ಜೂನ್ ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲ್ಕೊಳ್ಳಲಿ: ಪ್ರತಾಪ್ ಆರೋಪಕ್ಕೆ ಡಿಕೆಶಿ ವ್ಯಂಗ್ಯ
ಬೆಂಗಳೂರು: ಪ್ರತಿಭಟನೆ ಮಾಡಲು ಜೂನ್‌ವರೆಗೆ ಕಾಯೋದು ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲಕೊಳ್ಳೋಕೆ ಹೇಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ, ಕಾಂಗ್ರೆಸ್ ಮುಖ ನೋಡಿ ಯಾರೂ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ (Guarantee Card) ನೋಡಿ ಮತ ಹಾಕಿದ್ದಾರೆ, ಅದು ನೆನಪಿರಲಿ. ಕೊಟ್ಟ ಭರವಸೆಯನ್ನು ಈಗ ಈಡೇರಿಸಿ. ಜೂನ್ 1 ರವರೆಗೆ ಕಾಯುತ್ತೇವೆ. ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಅವರು ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕೊಳ್ಳಲಿ. ಜೂನ್ ಯಾಕೆ? ನಾಳೆಯಿಂದಲೇ ಬಂದು ಇಲ್ಲಿ ಮಲಕೊಳ್ಳೋಕೆ ಹೇಳಿ ಎಂದು ಟಾಂಗ್ ನೀಡಿದರು.
, ಕಾಂಗ್ರೆಸ್, ಗ್ಯಾರಂಟಿ, ಡಿಕೆ ಶಿವಕುಮಾರ್, ಪ್ರತಾಪ್ ಸಿಂಹ, ಬಿಜೆಪಿ