ಜಗಳೂರು:-ಖಾಸಗಿ ಶಾಲೆಗಳು ವಿಧ್ಯಾರ್ಥಿಗಳಿಗೆ ಅತಿಯಾದ ಶಾಲಾ ಶುಲ್ಕ ವಿಧಿಸದಂತೆ ಕ್ರಮ ಡೊನೇಶನ್ ಹಾವಳಿಗೆ ಕಡಿವಾಣ ಹಾಕಲು ಪ್ರಯತ್ನ ತಹಶೀಲ್ದಾರ್ ಜಿ ಸಂತೋಷಕುಮಾರ್
ಜಗಳೂರು ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಕರಿಂದ ಹೆಚ್ಚಿನ ಡೊನೇಶನ್ ಪಡೆಯುವುದಕ್ಕೆ ಶಿಕ್ಷಣ ಇಲಾಖೆ ನೀಯನುಸಾರ ಡೊನೇಶನ್ ಹಾವಳಿಗೆ ಕಡಿವಾಣ ಹಾಕಲು ಖಾಸಗಿ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಸರ್ಕಾರದ ನೀಯಮಗಳುನ್ನು ತಪ್ಪದೆ ಪಾಲನೆ ಮಾಡುವಂತೆ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡಲಾಗುವುದು. ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಕರಿಂದ ಹೆಚ್ಚಿನ ಡೊನೇಶನ್ ಪಡೆಯುವುದಕ್ಕೆ ಶಿಕ್ಷಣ ಇಲಾಖೆ ಕಡಿವಾಣ ಹಾಕಲು ಪ್ರತಿ ವರ್ಷವೂ ಕೂಡ ಸಭೆ ನಡೆಸಲಾಗುತ್ತಿದೆ..ಸರ್ಕಾರಿ ನೀಯಮ ಉಲ್ಲಂಘಿಸಿ ಅತಿಯಾದ ಶಾಲಾ ಶುಲ್ಕದ ನೆಪಾದಲ್ಲಿ ಹೆಚ್ಚು ಡೋನೇಶನ್ ಪಡೆಯುವಂತ ಖಾಸಗಿ ಶಾಲಾ ಕಾನ್ವಂಟ್ ಗಳಿಗೆ ಶಿಸ್ತುಕ್ರಮ ತಹಶೀಲ್ದಾರ್ ಜಿ ಸಂತೋಷಕುಮಾರ್
, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ಪ್ರವೇಶ ಶುಲ್ಕಕ್ಕೆ ಹೆದರಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನರ್ಸರಿಯಿಂದ ಕಾಲೇಜ್ ಹಂತದವರೆಗೂ ಡೊನೇಶನ್ ಹಾವಳಿ ಮಿತಿಮೀರಿದೆ. ಎಂಬ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದ್ದು ನೀಯನುಸಾರ ಶುಲ್ಕ ಕಡಿವಾಣಕ್ಕೆ ಸಿದ್ದವಾಗಿದ್ದೆವೆ ಎಂದು ಅವರು ತಿಳಿಸಿದರು..
ಸಮಾಜದಲ್ಲಿನ ಎಲ್ಲ ವರ್ಗದ ಮಕ್ಕಳು ಒಂದೇ ಗುಣಮಟ್ಟದ ಮತ್ತು ಒಂದೇ ತೆರನಾದ ಶಾಲೆಯಲ್ಲಿ ಶಿಕ್ಷಣ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಸಮಾನ ಶಿಕ್ಷಣ ಜಾರಿಗೆ ತರುವುದರೊಂದಿಗೆ ಎಲ್ಲ ವರ್ಗಗಳನ್ನು ಸಮಾನವಾಗಿ ಕಾಣುವ ನೀಯಮ ಪಾಲನೆ ಮಾಡುವಂತೆ ಸಂಬಂಧಿಸಿದ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
: