ರಾಜ್ಯ ಸುದ್ದಿ
Editor m rajappa vyasagondanahalli
By shukradeshenews Kannada | online news portal |Kannada news online august 31
By shukradeshenews | published on September 5
ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಆದಿಜಾಂಬವರ ಅಭಿವೃದ್ಧಿ ಸಾಧ್ಯ
—————————–
ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿಯ ಉದ್ಯಮಶೀಲತಾ ಶಿಬಿರದಲ್ಲಿ ಆದಿಜಾಂಬವ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಏಳುಕೋಟೆಪ್ಪ ಪಾಟೀಲ್ ಕರೆ ನೀಡಿದರು.
ಹರಿಹರ: ಸೆಪ್ಟಂಬರ್ 2 ಮತ್ತು 3ರಂದು ಹರಿಹರ ನಗರದ ಪ್ರೊ. ಬಿ. ಕೃಷ್ಣಪ್ಪ ಸ್ಮಾರಕ ಭವನ ಮೈತ್ರಿ ವನ ಇಲ್ಲಿ ಶ್ರೀ ಸತೀಶ್ ಜಾರಕಿಹೊಳಿ ಫೌಂಡೇಶನ್ ಮತ್ತು ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಡಾ. ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ (ರಿ) ಕರ್ನಾಟಕ ಇವರ ನೇತೃತ್ವದಲ್ಲಿ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಹಾವೇರಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾವೇರಿ, ಆದಿಜಾಂಬವ ಅಭಿವೃದ್ಧಿ ನಿಗಮ ಜಿಲ್ಲಾ ಕಛೇರಿ ಹಾವೇರಿ, ಲಿಡ್ಕರ್ ನಿಗಮ ಹಾವೇರಿ,ಇವರ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಹಾವೇರಿ ಜಿಲ್ಲಾಮಟ್ಟದ ಉದ್ಯಮಶೀಲತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು .
ಶಿಬಿರದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆದಿಜಾಂಬವ ಯುವ ಬ್ರಿಗೇಡಿನ ರಾಜ್ಯಾಧ್ಯಕ್ಷ ಏಳುಕೊಟೆಪ್ಪ ಪಾಟೀಲ್ ಮಾತನಾಡಿ ಆದಿ ಜಾಂಬವ ಜನಾಂಗದ ಪ್ರತಿಯೊಬ್ಬ ಯುವಕರು ಕೂಡ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಆದಾಗ ಮಾತ್ರ ಆದಿ ಜಾಂಬವ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು ಈ ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿ ಬದುಕುತ್ತಿರುವ ಜನಾಂಗಗಳಲ್ಲಿ ಆದಿ ಜಾಂಬವ ಜನಾಂಗವು ಒಂದಾಗಿದ್ದು ಇದರ ಅಭಿವೃದ್ಧಿಗೆ ಜನಾಂಗದ ಪ್ರತಿಯೊಬ್ಬ ಯುವಕರು, ನೌಕರರು, ಜನಪ್ರತಿನಿಧಿಗಳು, ಉದ್ಯಮಿಗಳು ಕೈ ಜೋಡಿಸಿ ಆರ್ಥಿಕ ಶೈಕ್ಷಣಿಕ ಸಾಂಸ್ಕೃತಿಕ ರಾಜಕೀಯ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವಂತೆ ಮಾಡಿ ಸಮಾಜದ ಅಭಿವೃದ್ಧಿಯನ್ನು ಮಾತೃ ಋಣ ತೀರಿಸುವ ಕೆಲಸವನ್ನು ಮಾಡಿದಾಗ ಮಾತ್ರ ಆದಿ ಜಾಂಬವ ಜನಾಂಗ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ,
ಆ ದಿಸೆಯಲ್ಲಿ ಡಾ.ಬಾಬು
ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ (ರಿ) ಕರ್ನಾಟಕ ಸಂಘಟನೆ ನಿರಂತರವಾಗಿ ಉದ್ಯಮಶೀಲತಾ ತರಬೇತಿ ಶಿಬಿರ,IAS/KAS ಮಾರ್ಗದರ್ಶನ ಶಿಬಿರಗಳನ್ನು ಮಾಡುತ್ತ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಇದರ ಉಪಯೋಗವನ್ನು ಆದಿಜಾಂಬವ ಜನಾಂಗದ ಯುವಕರು ಸದುಪಯೋಗ ಪಡಿಸಿಕೊಂಡು ನವ ಉದ್ಯಮಿಗಳಾಗಿ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಸಾಧಿಸಿ ಜನಾಂಗದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಯುವಕರಿಗೆ ಕರೆ ನೀಡಿದರು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಉಪಸ್ಥಿತರಿದ್ದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಪ್ರೊಫೆಸರ್ ಎ ಬಿ ರಾಮಚಂದ್ರಪ್ಪ ಮಾತನಾಡಿ ಶೋಷಿತ ಜನಾಂಗಗಳು ಇಂದು ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಾಗುವುದು ಅನಿವಾರ್ಯವಾಗಿದೆ .
ಇಂತಹ ಅಭಿವೃದ್ಧಿಯನ್ನು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಸಾಹೇಬರು ತಮ್ಮ ಸೈದ್ಧಾಂತಿಕ ಚಳುವಳಿಯ ಮೂಲಕ ಇಂತಹ ಶೋಷಿತ ಸಮುದಾಯಗಳ ಶಕ್ತಿ ತುಂಬಿರುವುದು ಇಡೀ ದೇಶದಲ್ಲಿ ಮಾದರಿಯಾಗಿದೆ .ಯುವ ಬ್ರಿಗೇಡ್ ನ ರಾಜ್ಯಾಧ್ಯಕ್ಷರಾದ ಏಳುಕೋಟೆಪ್ಪ ಪಾಟೀಲ್ ಅವರು ಆದಿ ಜಾಂಬವ ಜನಾಂಗಕ್ಕೆ ಅಭಿವೃದ್ಧಿ ಶಕ್ತಿ ತುಂಬಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಯಿಂದ ಆಗಮಿಸಿದ 125 ಜನರು ನವ ಉದ್ಯಮಿಗಳಾಗಿ ಈ ದೇಶಕ್ಕೆ ಕೊಡುಗೆ ಕೊಡುವ ಆರ್ಥಿಕ ಸಬಲರಾಗಿ ಎಂದು ಶುಭ ಹಾರೈಸಿದರು
ಎರಡು ದಿನದ ಕಾರ್ಯಗಾರದಲ್ಲಿ ಹಾವೇರಿಯ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಆರ್ ಅಣ್ಣಯ್ಯ ಅವರು ಭಾಗವಹಿಸಿ ಬ್ಯಾಂಕುಗಳಿಂದ ತ್ವರಿತವಾಗಿ ಸಾಲವನ್ನು ಮಂಜೂರಿ ಮಾಡಿಸುವ ಭರವಸೆ ನೀಡಿದರು. ಬ್ಯಾಂಕುಗಳಿಂದ ಸಾಲ ಪಡೆಯುವ ಮಾರ್ಗದ ಬಗ್ಗೆ ಮತ್ತು ದಾಖಲಾತಿಗಳ ಬಗ್ಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಯುವ ಉದ್ಯಮಿಗಳನ್ನು ಉರಿದುಂಬಿಸಿದರು ಅದರ ಜೊತೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಮತ್ತು ಉದಯೋನ್ಮುಖ ಯುವ ಉದ್ಯಮಿಗಳಾದಂತ ಸಂದೀಪ್ ರಾಥೋಡ್ ಅವರು ಭಾಗವಹಿಸಿ ಉದ್ಯಮಶೀಲತೆಯ ಅವಕಾಶಗಳು ಮತ್ತು ಒಬ್ಬ ಯಶಸ್ವಿ ಉದ್ದಿಮೆಯಲ್ಲಿ ಇರಬೇಕಾದ ಗುಣಗಳ ಕುರಿತು ಮಾಹಿತಿ ನೀಡಿದರು ಇದರ ಜೊತೆಗೆ ಶ್ರೀ ಶಿವಾನಂದ್ ಎಲಿಗಾರ್ ಅವರು ಕೂಡ ಉದ್ಯಮಶೀಲತೆಯ ಹಲವಾರು ವಿಷಯಗಳನ್ನು ಕಾರ್ಯಕ್ರಮದಲ್ಲಿ ತಿಳಿಸಿ ನವ ಉದ್ಯಮಿಗಳನ್ನು ಪ್ರೋತ್ಸಾಹಿಸಿದರು.
ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಶ್ರೀಮತಿ ಮಾಲತಿ ಬೆಡಸೂರವರು ಭಾಗವಹಿಸಿ ಉದ್ಯಮದ ಕುರಿತು ಹಲವಾರು ಮುಖ್ಯ ವಿಷಯಗಳನ್ನು ತಿಳಿಸಿದಲ್ಲದೆ ಆದಿ ಜಾಂಬವ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಕುರಿತು ಇವರ ಆದ ಮಾಹಿತಿಯನ್ನು ನೀಡಿದರು ನಂತರದಲ್ಲಿ ಲೀಡ್ಕರ್ ನಿಗಮ ಹಾವೇರಿಯ ಶ್ರೀ ಕೃಷ್ಣಪ್ಪ ಯಶ್ ಅವರು ಭಾಗವಹಿಸಿ ಲಿಡ್ಕರ್ ನಿಗಮದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು ನಂತರ ಆದಿ ಜಾಂಬವ ಜನಾಂಗದ ಇತಿಹಾಸ ಸಂಸ್ಕೃತಿ ಆಚಾರ-ವಿಚಾರಗಳು ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ಕಾಲೇಜ್ ಧಾರವಾಡ ಇದರ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಮಾದೇವಪ್ಪ ದಳಪತಿಯವರು ತುಂಬಾ ಅದ್ಭುತವಾದ ಜನಾಂಗದ ಇತಿಹಾಸವನ್ನು ಕಾರ್ಯಕ್ರಮದಲ್ಲಿ ತಿಳಿಸಿದರು ಆದಿಜಾಂಬವರು ಯಾರು ಮಾತಂಗಿ ಯಾರು
ಮತಂಗೇಶ್ವರ ಯಾರು? ಮಾತಂಗೆಶ್ವರಿ ಮಾತಂಗೇಶ್ವರ ಸಂಗೀತ ಜನಕ ಮತಂಗಮನಿ ಬರೆದಿರುವ ಬೃಹದೇಶಿ ಎಂಬ ಕೃತಿಯ ಮಹತ್ವ ಮತ್ತು ಆದಿ ಜಾಂಬವ ಜನಾಂಗದ ಇತಿಹಾಸ ಸಂಸ್ಕೃತಿ ತಿಳಿಸಿ ವಚನ ಚಳುವಳಿಯಲ್ಲಿ ಮಾದರ ಚೆನ್ನಯ್ಯನ ಪಾತ್ರ ಬಸವಣ್ಣನ ಶಿಷ್ಯತ್ವ ಮತ್ತು ಉಳಿದ ಆದಿಜಾಂಬವ ಜನಾಂಗದ ಮಹಾನ್ ಪುರುಷರ ಕುರಿತು ವಿವರವಾದ ಮಾಹಿತಿಯನ್ನು ದಾಖಲೆ ಸಮೇತ ವಿವರಿಸಿ ಆದಿ ಜಾಂಬವ ಜನಾಂಗದ ಯುವ ಜಾಗೃತಿಯನ್ನು ಮೂಡಿಸಿದರು ಮತ್ತು ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಜೀವನ ಸಾಧನೆ ಕುರಿತು ವಿವರವಾದ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ತಿಳಿಸಲಾಯಿತು.
ಈ ತರಬೇತಿಯ ಯಶಸ್ವಿಗಾಗಿ ಆದಿ ಜಾಂಬವ ಯುವ ಬ್ರಿಗೇಡ್ ನ ರಾಜ್ಯ ಮುಖಂಡರುಗಳಾದ ಶ್ರೀ ರವಿ ಇಟ್ನಾಳ್ ಮತ್ತು ತುಮಕೂರು ಜಿಲ್ಲೆಯ ಮಂಜು ನಾರನಳ್ಳಿ ಅವರು ಮತ್ತು ಹನುಮಂತ ಕಡದಳ್ಳಿ ಅವರು ಜಯಕುಮಾರ್ ಕುಣಿಗಲ್ ಅವರು ಭಾಗವಹಿಸಿದ್ದರು ಮತ್ತು ಈ ತರಬೇತಿಯಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ಫಕೀರೇಶ ಬಣಕರ್ ಮತ್ತು ಜಿಲ್ಲಾ ಸಂಯೋಜಕರಾದ ಸುರೇಶ್ ಹಳ್ಳಳ್ಳಿ ಹಾವೇರಿ ತಾಲೂಕ ಅಧ್ಯಕ್ಷರಾದ ದುರ್ಗೇಶ್ ತಿಮ್ಮಣ್ಣನವರ್ ಜಿಲ್ಲಾ ಉಪಾಧ್ಯಕ್ಷರಾದ ಷಣ್ಮುಖಪ್ಪ ಇವರು ಕಾರ್ಯಕ್ರಮದಲ್ಲಿ ಹಾಜರಿದ್ದರು