತೆವೆ ಸೋಲು ಒಪ್ಪಿಕೊಂಡ ಬಿಜೆಪಿ ಪಕ್ಷದ ಮಂಡಲ ಅದ್ಯಕ್ಷ ಪಲ್ಲಾಗಟ್ಟೆ ಮಹೇಶ್ ಸಮರ್ಥನೆ . ಪಟ್ಟಣದ ಪತ್ರಿಕಾ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು ರಾಷ್ಟ್ರೀಯ ಬಾಜಪ ಪಕ್ಷದ ವತಿಯಿಂದ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮಹತ್ವದ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗೆ ಒತ್ತು ನೀಡಿದರು ಸಹ ಮತದಾರರು ಈ ಬಾರಿ ಬದಲಾವಣೆ ಬಯಿಸಿ ಕಾಂಗ್ರೆಸ್ ಪಕ್ಷದ ಗೆಲ್ಲುವಿಗೆ ಬೆಂಬಲಿಸಿದ್ದಾರೆ .ನಾವು ಸ್ಲಲ್ಪ ಮತಗಳಲ್ಲಿಯೆ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದೆವೆ. ಕಾಂಗ್ರೆಸ್ ಅಭ್ಯರ್ಥಿ ದೇವೆಂದ್ರಪ್ಪ 50765 ಮತ ಪಡೆದು ಗೆಲುವು ಸಾಧಿಸಿದರೆ ನಮ್ಮ ಪಕ್ಷದ ಅಭ್ಯರ್ಥಿ ಎಸ್ ವಿ ರಾಮಚಂದ್ರ 49891 ಸಾವಿರ ಮತಗಳನ್ನು ಪಡೆದು ಪರಾಜಿತರಾಗಿದ್ದು ನಮ್ಮ ಸೋಲುನ್ನು ಸ್ವಿಕರಿಸುತ್ತೆವೆ .ಆದರೆ ಅಡಳಿತ ವಿರೋಧ ಪಕ್ಷದವರಾಗಿ ಕ್ಷೇತ್ರ ಅಭಿವೃದ್ಧಿಗೆ ನಮ್ಮ ಸಹಕಾರವಿದೆ ಅಭಿವೃದ್ಧಿ ಹಿನ್ನಡೆಯಾದರೆ ನಾವು ದ್ವನಿ ಎತ್ತುತ್ತೆವೆ ಎಂದು ಹೇಳಿದರು . * ಪ್ರಶ್ನೆ:- ರಾಷ್ಟ್ರೀಯ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಸೋಲು ಅನುಭವಿಸಲು ಕಾರಣವೇನು ? ಉತ್ತರ :- ಮತದಾರರು ಕಾಂಗ್ರೆಸ್ ಪ್ರಣಾಳಿಕೆಗೆ ಮಾರುಹೋಗಿರಬಹುದು ನಾವು ಕ್ಷೇತ್ರದ ಅಭಿವೃದ್ಧಿಗೆ ಹಿಂದೆ ಬಿದ್ದಿರಲಿಲ್ಲ.
:- ಪ್ರಶ್ನೆ:- ಬಿಜೆಪಿ ಅಭ್ಯರ್ಥಿಯ ಹಿಂಬಾಲಿಕರಿಂದಲೆ ಪಕ್ಷ ಸೋಲುಂಡಿದ್ದು ಪಕ್ಷದಲ್ಲಿ ಕಾರ್ಯಕರ್ತರ ಅಸಮಾಧಾನದಿಂದ ಕೆಲವರು ಪಕ್ಷ ಬಿಟ್ಟರು ಈ ಎಲ್ಲಾ ಅಂಶಗಳಿಂದ ಸೋಲು ಅನುಭವಿಸಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಉತ್ತರ:- ಪಕ್ಷ ಎಲ್ಲಾರುನ್ನು ವಿಶ್ವಾಸಕ್ಕೆ ತೆಗೆದುಕೊಂಡಿತ್ತು ಆದರೆ ನಮ್ಮ ಪಕ್ಷದವರೆ ಚುನಾವಣೆಯಲ್ಲಿ ಸೋಲಿಗೆ ಷಡ್ಯಂತ್ರ ಮಾಡಿದ್ದಾರೆ ಎಂದು ಗುಡುಗಿದರು. ಪ್ರಶ್ನೆ :-ಕೆಲ ತಾಪಂ ಮಾಜಿ ಸದಸ್ಯರು ಮತ್ತು ಕೆಲ ಪಪಂ ಸದಸ್ಯರು ಬಿಜೆಪಿ ಪಕ್ಷ ತೊರೆದು ಪಕ್ಷೇತರ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಸೇರ್ಪಡೆಯಾಗಲು ಕಾರಣ ? . ಉತ್ತರ:- ನಮ್ಮ ಪಕ್ಷದ ಮತಗಳನ್ನು ಪಕ್ಷೇತರ ಅಭ್ಯರ್ಥಿ ಮತ ಸೆಳೆದ ಕಾರಣ ಅತ್ಯಲ್ಪ ಮತಗಳಲ್ಲಿ ಹಿನ್ನಡೆಯಾಗಿದೆ ಎಂದು ಮೌನಿಯಾದ ಬಿಜೆಪಿ ಮುಖಂಡರು. ಪ್ರಶ್ನೆ :- ಚುನಾವಣೆ ಪ್ರಚಾರಕ್ಕೆ ಘಟಾನುಘಟಿ ನಾಯಕರು ಬಂದು ಸ್ಟಾರ್ ಕ್ಯಾಂಪಿನ್ ನಟ ಸುದೀಪ್ ಮೂಲಕ ರೋಡ್ ಶೋ ನಡೆಸಿದರು ಎಸ ವಿ ರಾಮಚಂದ್ರಪ್ಪ ಕ್ಷೇತ್ರ ಉಳಿಸಿಕೊಳ್ಳಲು ವಿಫಲ ಏಕೆ ? ಉತ್ತರ:- ಜನರ ತಿರ್ಮಾನಕ್ಕೆ ನಾವು ಯಾರು ಹೊಣೆಯಲ್ಲ ಪ್ರಯತ್ನ ನಡೆಸಿದ್ದೆವೆ ಫಲ ಸಿಗಲಿಲ್ಲ ಎಂದು ಉತ್ತರಿಸಿದರು.ಚುನಾವಣೆ ಪ್ರಚಾರದಲ್ಲಿ ನಮ್ಮ ಜೊತೆಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಮತ್ತು ಮತಬಾಂದವರಿಗೂ ಕೃತಜ್ಞತೆಗಳುನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿ ಜಿ ಪಿ ಮುಖಂಡ ಬಿದರಕೆರೆ ರವಿಕುಮಾರ್..ಮುಖಂಡ ದದ್ದಿಗಿ ಬಸವರಾಜ್.ಮುಖಂಡ ಬಾಲರಾಜ್.ಹನುಮಂತಪ್ಪ. ಸೇರಿದಂತೆ ಇದ್ದರು.