ಪರಿಶಿಷ್ಟ ಜಾತಿ ಮನೆ ಮನೆ ಸಮೀಕ್ಷೆಯಲ್ಲಿ ಉಪ ಜಾತಿಗಳ ದಾಖಲೀಕರಣ ಸ್ಪಷ್ಟವಾಗಿ ಆಗಲಿ.
“”
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸಮೀಕ್ಷೆ ಸಮಯದಲ್ಲಿ ಮಾಹಿತಿ ದಾರರು ತನ್ನ ಉಪ ಜಾತಿ ಹೇಳಿದ್ದಾನೆ. ಆದರೆ ಗಣತಿದಾರರು ಮತ್ತೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಪದ ಪ್ರಯೋಗ ಮಾಡಿ ಗೊಂದಲಗಳನ್ನು ಸೃಷ್ಟಿಸಿದ್ದರು. ಆ ಊರಿನ ಸ್ವಯಂ ಸೇವಕರು ಫೋನಾಯಿಸಿ ಸಮಸ್ಯೆ ಬಗೆಹರಿಸಲು ಕೇಳಿದರು. ಆವಾಗ ಗಣತಿದಾರರಿಗೆ ಹೇಳಿದೆ, ಪ್ರಾಥಮಿಕವಾಗಿ ಕುಟುಂಬದಾರರು ತನ್ನ ಉಪ ಜಾತಿಯನ್ನು ನೇರವಾಗಿ ಹೇಳಿದಾಗ ಅದರ ಕೋಡ್ ಮಾತ್ರ ದಾಖಲಿಸಬೇಕೆಂದು ತಿಳಿಸಿದೆ. ಒಂದುವೇಳೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಹೇಳಿದಾಗ ಮಾತ್ರವೇ ಈ ಜೆನೆರಿಕ್ ಪದಗಳಿವೆ ಅವರ ಸಾಂಪ್ರದಾಯಿಕ ಮೂಲ ಜಾತಿಗಳ ಕೋಡ್ ದಾಖಲೀಕರಣ ಮಾಡಬೇಕು. ಈ ಮಾಹಿತಿಯನ್ನು ಹೇಳಿದ ಮೇಲೆ ಗಣತಿದಾರರು ತಮ್ಮ ಮುಖ್ಯ ಮೇಲ್ವಿಚಾರಣೆ ಅಧಿಕಾರಿಯನ್ನು ಸಂವಾದ ಮಾಡಿಸಿದಾಗ ಅವರೂ ಸಹ ನಾನು ಹೇಳಿದ ರೀತಿಯಲ್ಲೇ ಉತ್ತರ ನೀಡಿದರು.
ಅನೇಕ ಕಡೆಗಳಲ್ಲಿ ಇಂತಹ ಗೊಂದಲಗಳು ಸಾಮಾನ್ಯವಾಗಿ ಕಾಣುತ್ತದೆ. ಗಣತಿದಾರರು ನೇರವಾಗಿ ಉಪ ಜಾತಿಗಳ ಹೆಸರನ್ನು ಹೇಳಿದಾಗ ಅದನ್ನು ದಾಖಲಿಸಬೇಕು.
ಸಮೀಕ್ಷೆಯಲ್ಲಿ ಭಾಗವಹಿಸಿದ ಗಣತಿದಾರರನ್ನು ಕೇವಲ ಸೌಜನ್ಯದಿಂದ ಕಾಣಬೇಕು. ಅದನ್ನು ಬಿಟ್ಟು ಹೂವಿನ ಹಾರ ಹಿಡಿದು ಸ್ವಾಗತಿಸುವ ಹುಚ್ಚಾಟ ಕೈ ಬಿಡಿ. ಇದು ಸ್ವಜನಪಕ್ಷಪಾತ ಮತ್ತು ಪರೋಕ್ಷವಾಗಿ ಒತ್ತಡ ಹೇರಿದಂತಾಗುತ್ತದೆ.
ಮೊಬೈಲ್ ಆಫ್ ಮೂಲಕ ಮಾಡುವುದು ಒಳ್ಳೆಯದು ಕೆಲವು ಸಲ ತಾಂತ್ರಿಕವಾಗಿ ಸಮಸ್ಯೆ ಬರುವುದು ಸಹಜ. ಅದನ್ನು ಆಗಾಗ ನಿಯಂತ್ರಣ ಸಮಿತಿ ಸರಿಪಡಿಸಲು ಮುಂದಾಗಬೇಕು.
ಚಾಮರಾಜನಗರ ತಾಲೂಕಿನ ಕೆಲವು ಭಾಗಗಳಲ್ಲಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ದೂರಿದ್ದಾರೆ. ಯಾವ ಕಾರಣಕ್ಕೂ ಈ ಮಾದರಿಯಲ್ಲಿ ದತ್ತಾಂಶವನ್ನು ಸಂಗ್ರಹಿಸುವ ಹೊಣೆಗಾರಿಕೆಗಳನ್ನು ಆಯೋಗ ನೀಡಿಲ್ಲ.
ರಾಜ್ಯದಲ್ಲಿರುವ ವಲಸೆ ಪರಿಶಿಷ್ಟ ಜಾತಿ ಜನರಿಗೆ ಬೇರೆ ರಾಜ್ಯದ ಆಧಾರ್ ಕಾರ್ಡ್ ಮೇಲೆ ಮಾಹಿತಿಗಳನ್ನು ಸಂಗ್ರಹಿಸಲು ಆಯೋಗ ಅವಕಾಶ ನೀಡಿಲ್ಲ.
ಪರಿಶಿಷ್ಟ ಜಾತಿಗಳ ಜನರ ತಲೆ ಎಣಿಕೆ ಆಯೋಗದ ಪ್ರಾಥಮಿಕ ಕಾರ್ಯವಾದರೂ, ಕುಟುಂಬ ದಾರರು ಕಡ್ಡಾಯವಾಗಿ 42 ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗಬೇಕು. ಆವಾಗ ಅವರವರ ಜಾತಿಗಳ ದತ್ತಾಂಶ ಗುಣಾತ್ಮಕ ಸ್ವರೂಪದಲ್ಲಿ ಮೂಡುತ್ತದೆ.
ಯಾವುದೇ ಮಾಹಿತಿಯನ್ನು ಮುಚ್ಚಿಡದೆ ಮುಕ್ತವಾಗಿ ಗಣತಿದಾರರು ಬಂದಾಗ ಎಲ್ಲಾ ಉಪ ಜಾತಿಗಳು ನೀಡಬೇಕು.
ಒಂದೇ ಕುಟುಂಬದಲ್ಲಿ ಉದಾಹರಣೆ ಬೇರೆ ಬೇರೆ ಉಪಜಾತಿಗಳ ಪತಿ ಪತ್ನಿ ಇದ್ದಾಗ, ಗಣತಿದಾರರು ಎರಡು ಉಪಾಯ ಅನುಸರಿಸಬೇಕು.
- ತಂದೆಯ ಜಾತಿ ಮಕ್ಕಳಿಗೆ ಬರುತ್ತದೆ. ಆವಾಗ ತಂದೆ ಜೊತೆಯಲ್ಲಿ ಇನ್ನುಳಿದ ಕುಟುಂಬ ಸದಸ್ಯರು ಪರಿಪೂರ್ಣ ಮಾಹಿತಿ ದಾಖಲೆ ಮಾಡಬೇಕು.
2.ಇದೆ ಕುಟುಂಬ ಪತ್ನಿಯು ಪರಿಶಿಷ್ಟ ಜಾತಿ ಬೇರೊಂದು ಉಪ ಜಾತಿಯವಳಾದರೆ ಅವಳನ್ನು ಪ್ರತ್ಯೇಕವಾಗಿ ದಾಖಲಿಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ.
3.ಅಥವಾ ಒಂದೇ ಕುಟುಂಬದಲ್ಲಿ ಗಂಡಸಿಗೆ ಇಬ್ಬರು ಮಡದಿಯರು ಇಬ್ಬರಿದ್ದರೆ, ಒಂದೇ ಸೂರಿನಡಿ ವಾಸಿಸುತ್ತಿದ್ದರೆ ಅವರನ್ನು ಅನುಕ್ರಮವಾಗಿ ಮೊದಲ ಹೆಂಡತಿ ಅವರು ಮಕ್ಕಳು ತರುವಾಯ ಎರಡನೇ ಹೆಂಡತಿ ಮತ್ತು ಅವಳ ಮಕ್ಕಳು ದಾಖಲಿಸಬೇಕು. ಇದು ದತ್ತಾಂಶವನ್ನು ಸಂಗ್ರಹಿಸುವ ಸಲುವಾಗಿ ಅನುಸರಿಸಬೇಕಾದ ಮಾದರಿ.
ಸುಳ್ಳು ಜಾತಿಗಳ ಹಾವಳಿಗೆ ಕಡಿವಾಣ ಹಾಕಿ.
ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಜನರಲ್ಲದವರು ತಮ್ಮ ಜಾತಿಯನ್ನು ತಿರುಚಿ ಸಮಾನಾಂತರ ಪದಗಳಡಿ ಬರೆಸಿದರೆ ಅಂತಹ ದಾಖಲೆ ವಿರುದ್ಧ ಮಾಹಿತಿಗಳನ್ನು ತಿಳಿದವರು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿ. ಸಾಧ್ಯವಾದರೆ ಅದನ್ನು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಬಂಧಿಸಿದಂತೆ ಸಹಾಯಕ ಕಂದಾಯ ಅಧಿಕಾರಿ ಇಲ್ಲವೆ ಉಪ ಕಂದಾಯ ಅಧಿಕಾರಿ ಅವರಿಗೆ ದೂರು ದಾಖಲು ಮಾಡುವುದು ಒಳ್ಳೆಯದು.
ಈ ಸಮೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯುವ ಅಥವಾ ಸಾಮಾನ್ಯ ವರ್ಗದವರಿಗೆ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ . ಹಾಗೆಯೇ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮಾಹಿತಿಗಳನ್ನು ಸ್ವೀಕರಿಸಲು ಆಯೋಗ ಸಮ್ಮತಿಸಿಲ್ಲ. ಒಂದುವೇಳೆ ಗಣತಿದಾರರು ಪಡೆದರೂ ಅದು ಅಸಿಂಧು ಆಗುತ್ತದೆ ಎಂದು ಪರಿಶಿಷ್ಟ ಜಾತಿ ಜನರು ಪರಿಭಾವಿಸತಕ್ಕದ್ದು.
ರಾಜ್ಯ ಸರ್ಕಾರ ಕೇವಲ ಮಾದಿಗ ಮತ್ತು ಅದರ ಉಪಜಾತಿಯ ದೃಷ್ಟಿಯಿಂದ ಮನೆ ಮನೆ ಸಮೀಕ್ಷೆ ಆರಂಭಿಸಿಲ್ಲ. ಇದು 101 ಉಪ ಜಾತಿಗಳ ಸಾಂವಿಧಾನಿಕ ಹಕ್ಕನ್ನು ನಿರ್ಧಾರ ಮಾಡಲು ನೀಡಲಾಗಿದೆ. ಆದುದರಿಂದ ಪರಿಶಿಷ್ಟ ಜಾತಿಯ ಸರ್ವರೂ ಮುಕ್ತವಾಗಿ ಭಾಗವಹಿಸಿ, ನಿಮ್ಮ ಸಾಂವಿಧಾನಿಕ ಹಕ್ಕನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ತಮ್ಮಲ್ಲಿ ಪ್ರೀತಿಯ ವಿನಂತಿ.
ಇಂತು ತಮ್ಮ ವಿಶ್ವಾಸಿ
ದಾಸನೂರು ಕೂಸಣ್ಣ.
