ಬೆಂಗಳೂರು:- ಜೈಲಿನಲ್ಲಿ ಶೂ ಲೇಸ್ ನಿಂದ ನೇಣು ಬಿಗಿದುಕೊಂಡ ರೀತಿಯಲ್ಲಿ ರೌಡಿಶೀಟರ್ ಶವ ಪತ್ತೆ.!

ಶುಕ್ರದೆಸೆ ನ್ಯೂಸ್:- ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಶೌಚಾಲಯದಲ್ಲಿ ಶೂ ಲೇಸ್ ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸುನೀಲ್ ಮೃತ ರೌಡಿ ಶೀಟರ್. ಇನ್ನೂ ಇತನ ಸಾವು ಇದೀಗ ಹಲವಾರು ಹನುಮಾನ ಮೂಡಿಸಿದೆ. ಶೂ ಲೇಸ್ ನಿಂದ ನೇಣು ಬಿಗಿದುಕೊಂಡು ಸಾವನಪ್ಪಿದ ರೀತಿಯಲ್ಲಿ ಆತನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಈ ರೌಡಿಶೀಟರ್ ಸುನೀಲ್ ಕಗ್ಗಲಿಪುರದಲ್ಲಿ ವಿನೋದ್ ಎಂಬಾತನನ್ನ ಕೊಲೆ ಮಾಡಿ ಮೂರು ವರ್ಷಗಳಿಂದ ಜೈಲಿನಲ್ಲಿದ್ದು, ಇನ್ನು ಜೂನ್ 2ಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಬೇಕಿದ್ದನು.

ಕೊಲೆ ಮಾಡಿ ಜೈಲು ಸೇರಿದ್ದ ಸುನೀಲ್ ಕೆಲ ದಿನಗಳ ಹಿಂದೆ ತನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಅಥವಾ ಬಾತ್ ರೂಮ್ ನಲ್ಲಿ ನಾನೇ ನೇಣುಹಾಕಿಕೊಂಡ ರೀತಿ ನಿಮಗೆ ಸಿಗಬಹುದು ಎಂದು ಸಹ ಹೆಳಿಕೊಂಡಿದ್ದ. ಈ ಹಿಂದೆ ಕೊಲೆಯಾಗಿದ್ದ ವಿನೋದ್ ಮಾಜಿ ಕಾರ್ಪೊರೇಟರ್ ಓರ್ವರ ಅಣ್ಣನ ಮಗನಾಗಿದ್ದ. ಹೀಗಾಗಿ ರೌಡಿಶೀಟರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇನ್ನು ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಬಳಿಕವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿದುಬರಲಿದೆ.

Leave a Reply

Your email address will not be published. Required fields are marked *

You missed

error: Content is protected !!