ಜಗಳೂರಿನ
ಡಿಸಿಸಿ ಬ್ಯಾಂಕಿನ ಪಿಲ್ಡ್ ಆಫಿಸರ್ ಹಿರೆಮಲ್ಲನಹೊಳೆ ಹಾಲಸ್ವಾಮಿಯವರು ನಿನ್ನೆ ಸಂಜೆ ನಡೆದ ಭೀಕರ ಅಪಘಾತದಲ್ಲಿ ಸಾವು : ಶುಕ್ರದೆಸೆ ನ್ಯೂಸ್ :-ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ಆಪೇ ಆಟೋ ಹಾಗೂ ಬೈಕ್ ನಡುವೆ ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಿ ಸಿ ಸಿ ಕ್ಷೇತ್ರಾಧಿಕಾರಿ ಹಾಲಸ್ವಾಮಿಯವರು ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ಜರುಗಿದೆ.
ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಹಾಲಸ್ವಾಮಿ ಡಿಡಿಸಿಸಿ ಬ್ಯಾಂಕ್ ನೌಕರ ಎಂದಿನಂತೆ ತನ್ನ ಕರ್ತವ್ಯ ಮುಗಿಸಿಕೊಂಡು ರಾತ್ರಿ ಜಗಳೂರು ಪಟ್ಟಣದಿಂದ ಹಿರೇಮಲ್ಲನಹೊಳೆ ಕಡೆಗೆ ಹೋಗಿತ್ತಿರುವ ಸಂದರ್ಭದಲ್ಲಿ ಉದ್ದಗಟ್ಟ ಕ್ರಾಸ್ ಬಳಿ ಆಪೇ ಆಟೋ ಒಂದು ದೋಣಿಹಳ್ಳಿ ಕಡೆಯಿಂದ ಬರುತ್ತಿರುವ ಆಟೊ ಉದ್ಗಾಟ್ಟದ ಕಡೆಗೆ ತಿರುಗುವ ಸಂದರ್ಭದಲ್ಲಿ ಬೈಕ್ ಮತ್ತು ಆಟೋ ಮದ್ಯೆ ಮುಖ ಮುಖಿ ಡಿಕ್ಕಿ ಹೊಡೆದುಕೊಂಡು ಪರಿಣಾಮ ಭೀಕರ ಅಪಘಾತದಲ್ಲಿ ತಲೆ ಭಾಗ ಸೀಳಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತದೇಹವನ್ನು ಪಟ್ಟಣದ ಸರಕಾರಿ ಆಸ್ಪತ್ರೆ ಶವಾಗಾರ ಕೊಠಡಿಗೆ ಸಾಗಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಈ ಸಂಬಂಧಿಸಿದವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಕುಟಂಬಸ್ಥರ ಗೋಳಿನ ಕಡಲು ಮುಗಿಲು ಮುಟ್ಟುವಂತಿತ್ತು ಗ್ರಾಮದ ಸ್ನೆಹಿತರು ಜಗಳೂರು ಪಟ್ಟಣದ ಹಾಲಸ್ವಾಮಿ ಸ್ನೇಹಿತರು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಕುಟುಂಬಸ್ಥರುನ್ನು ಸಮಾಧಾನ ಪಡಿಸಿದ್ದಾರೆ…