Kannada | online news portal | Kannada news online ಆಗಸ್ಟ್ 2
Search
Shukradeshe suddi Kannada | online news portal | Kannada news online
Kannada | online news portal | Kannada news online
ಸ್ವಾತಂತ್ರ್ಯ ಸಂಭ್ರಮದ ದಿನಾಚರಣೆ ಅಂಗವಾಗಿ ನಗರವೆ ಮದುವಣಗಿತ್ತಿಯಂತೆ ಕಂಗೋಳಿಸುವಂತೆ ಆಯೋಜನೆ ಮಾಡಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ ದೇವೆಂದ್ರಪ್ಪ ಕರೆ ನೀಡಿದರು.
76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುವಂತೆ ಅಧಿಕಾರಿಗಳಿಗೆ ಸಲಹೇ ನೀಡಿದರು.
ಬ್ರಿಟಿಷರ ವಿರುದ್ದ ಸೆಣಸಾಡಿ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಅರ್ಥಪೂರ್ಣವಾಗಿ ಆಚರಿಸಲಾಗುವುದು.
ಪಟ್ಟಣದ ತಾಪಂ ಸಭಾಂಗಣದಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ ದೇವೆಂದ್ರಪ್ಪ ರವರು ಸಭೆಯ ಅದ್ಯಕ್ಷತೆಯನ್ನ ವಹಿಸಿಕೊಂಡು ಮಾತನಾಡಿದರು ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನ ಚಾಚುತಪ್ಪದೆ ನಿರ್ವಹಿಸಿ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಲಹೇ ನೀಡಿದರು.
ದೇಶದ ಪ್ರತಿಯೊಬ್ಬ ನಾಗರೀಕರು ಸಹ ಗೌರವಿಸುವಂತ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಗೆ ಕಿಂಚಿತ್ತು ಲೋಪವಾಗದಂತೆ ಗೌರವಿದಿಂದ ನಡೆಸಲು ಸಿದ್ದತೆ ಮಾಡಿಕೊಳ್ಳಿ ಭಾರತ ದೇಶ ಶ್ರೀಮಂತ ರಾಷ್ಟ್ರ ನಮ್ಮ ದೇಶದಂತ ದೇಶ ಮತ್ತೊಂದಿಲ್ಲ ಇಲ್ಲಿ ಸಂಸ್ಕಾರ ಸಂಸ್ಕೃತಿಗಳ ತವರಿನ ನೆಲೆಯಾಗಿದೆ. ದೇಶಕ್ಕಾಗಿ ಪ್ರಾಣವನ್ನೆ ಬಲಿಕೊಟ್ಟಿರುವ ಮಹನೀಯರ ದೇಶ ಎಂದು ಶಾಸಕ ಬಿ.ದೇವೆಂದ್ರಪ್ಪ ಸ್ಮರಿಸಿದರು
ತಾಲ್ಲೂಕಿನ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಿದ್ದತೆ ಮಾಡಿಕೊಳ್ಳಿ ಎಂದು ಗ್ರೇಡ್ ಟು ತಹಶೀಲ್ದಾರ್ ಮಂಜಾನಂದರವರಿಗೆ ತಿಳಿಸಿದರು ಈ ಸಂದರ್ಭದಲ್ಲಿ ತಾಪಂ ಇಓ ಚಂದ್ರಶೇಖರ್. ಪ್ರಭಾರೆ ಬಿ.ಇ.ಓ ಸುರೇಶರೆಡ್ಡಿ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್.ಕಾಂಗ್ರೆಸ್ ಎಸ್ಸಿ ಘಟಕದ ಅದ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್.ಮುಖಂಡ ಜಿ ಎಚ್ ಶಂಭುಲಿಂಗಪ್ಪ.ಮುಖಂಡರಾದ ಮಹಮದ್ ಗೌಸ್ . ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ವಿವಿಧ ಸಂಘ ಸಂಸ್ಥೆ ಮುಖಂಡರು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು