ಶುಕ್ರದೆಸೆ ನ್ಯೂಸ್: ಅಪ್ರಾಪ್ತ ಬಾಲಕಿ ಪಲ್ಲವಿ ಶಿವಾನಂದ ಎಂಬ ಯುವತಿ ಮೇಲೆ ಕಿಡಿಗೇಡಿಗಳು ಅತ್ಯಾಚಾರ ವೇಸಗಿ ಅಮಾನುಷವಾಗಿ ಕೊಲೆ ಮಾಡಿರುವುದು ಹೆಯ್ಯ ಕೃತ್ಯ ತಪಿಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ದಸಂಸ ಪದಾಧಿಕಾರಿಗಳ ಅಗ್ರಹ. ಜಗಳೂರು ಪಟ್ಟಣದಲ್ಲಿ ದಸಂಸ ಪದಾಧಿಕಾರಿಗಳು ಶುಕ್ರವಾರ ತಾಲ್ಲೂಕು ಕಛೇರಿಗೆ ತೆರಳಿ ತಾಲ್ಲೂಕು ಸಮಿತಿಯ ವತಿಯಿಂದ ಮೊನ್ನೆ ಬೆಂಗಳೂರು ನಗರದಲ್ಲಿ ನಡೆದಿರುವ ಕುಮಾರಿ ಪಲ್ಲವಿ ಶಿವಾನಂದ ರವರ ಅತ್ಯಾಚಾರವನ್ನ ಖಂಡಿಸಿ ತಾಲ್ಲೂಕು ಕಛೇರಿ ತಹಶೀಲ್ದಾರ್ ಜಿ ಸಂತೋಷಕುಮಾರ್ ರವರಿಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ಕಿಡಿಕಾರಿದರು.ಯುವತಿಯನ್ನ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ನಾಗರೀಕ ಸಮಾಜವೆ ತಲೆತಗ್ಗಿಸಿ ಬೆಚ್ಚಿಬಿಳಿಸುವಂತಾಗಿದೆ.ಈ ಕೃತ್ಯವನ್ನು ವೇಸಗಿರುವ ಕಿಡಿಗೇಡಿಗಳುನ್ನು ಶೀಘ್ರವೆ ಕಠಿಣ ಶಿಕ್ಷೆಗೊಳಪಡಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.. ದಸಂಸ ಸಂಚಾಲಕ ಮಲೆ ಮಾಚಿಕೆರೆ ಸತೀಶ್ ಮಾತನಾಡಿ ಇಂತ ಗಂಭೀರವಾದ ಪ್ರಕರಣವನ್ನು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ತಪ್ಪಿತಸ್ಥರುನ್ನು ಶೀಘ್ರವೆ ಬಂಧಿಸಿ ಕಾನೂನು ಕ್ರಮ ಜರುಗಿಸಿ ಈ ಪ್ರಕರಣವನ್ನು ಸಿ.ಬಿ.ಐ.ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಸಂಸ ಪದಾಧಿಕಾರಿಗಳಾದ. ಧನ್ಯಕುಮಾರ್ .ಅಸಗೋಡು ಪರಶುರಾಮ್. ಉಮೇಶ್.ಹನುಮಂತಪ್ಪ. ಶಿವುಕುಮಾರ್.ತಿಮ್ಮರಾಜ.ನಾರಪ್ಪ.ಕೋಟಿ.ಜೀವನ್.ರಾಖೇಶ್ ಕುರಿ ಜೆಯ್ಯಣ್ಣ.ಚಂದ್ರಪ್ಪ. ಬಸಣ್ಣ.ಸೇರಿದಂತೆ ಮುಂತಾದವರು ಹಾಜರಿದ್ದರು.