ಶುಕ್ರದೆಸೆ ನ್ಯೂಸ್:- ಹುಚ್ಚಂಗಿಪುರ ಗ್ರಾಮದ ನೂತನ VSSN ಅಧ್ಯಕ್ಷರಾಗಿ ಎಲ್ ಟಿ ಶ್ರೀನಿವಾಸ್ ನಾಯ್ಕ್ ಅವಿರೋಧ ಆಯ್ಕೆ:
ಜಗಳೂರು: ತಾಲೂಕಿನ ಬಿಳಿಚೋಡು ಹೋಬಳಿಯ ಹುಚ್ಚಂಗಿಪುರ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಚ್ಚಂಗಿಪುರ ಗ್ರಾಮದ ಎಲ್ ಟಿ ಶ್ರೀನಿವಾಸ್ ನಾಯ್ಕ್ ಮತ್ತು ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ನವರು ಅವಿರೋಧವಾಗಿ ಆಯ್ಕೆಯಾದ್ದಾರೆ..
ಹುಚ್ಚಂಗಿಪುರ ಗ್ರಾಮದಲ್ಲಿ ನೂತನವಾಗಿ ಆರಂಭವಾದ VSSN ಸಂಘಕ್ಕೆ, ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ . ಇವರ ವಿರುದ್ಧ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿರುವುದಿಲ್ಲ ಚುನಾವಣೆಯಲ್ಲಿ ಈ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ, ಚುನಾವಣಾಧಿಕಾರಿ ಎಮ್ ಸಿ ಮಂಜುನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದ್ದಾರೆ..
ಈ ಹಿಂದೆ ಹುಚ್ಚಂಗಿಪುರ ಗ್ರಾಮವು ದಿದ್ದಿಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಳಪಟ್ಟಿತ್ತು, ಅಲ್ಲಿಂದ ವಿಂಗಡಿಸಿ ಈಗ ಹುಚ್ಚಂಗಿಪುರ ಗ್ರಾಮದಲ್ಲೆ ನೂತನ VSSN ನ್ನು ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಹುಚ್ಚಂಗಿಪುರ ಗ್ರಾಮದ VSSN ನೂತನ ಅಧ್ಯಕ್ಷ ಎಲ್ ಟಿ ಶ್ರೀನಿವಾಸ್ ನಾಯ್ಕ್ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಹಾಗೂ ಇದಕ್ಕೆ ಶ್ರಮಿಸಿದ ಊರಿನ ಎಲ್ಲಾ ಮುಖಂಡಿರಿಗೂ, ಗ್ರಾಮ ಪಂಚಾಯತಿ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು. ಇವರು ಈ ಹಿಂದೆ ದಿದ್ದಿಗಿ ಗ್ರಾಪಂ ಅಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿರುವ ಅನುಭವ ಹೊಂದಿದ್ದಾರೆ ಎನ್ನಲಾಗಿದೆ. ಮಾಜಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಇದೀಗ ವಿಎಸ್ ಎಸ್ ಎನ್ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅನೇಕ ಜನರ ಶ್ರಮದ ಫಲವಾಗಿ ಇಂದು ಗ್ರಾಮಕ್ಕೆ ನೂತನ VSSN ಬಂದಿದೆ. ಇದರ ಮೊದಲ ಅಧ್ಯಕ್ಷನಾಗಿ ನಾನು ಆಯ್ಕೆ ಆಗಿದ್ದು ತುಂಬಾ ಖುಷಿ ತಂದಿದೆ. ಎಂದೆಂದಿಗೂ ರೈತರ ಪರವಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ನೂತನ ನಿರ್ದೇಶಕರಾದ ಕೆ.ಜಿ ಆನಂದಪ್ಪ, ಕೆ.ಜಿ ಸಂಜಿವಪ್ಪ, ಉಪ್ಪಾರ್ ನಾಗಮ್ಮ, ಹನುಮಕ್ಕ, ವೆಂಕಟೇಶ್, ನಾಗಮ್ಮ, ನೀಲಪ್ಪ, ಚೆನ್ನಪ್ಪ, ಕೆ.ವಿ ವಿರೇಶ್, ಅಂಬರೇಶ್ ನಾಯ್ಕ್, ಹಾಗೂ ಊರಿನ ಮುಖಂಡರಾದ ಯು.ವೈ ರಾಜಪ್ಪ, ತಾಲೂಕು ಪಂಚಾಯಿತ ಮಾಜಿ ಅಧ್ಯಕ್ಷರಾದ ಈರಮ್ಮ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಟಿ ವೆಂಕಟೇಶ್, ರವಿ ಯು.ಸಿ, ಭೀಮಪ್ಪ, ಹಾಲೇಶ್, ಪರುಸಪ್ಪ, ಸುರೇಶ್ ಇನ್ನು ಮೊದಲಾದವರು ಉಪಸ್ಥಿತರಿದ್ದರು.