ನಂದಿ ಬೆಟ್ಟದ ಬದಲಾಗಿ ದಾವಣಗೆರೆಯಲ್ಲಿ ಕಂದಾಯ ಆಡಳಿತ ಸಂಪುಟ ಸಭೆ ನಡೆಸಬೇಕಿದೆ:ಕಲ್ಲೇಶ್ ರಾಜ್ ಪಟೇಲ್ ಸರ್ಕಾರಕ್ಕೆ ಮನವಿ.

ಜಗಳೂರು ಸುದ್ದಿ,


ಜಗಳೂರು,ಮೇ.5:

ಪ್ರಾದೇಶಿಕ ಸಮತೋಲನ ಕಾಪಾಡಲು ಸರ್ಕಾರದ ಕಂದಾಯ ಆಡಳಿತ ವಿಭಾಗ ಮಟ್ಟದ ಸಂಪುಟ ಸಭೆಯನ್ನ ಮಧ್ಯಕರ್ನಾಟಕದ ದಾವಣಗೆರೆ ನಗರದಲ್ಲಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಎಸ್ ಎಸ್ ಮಲ್ಲಿಕಾರ್ಜುನ್,ಮಧುಬಂಗಾರಪ್ಪ,ಡಿ.ಸುಧಾಕರ್ ಅವರುಗಳು,ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡ ತರಬೇಕಿದೆ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಹಿಂದ ನಾಯಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದಂತೆ ರಾಜ್ಯದ ಮೈಸೂರು,ಕಲ್ಬುರ್ಗಿ,ಚಾಮರಾಜನಗರ,ನಂದಿಬೆಟ್ಟ,ಪ್ರದೇಶಗಳ ನಾಲ್ಕು ಕಂದಾಯ ಆಡಳಿತ ವಿಭಾಗಗಳಲ್ಲಿ ಇದೀಗ ಸಂಪುಟ ಸಭೆ ನಡೆಸಲು ಸ್ಥಳ ನಿರ್ಧರಿಸಲಾಗಿದ್ದು.ರಾಜಧಾನಿ ಬೆಂಗಳೂರಿನಿಂದ ಸಮೀಪದಲ್ಲಿರುವ ನಂದಿಬೆಟ್ಟದ ಬದಲಾಗಿ ರಾಜಧಾನಿ ವಂಚಿತ ದಾವಣಗೆರೆಯಲ್ಲಿ ಕಂದಾಯ ಆಡಳಿತ ವಿಭಾಗದ ಸಂಪುಟ ಸಭೆ ನಡೆಸುವ ಮೂಲಕ ಈ ಬಾಗದಲ್ಲಿ ಬಹು ಮುಖ್ಯವಾದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿ‌ ಮದ್ಯ ಕರ್ನಾಟಕ ದಾವಣಗೆರೆ ಬಾಗದಲ್ಲಿ ಆಡಳಿತ ಚುರುಕುಗೋಳ್ಳಲಿದೆ. .ಇದರಿಂದ ದಾವಣಗೆರೆ,ಚಿತ್ರದುರ್ಗ,ಶಿವಮೋಗ್ಗ,ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಸಮರ್ಪಕ ಅನುದಾನ,ಹೊಸಹೊಸ ಯೋಜನೆಗಳ ಜಾರಿಗೆ,ಆಡಳಿತ ಯಂತ್ರ ಸುಗಮ ಮತ್ತು ಸಮಗ್ರ ಅಭಿವೃದ್ದಿಗೆ ಪೂರಕವಾಗಲಿದೆ.


ಸೆಕೆಂಡ್ ರಾಜಧಾನಿ ದಾವಣಗೆರೆ ನಗರವನ್ನಾಗಿ ಘೋಷಿಸಲು ಎಲ್ಲಾ‌ ಆರ್ಹತೆಗಳು ಇವೆ ಇಂತ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಂಪುಟ ಸಭೆ ನಡೆಸಲು ಮಾನ್ಯ ಮುಖ್ಯಂತ್ರಿಗಳಿಗೆ ಮನವಿ ಮಾಡುವಂತೆ ದಾವಣಗೆರೆ ಕ್ಷೇತ್ರದ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ್ ರವರಿಗೆ ಪತ್ರಿಕೆ ಹೇಳಿಕೆ‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಲೇಶ್ ರಾಜ್ ಪಟೇಲ್ ಪುತ್ರ ಅಭಿಷೇಕ್ ಪಟೇಲ್ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!