69 ಅಡಿ ಮುಖ್ಯ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಜೂ.9 ರಂದು ಪ್ರಗತಿ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ.


ಜಗಳೂರು,ಜೂ.7:ಪಟ್ಟಣದ ಮುಖ್ಯ ರಸ್ತೆ 69 ಅಡಿ ವಿಸ್ತರಣೆಗೆ ಆಗ್ರಹಿಸಿ ಜೂ.9 ರಂದು ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಎಂದು ಪ್ರಗತಿ ಪರ ಸಂಘಟನೆ ಮುಖಂಡ ಆರ್.ಓಬಳೇಶ್ ಕರೆ‌ನೀಡಿದರು.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಕುರಿತು ನಡೆಸಿದ ಪ್ರಗತಿ ಪರ ಸಂಘಟನೆಗಳು ಪೂರ್ವಭಾವಿ ಸಭೆ ನಡೆಸಲಾಯಿತು.

ಬಹುದಿನಗಳ ಕನಸಾಗಿರುವ ರಾಜ್ಯ ಹೆದ್ದಾರಿ -65 ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿದ್ದು.ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿಗೆ ಶಾಸಕ ಬಿ.ದೇವೇಂದ್ರಪ್ಪ ಅವರ ನಿರ್ಧಾರ ಸ್ವಾಗತರ್ಹ,ಆದರೆ ಇಕ್ಕೆಲಗಳಲ್ಲಿನ ಸರ್ಕಾರಿ ಮಳಿಗೆಗಳಲ್ಲಿನ ವರ್ತಕರು ಸ್ವಯಂಪ್ರೇರಿತವಾಗಿ ಸರ್ಕಾರಿ ನಿಯಾಮವಳಿ ಉಲ್ಲಂಘಿಸಿ ಕೇವಲ 30ರಿಂದ 40ಅಡಿ ವಿಸ್ತರಣೆಗೆ ತೆರವುಗೊಳಿಸುತ್ತಿರುವುದು ಭವಿಷ್ಯದಲ್ಲಿ ಪಟ್ಟಣ ಅಭಿವೃದ್ದಿಗೆ ಮಾರಕವಾಗಿದೆ.ಇದರಿಂದ ಸಾರ್ವಜನಿಕರಿಗೆಅನ್ಯಾಯವಾಗುತ್ತಿದೆ.ಜಿಲ್ಲಾಧಿಕಾರಿಗಳು,ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಹೊರಾಟಗಾರ ನಾಗಲಿಂಗಪ್ಪ ಮಾತನಾಡಿ,ಅನಧಿಕೃತವಾಗಿ ಕಟ್ಟಡಗಳನ್ನು ಸರ್ಕಾರಿ ಜಾಗಗಳಲ್ಲಿ ಅತಿಕ್ರಮಣಗೊಳಿಸಿಕೊಂಡು ದಶಕಗಳಿಂದ ಲಾಭಗಳಿಸಿದ ವರ್ತಕರು ಮುಖ್ಯ ರಸ್ತೆ ವಿಸ್ತರಣೆಯಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರದ ನಿಯಮಪಾಲಿಸದೆ ನಿಗದಿತ ಅಳತೆಯಿಲ್ಲದೆ ತಮಗಿಷ್ಟ ಬಂದ ರೀತಿಯಲ್ಲಿ ಕಟ್ಟಡ ತೆರವುಗೊಳಿಸುವ ಮೂಲಕ ತಮ್ಮ ಭದ್ರತೆ ಕಾಪಾಡಿಕೊಳ್ಳುತ್ತಿದ್ದಾರೆ.ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಅನಿವಾರ್ಯ ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಟಿ.ಬಸವರಾಜ್ ಮಾತನಾಡಿ,ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಮುಖ್ಯರಸ್ತೆ ವಿಸ್ತರಣೆಗೊಳ್ಳದೆ ದಶಕಗಳಿಂದ ಕಿಷ್ಕಿಂದೆಯಲ್ಲಿ ಸಂಚಾರಮಾಡುವ ಮೂಲಕ ಹಲವಾರು ಸಾವು ನೋವುಗಳು ಸಂಭವಿಸಿವೆ.ಹೈಕೋರ್ಟ್ ನಲ್ಲಿ ಸಾರ್ವಜನಿಕರ ಪರವಾಗಿರುವ ಜಿಲ್ಲಾಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದೆ ತಾಲೂಕು ಕೇಂದ್ರಕ್ಕೆ ಆಗಮಿಸದೆ ಜಗಳೂರಿನ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ.ಕೂಡಲೇ ಹೊರಾಟಕ್ಕೆ ಸ್ಪಂದಿಸದಿದ್ದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ 69 ಅಡಿ ಅಗಲೀಕರಣಕ್ಕೆ ಬೆಂಬಲಿಸಿ ಜೆಸಿಬಿ ಮೂಲಕ ಕಟ್ಟಡಗಳ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವಕೀಲ ಡಿ.ಶ್ರೀನಿವಾಸ್ ಮಾತನಾಡಿ,ಪಟ್ಟಣ ದಿನೇ ದಿನೇ ಅಭಿವೃದ್ದಿಹೊಂದುತ್ತಿದೆ.ಪೂರ್ವಜರ‌ಕಾಲದಲ್ಲಿನ ಮರಗಳು,ಐತಿಹಾಸಿಕ ಪುರಾವೆಗಳು ಕಣ್ಮರೆಯಾಗುತ್ತಿವೆ.ತಾಲೂಕಿನಾದ್ಯಂತ ನೀರಾವರಿ ಯೋಜನೆಯಿಂದ ಕೆರೆಗಳು ಭರ್ತಿಯಾಗಿ ಬರದನಾಡು ಅಡಿಕೆನಾಡಾಗುತ್ತಿದೆ.ವಿಂಡ್ ಫ್ಯಾನ್ ಎಂ ಎನ್ ಸಿ ಕಂಪನಿಗಳು ತಲೆಎತ್ತಿವೆ.ರೈಲ್ವೆ ಸೇರಿದಂತೆ ತಾಲೂಕು ಅಭಿವೃದ್ದಿಯತ್ತ ದಾಪುಗಾಲು ಇಡುತ್ತಿದೆ.ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ವಿಸ್ತರಣೆ ಸರ್ಕಾರದ ನಿಯಮದಂತೆ ಅಗಲೀಕರಣಗೊಂಡು ಪ್ರಮುಖ ವೃತ್ತಗಳು ಅಭಿವೃದ್ದಿಗೊಳ್ಳಬೇಕಿದೆ ಎಂದು ಹೇಳಿದರು.

ಅಳತೆ ಪಟ್ಟಿ ಹಿಡಿದು ಪ್ರತಿಭಟನೆ:ಪ್ರಗತಿಪರ ಸಂಘಟನೆ ಮುಖಂಡರುಗಳು ಪೂರ್ವ ಭಾವಿ ಸಭೆ ನಂತರ ಮುಖ್ಯ ರಸ್ತೆ ವಿಸ್ತರಣೆ ತೆರವುಗೊಳಿಸಿದ ಮಳಿಗೆಗೂ ರಸ್ತೆಯ ಮಧ್ಯ ಭಾಗಕ್ಕೂ ಅಳತೆ ಮಾಡಿದಾಗ ಕೇವಲ 35 ಅಡಿಯಷ್ಟು ಮಾತ್ರ ಅಗಲೀಕರಣಗೊಂಡಿರುವುದು ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿ,ಜಿಲ್ಲಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ವಕೀಲರಾದ ರಂಗನಾಥ್,ರುದ್ರೇಶ್,ಭೂಪತಿ,ರುದ್ರೇಶ್,ಸಣ್ಣೋಬಯ್ಯ,ನಾಗೇಶ್,ಅಂಜಿನಪ್ಪ,ಮಹಾಂತೇಶ್,ತಿಪ್ಪೇಸ್ವಾಮಿ,ಮುಖಂಡರಾದ ರಾಜಪ್ಪ ಬುಳ್ಳೇನಹಳ್ಳಿ,ಮಹಾಲಿಂಗಪ್ಪ ಎಚ್.ಎಂ ಹೊಳೆ,ಕುಮಾರ್ ಭರಮಸಮುದ್ರ,ಮಾದಿಹಳ್ಳಿ ಮಂಜಪ್ಪ,
ಧನ್ಯಕುಮಾರ್ ಎಚ್.ಎಂ ಹೊಳೆ,ಅನಂತರಾಜ್,ತಮಲೇಹಳ್ಳಿ ಶ್ರೀನಿವಾಸ್,ನಾಗರಾಜ್,ರಮೇಶ್,ಸತ್ಯಮೂರ್ತಿ,ತಿಪ್ಪೇಸ್ವಾಮಿ,ನಜೀರ್ ಅಹಮ್ಮದ್,ಇಂದಿರಮ್ಮ,ಬಸವರಾಜ್,ಕರವೇ ಮಹಾಂತೇಶ್,ಮಂಗಳಮ್ಮ,ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!