ಶಿವಮೊಗ್ಗದಲ್ಲಿ ಚರಂಡಿಗೆ ಸ್ಲ್ಯಾಬ್ ಬದಲು ಡಾ. ಅಂಬೇಡ್ಕರ್ ನಾಮಫಲಕದ ಹೊದಿಕೆ, ಕ್ರಮಕ್ಕೆ ಒತ್ತಾಯ
: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ (Dr Ambedkar) ಅವರ ನಾಮಫಲಕವನ್ನು ಚರಂಡಿಗೆ ಹೊದಿಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್, ಡಾ. ಬಿ.ಆರ್.ಅಂಬೇಡ್ಕರ್ (Dr Ambedkar) ಅವರಿಗೆ ಅವಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಜೈಲ್ ಸರ್ಕಲ್‌ನಲ್ಲಿ ಪೊಲೀಸ್ ಚೌಕಿ ಪಕ್ಕದಲ್ಲಿ ಅಂಬೇಡ್ಕರ್ ಅವರ ಹೆಸರಿನ ಫಲಕವನ್ನು ಚರಂಡಿಗೆ ಮುಚ್ಚಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಜೈಲ್ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಅಪೂರ್ಣವಾಗಿರುವುದು, ಚರಂಡಿಗೆ ಸ್ಲಾಬ್ ಹಾಕುವ ಬದಲು ಡಾ. ಅಂಬೇಡ್ಕರ್ ವೃತ್ತ ಎಂದು ಬರೆದಿರುವ ನಾಮಫಲಕವನ್ನೇ ಸ್ಲಾಬ್ ರೀತಿ ಅಳವಡಿಸಲಾಗಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಮಂಗಳವಾರ ವರದಿ ಮಾಡಿದೆ. ಅಧಿಕಾರಿಗಳ ಅಸಡ್ಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.