ಸುದ್ದಿ Sexual : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಬಿಇಒ ಗೆ 5 ವರ್ಷ ಜೈಲು
By.shukradeshe news Posted on June 22, 2023ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಬಿಇಒ ಗೆ 5 ವರ್ಷ ಜೈಲು
ಗದಗ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ (ಬಿಇಒ) ಶಂಕ್ರಪ್ಪ ಹಳ್ಳಿಗುಡಿ ಎಂಬವವರಿಗೆ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಶಂಕ್ರಪ್ಪ ಬಾಲಕಿಯ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಗಿದೆ, ಎಲ್ಲಿ ಮಾಡುವುದು? ಎಂದು ಕೇಳಿದ್ದರು. ಬಾಲಕಿಯ ಮನೆಯಲ್ಲಿ ಟಾಯ್ಲೆಟ್ ಇಲ್ಲದ ಹಿಂಭಾಗದ ಬಚ್ಚಲು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದರು.
ಬಳಿಕ ರೂಂಗೆ ಬಂದು ಬಾಲಕಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದರು. ಬೇರೆ ಯಾರನ್ನಾದರೂ ಮದುವೆಯಾಗು, ಆದ್ರೆ ನನ್ನನ್ನು ಮಾತ್ರ ಪ್ರೀತಿಸು ಅಂತೆಲ್ಲ ಬಾಲಕಿಗೆ ಕಿರುಕುಳ ನೀಡಿದ್ದರು.
ಇದರಿಂದ ನೊಂದ ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ತನಿಖೆ ನಡೆಸಿದ ಮುಂಡರಗಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆರೋಪಿಯ ಆರೋಪ ರುಜುವಾತಾಗಿದ್ದರಿಂದ ಸದರಿ ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ್ ಉಮಾಪತಿ ವಾದ ಮಂಡಿಸಿದ್ದರು.
, ಅಪ್ರಾಪ್ತೆ, ಕಿರುಕುಳ, ಜೈಲು, ಬಿಇಒ, ಲೈಂಗಿಕ