Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 3
ವಿಜಯನಗರ ಜಿಲ್ಲೆ
ಚಳುವಳಿ ಹೋರಾಟಗಾರ ವಕೀಲರಾದ ಪುಣಬಗಟ್ಟೆ ನಿಂಗಣ್ಣ ನ ಶೋಕಸಾಗರದಲ್ಲಿ ಆಪಾರ ಜನಸ್ತೋಮದೊಂದಿಗೆ ಅಂತ್ಯಸಂಸ್ಕಾರ
ಹರಪನಹಳ್ಳಿ ತಾಲೂಕಿನ ಪುಣಗಟ್ಟೆ ಗ್ರಾಮದ ನಮ್ಮ ಆತ್ಮೀಯ ಸ್ನೇಹಿತರು ಮಾದಿಗ ಸಮಾಜ ಮುಖಂಡರು ವಕೀಲರು ಹೋರಾಟಗಾರ ಪುಣಬಗಟ್ಟೆ ನಿಂಗಪ್ಪ ಇವರು ದಿನಾಂಕ ಡಿಸೆಂಬರ್ -2-12-2023 ರಂದು ಸಾಯಂಕಾಲ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಿಂಗಣ್ಣ ರವರ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇವರು ಹರಪನಹಳ್ಳಿ ಪಟ್ಟಣದಲ್ಲಿ ಸಮಾಜದ ಸಭೆಯಲ್ಲಿ ಭಾಗವಹಿಸಿ ಸಾಯಂಕಾಲ 6 ಗಂಟೆಗೆ ಗ್ರಾಮಕ್ಕೆ ಹಿರೋ ಹೊಂಡ ಬೈಕ್ ನಲ್ಲಿ ತೆರಳುವಾಗ ದೇವರ ತಿಮ್ಮಲಾಪುರ ಗ್ರಾಮದ ಬಳಿ ಸಾವನ್ನಪ್ಪಿರುತ್ತಾರೆ ಎಂದು ಹೇಳಲು ವಿಷಾಧಿಸುತ್ತೆನೆ.ಆದರೆ ಬರುವ ಸಂದರ್ಭದಲ್ಲಿ ಆಪಘಾತವಾಗಿದೆಯೊ ಅಥವಾ ಸಾವು ಹೇಗಾಗಿರಬಹುದು ಎಂಬುದು ಹಲವು ಹೋರಾಟಗಾರರು ಅನುಮಾನ ವ್ಯಕ್ತವಾಗುತ್ತಿದೆ.ಯಾರಿಗೂ ಕೇಡು ಬಯಸದ ಯಾರೊಬ್ಬರಿಗು ದ್ವೇಷಿಸುವ ಜಯಮಾನ ಅವರದಲ್ಲ ಆದರೆ ಒಂದು ವೇಳೆ ಆಪಘಾತವಾಗಿದ್ದರೆ ದೇಹಕ್ಕೆ ರಕ್ತದ ಕಲೆಗಳು ಕೈಕಾಲುಗಳಿಗೆ ಪೆಟ್ಟು ಆಗಿರುವ ಗುರುತುಗಳು ಕಲೆಗಳು ಕಾಣಬೇಕಾಯಿತ್ತು.ದೇಹದಲ್ಲಿ ಇದಾವುದು ಕಂಡುಬಂದಿಲ್ಲ ಆದ್ದರಿಂದ ಯಾರಾದರೂ ನಿಂಗಣ್ಣನ ಮೇಲೆ ಹುನ್ನಾರ ನಡೆಸಿ ಹಲ್ಲೆ ಮಾಡಿರಬಹುದೆ ಎಂಬ ಅನುಮಾನಗಳು ವ್ಯಕ್ತವಾಗುತ್ತವೆ.ಆ ಬಾಗದ ಪುಣಬಗಟ್ಟೆ ನಿಂಗಪ್ಪ ಎಂದರೆ ವಿದ್ಯಾರ್ಥಿ ಸಂಘಟನೆಯಿಂದ ಮೂಲ ಕಮ್ಯುನಿಸ್ಟ್ ಹೊರಾಟದಿಂದ ಚಳವಳಿ ಮೂಲಕ ಬಂದಂತ ನಿಂಗಣ್ಣರವರು ಹೋರಾಟದ ದ್ವನಿ ಸಮಾಜದಲ್ಲಿ ಶೋಷಿತರ ಬಡವರ ದೀನದಲಿತ ಪರವಾಗಿ ದಲಿತ ಕಾರ್ಮಿಕ ವಿವಿಧ ಸಂಘಟನೆಗಳಲ್ಲಿ ಕಾನೂನು ಸಲಹೇಗಾರರಾಗಿ ಅನ್ಯಾಯದ ವಿರುದ್ದ ಗುಡುಗುವ ಬಹುತೇಕ ಹೋರಾಟಗಳಿಗೆ ಪುಷ್ಠಿ ನೀಡಿ ಪ್ರೇರಣೆಯಾಗಿದ್ದರು.ಸಮಾಜದಲ್ಲಿ ನಿತ್ಯ ನಡೆಯುವಂತ ಅನ್ಯಾಯದ ವಿರುದ್ದ ದ್ವನಿ ಎತ್ತಿ ಯುವಕರಿಗೆ ಸೈದ್ದಾಂತಿಕ ಹೋರಾಟಕ್ಕೆ ಸ್ಪೂರ್ತಿಯಾಗಿದ್ದರು ನಿಂಗಣ್ಣ ಸಾವು ಸಮಾಜಕ್ಕೆ ತುಂಬಾಲಾರದ ನಷ್ಟವಾಗಿದ್ದು ದುಃಖದ ಸಂಗತಿ ಅವರ ಆಪಾರ ಕುಟುಂಬ ಬಂಧು ಬಳಗವನ್ನು ಬಿಟ್ಟು ಆಗಲಿದ ಸ್ನೇಹಿತ ನಿಂಗಣ್ಣನವರ ಅವರ ಆತ್ಮಕ್ಕೆ ಶಾಂತಿ ಸಿಗಲಿ ದುಖತಪ್ತ ಕುಟುಂಬ ವರ್ಗದವರಿಗೆ ದುಃಖಭರಿಸುವಂತ ಶಕ್ತಿ ನೀಡಲಿ.
ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊ ಬಿ ಕೆ ಕೃಷ್ಣಪ್ಪ ರವರ . ಮತ್ತು ಬುದ್ದ. ಬಸವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಚಿಂತನೆಗಳನ್ನು ಮೈಗೂಡಿಸಿಕೊಂಡ ನಿಂಗಪ್ಪರವರು ಸೈದ್ಧಾಂತಿಕ ಹೋರಾಟಗಾರರಾಗಿದ್ದರು
ವಕೀಲರಾದ ನಿಂಗಪ್ಪ ರವರ ಅಂತ್ಯ ಸಂಸ್ಕಾರ
ದಿನಾಂಕ ಡಿಸೆಂಬರ್ 3 ರಂದು ಅವರ ಸ್ವಗ್ರಾಮ ಪುಣಬಗಟ್ಟೆ ಅವರ ಜಮೀನಿನಲ್ಲಿ ನಡೆದ ಅಂತ್ಯಸಂಸ್ಕಾರ ಶೋಕ ಸಾಗರದಲ್ಲಿ ಸಾರ್ಥಕತೆ ಮೆರೆದ ನಿಂಗಪ್ಪ ವಕೀಲರು ನಿಜಕ್ಕೂ ಕೂಡ ಇರುವಾಗ ಅತಿ ಹೆಚ್ಚು ಜನರ ಗಳಿಕೆಯಲ್ಲಿ ಎಲ್ಲಾರ ಮನಸ್ಸು ಗೆದ್ದಿದ್ದರು ಇರುವಾಗ ಆಪಾರ ಸ್ನೇಹಿತ ಬಳಗ ಗಳಿಸಿರುವುದು ಸಾಮಾನ್ಯವಲ್ಲ ಸಾಕ್ಷಿಯಂತೆ ಅವರ ಶೋಕ ಸಾಗರದಲ್ಲಿ ಹಲವು ಹೋರಾಟದ ಗೆಳೆಯರ ಬಳಗ ಎಡಪಂಥೀಯ ಹೋರಾಟಗಾರರು..ದಲಿತ ಹೋರಾಟಗಾರರು.ರೈತ ಹೋರಾಟಗಾರರು..ಕಮ್ಯುನಿಸ್ಟ್ ಹೋರಾಟಗಾರರು .ರಾಜಕೀಯ ಮುಖಂಡರು ಪತ್ರಕರ್ತರು.ಬುದ್ಧಿಜೀವಿಗಳು. ರೈತರು ಅನೇಕ ಸ್ನೇಹಿತರು.ಸಂಬಂಧಿಕರು ಬಂಧುಗಳು ರಾಜಕಾರಣಿಗಳು ಇವರ ಸಾವಿಗೆ ಸಾವಿರಾರು ಜನರು ಸಂತಾಪ ಸೂಚಿದ್ದಾರೆ.
ಶಾಸಕರುಗಳು.ಅಧಿಕಾರಿಗಳು ಸ್ನೇಹಿತರು ಬಂಧುಗಳು ಆಪಾರ ರೈತರು ಶೋಷಿತ ಸಮುದಾಯದವರು ಅವರ ಸಾವಿಗೆ ಸಂತಾಪ ಸೂಚಿದ್ದಾರೆ.
