ಶುಕ್ರದೆಸೆ ನ್ಯೂಸ್:-

ರಾಜ್ಯ ಸರಕಾರದಿಂದ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರು,ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಮಹತ್ವದ ಅದೇಶ.‌
ರಾಜ್ಯ ಸರಕಾರದಿಂದ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರು,ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಮಹತ್ವದ ಅದೇಶ.‌
ರಾಜ್ಯ ಸರಕಾರದಿಂದ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರು,ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಮಹತ್ವದ ಅದೇಶ.‌

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ 1ರಿಂದ 10ನೇ ತರಗತಿವರೆಗೆ ತರಗತಿವಾರು ಮಕ್ಕಳು ತರುವ ಬ್ಯಾಗ್‌ ತೂಕ ಇಂತಿಷ್ಟೇ ಇರಬೇಕೆಂದು ಮಿತಿ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ. ಜೊತೆಗೆ 1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ವರ್ಕ್) ನೀಡಬಾರದು, ಅತಿಯಾದ ತೂಕದ ಬ್ಯಾಗ್‌ನಿಂದ ಆಗುವ ಪರಿಣಾಮದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವುದು ಸೇರಿದಂತೆ 12 ಸೂಚನೆಗಳನ್ನು ನೀಡಲಾಗಿದೆ.

ಇಲಾಖೆಯ ಎಲ್ಲ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಲ್ಲಿ ಮಕ್ಕಳ ಬ್ಯಾಗ್‌ ಭಾರ ಇಳಿಸಲು ನೀಡಿರುವ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಕ್ರಮ ವಹಿಸಲು ಸೂಚಿಸಿದೆ.

ಸುತ್ತೋಲೆ ಪ್ರಕಾರ, 1 ಮತ್ತು 2ನೇ ತರಗತಿ ಮಕ್ಕಳ ಶಾಲಾ ಬ್ಯಾಗುಗಳು ಒಂದೂವರೆ ಕೆ.ಜಿಯಿಂದ ಎರಡು ಕೆಜಿ ಇರಬೇಕು. 3ರಿಂದ 5ನೇ ತರಗತಿ ಮಕ್ಕಳ ಬ್ಯಾಗುಗಳು 2ರಿಂದ 3 ಕೆ.ಜಿ ತೂಕ ಹೊಂದಿರಬೇಕು. 6ರಿಂದ 8ನೇ ತರಗತಿ ಮಕ್ಕಳ ಬ್ಯಾಗುಗಳು 3ರಿಂದ 4 ಕೆಜಿ ಹಾಗೂ 9 ಮತ್ತು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗುಗಳು 4ರಿಂದ 5 ಕೆ.ಜಿ ತೂಕ ಇರಬೇಕು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಸುತ್ರೊಲೆಯ ಪ್ರಮುಖ ಅಂಶಗಳು..

1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ ನೀಡಬಾರದು.

ನಿತ್ಯ ಬೇಕಾದ ಪುಸ್ತಕ ಮಾತ್ರ ತರಲು ಸೂಕ್ತ ವೇಳಾಪಟ್ಟಿ

1-5ನೇ ತರಗತಿಗೆ ಭಾಷೆ, ಗಣಿತ, ಪರಿಸರ ವಿಜ್ಞಾನ ವಿಷಯ ಮಾತ್ರ ಬೋಧನೆ

3-10ನೇ ತರಗತಿ ಮಕ್ಕಳಿಗೆ ಅಗತ್ಯಕ್ಕೆ ಅನುಸಾರ ಸೀಮಿತ ಪ್ರಮಾಣದಲ್ಲಿ ಮನೆಗೆಲಸ

ನೋಟ್‌ ಪುಸ್ತಕಗಳು 100 ರಿಂದ 200 ಪುಟಕ್ಕಿಂತ ಹೆಚ್ಚು ಇರಬಾರದು

ಕಡಿಮೆ ತೂಕದ ದೀರ್ಘ ಬಾಳಿಕೆಯ ಬ್ಯಾಗ್‌ ಖರೀದಿಗೆ ಪ್ರೋತ್ಸಾಹ

ಶಾಲೆಗಳಲ್ಲೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು.

ತರಗತಿವಾರು ಮಕ್ಕಳ ಬ್ಯಾಕ್‌ ತೂಕ ಎಷ್ಟಿರಬೇಕು?

ತರಗತಿ ತೂಕ

1ರಿಂದ 2 1.5-2 ಕೆ.ಜಿ
3ರಿಂದ 5 2-3 ಕೆ.ಜಿ
6ರಿಂದ 8 3-4 ಕೆ.ಜಿ
9ಮತ್ತು10 4-5 ಕೆ.ಜಿ.

ಮುಖ್ಯಾಂಶಗಳು
ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಮಹತ್ವದ ಅದೇಶ.‌, ರಾಜ್ಯ ಸರಕಾರದಿಂದ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರು

Leave a Reply

Your email address will not be published. Required fields are marked *

You missed

error: Content is protected !!