ಸುದ್ದಿ ಜಗಳೂರು
ಜಗಳೂರು ಪಟ್ಟಣದ ಮುಖ್ಯ ರಸ್ತೆ ಅಗಲಿಕರಣ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ದ್ವಂದ್ವ ನಿಲುವು ಅನುಸರಿಸುತ್ತಿದ್ದಾರೆ. ರಸ್ತೆ ಅಗಲಿಕರಣ ಹೋರಾಟ ಸಮಿತಿ ಬೃಹತ್ ಚಳುವಳಿ ಮೂಲಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಒತ್ತಾಯ ಜನ ಆಕ್ರೋಶ .
ರಸ್ತೆ ಅಭಿವೃದ್ದಿ ಹೊರಾಟ ಸಮಿತಿ ಹೋರಾಟಗಾರರಿಂದ ಮನವಿ ಸ್ವೀಕರಿಸಿ ತಹಶೀಲ್ದಾರ್ ಭರವಸೆ ನೀಡಿದರು ಒಂದು ವಾರದಲ್ಲಿಯೆ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ 69 ಅಡಿ ರಸ್ತೆ ಅಗಲಿಕರಣ ಮಾಡಲು ಕ್ರಮಕೈಗೊಳ್ಳಲಾಗುವುದು ತಮ್ಮ ಹೋರಾಟವನ್ನ ಹಿಂಪಡೆಯುವಂತೆ ಮನವಿ ಮಾಡಿಕೊಂಡರು. .
ಜಗಳೂರಿನ ಮೊಳಕಾಲ್ಮೂರು ಮಲ್ಪೆ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ದಿಪಡಿಸಲು 20 ಕೋಟಿ ರೂಗಳಲ್ಲಿ ಕಾಮಗಾರಿ ಆರಂಭವಾಗಿ ಕಳೆದ 4 ತಿಂಗಳಾದರು ಸಹ ಸರ್ಕಾರದ ನೀಯಮದಂತೆ ರಸ್ತೆ ಅಗಲಿಕರಣ ಸರಿಯಾದ ರೀತಿ ಸಾಗುತ್ತಿಲ್ಲ ಕೇವಲ ತಾರತಮ್ಯಧೋರಣೆಯಿಂದ ಮಂದಗತಿಯಲ್ಲಿ ಸಾಗುತ್ತಿದೆ. ಎಡ ಬದಿ 69 ಅಡಿ ಬಲ ಬದಿ 69 ಅಡಿ ಅಭಿವೃದ್ದಿಪಡಿಸುವುದು ಬಿಟ್ಟು ಹಾವು ಏಣಿಯಂತೆ ಹಗ್ಗಜಗ್ಗಾಟದಂತೆ ಅಧಿಕಾರಿಗಳ ನಿರ್ಲಕ್ಷ್ಯಧೋರಣೆಯಾಗಿದೆ ಎಂದು ಹೋರಾಟ ಸಮಿತಿ ಮುಖಂಡ ವಕೀಲ ಅರ್ ಒಬಳೇಶ್ ಅಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ನಗರ ಪ್ರದೇಶ ಸಂಪೂರ್ಣವಾಗಿ ಅಭಿವೃದ್ದಿಯಾಗಬೇಕಾದರೆ ಬಹುಮುಖ್ಯವಾಗಿ ರಸ್ತೆ ಅಗಲಿಕರಣ ಅತ್ಯವಶ್ಯಕವಾಗಿದೆ ಆದರೆ ಅಧಿಕಾರಿಗಳು ನೆಪವೊಡ್ಡಿ ಕೇವಲ 40. ಮತ್ತು 30 ಅಡಿ ರಸ್ತೆ ಅಭಿವೃದ್ದಿಗೆ ಮುಂದಾಗಿರುವುದನ್ನ ಖಂಡಿಸಿ ಜಗಳೂರಿನ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಮತ್ತು ರಸ್ತೆ ಅಗಲಿಕರಣ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಿಂದ ದಸಂಸ ಪ್ರೊ ಬಿ.ಕೃಷ್ಣಪ್ಪರವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬೃಹತ್ ಹೋರಾಟಕ್ಕೆ ಚಾಲನೆ ನೀಡಲಾಯಿತು ನಂತರ ಮುಖ್ಯ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಕಾಲ್ನಡಿಗೆ ಜಾಥದ ಮೂಲಕ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತಾ ಸಾಗಿದ ಪ್ರತಿಭಟನೆಕಾರರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ಥಳದಲ್ಲಿಯೇ ಸುಡುವ ಬಿಸಿಲಿನಲ್ಲಿಯೇ ಕೆಲ ಹೊತ್ತು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸೈಯದ್ ಖಲೀಂ ಉಲ್ಲಾ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ವಕೀಲ ಆರ್ ಒಬಳೇಶ್ ಮಾತನಾಡಿದರು ರಸ್ತೆ ಅಗಲಿಕರಣಕ್ಕೆ ಸಂಬಂಧಿಸಿದಂತೆ ಲೋಕಪಯೋಗಿ ಮತ್ತು ಪಪಂ ಅಧಿಕಾರಿಗಳ ಬಳಿ ಸರಿಯಾದ ಉತ್ತರವಿಲ್ಲ ರಸ್ತೆ ಬದಿಯಲ್ಲಿ ಖಾಸಗಿ ಅಂಗಡಿ ಮುಗ್ಗಟುಗಳ ಮಾಲಿಕರುಗಳು ಬೇಕಾಬಿಟ್ಟಿಯಾಗಿ ಸರ್ಕಾರಿ ಮಳಿಗೆ ಕಟ್ಟಡಗಳನ್ನು ಹೊಡೆದು ತೆರವುಗೋಳಿಸಿ ಅವರೆ ಪುನ ಕಟ್ಟಿಕೊಂಡು ರಾಷ್ಡ್ರೀಯ ಮಹಾಯೋಜನೆಡಿಯ ರಸ್ತೆ ಅಬಿವೃದ್ದಿ ನೀಯಮವನ್ನ ಸಂಪೂರ್ಣ ಗಾಳಿಗೆ ತೂರಿದ್ದಾರೆ .ಸರ್ಕಾರಿ ಕಟ್ಟಡವನ್ನ ಖಾಸಗಿಯವರೆ ಹೊಡೆಯಲು ಅಧಿಕಾರ ಕೊಟ್ಟವರು ಯಾರು ಅವರ ಮೇಲೆ ಕಾನೂನು ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿದರು.
ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾದ್ಯಕ್ಷ ಮಹಾಲಿಂಗಪ್ಪ ಮಾತನಾಡಿ ಜಗಳೂರಿನ ನಾಗರೀಕರಿಗೆ ರಸ್ತೆ ಅಭಿವೃದ್ದಿ ವಿಚಾರದಲ್ಲಿ ಮಹಾಮೋಸಗೋಳಿಸಲು ಹೊರಟಿದ್ದಾರೆ ನಮ್ಮ ಜನರು ಸರ್ಕಾರಕ್ಕೆ ಕಟ್ಟಿದ ತೆರಿಗೆ ಹಣದಲ್ಲಿ ರಸ್ತೆ ಅಭಿವೃದ್ದಿ ಮಾಡುವ ಅಧಿಕಾರಿಗಳು ನಿಷ್ಠೆ ಮತ್ತು ಪ್ರಮಾಣಿಕತೆ ಮರೆತಿದ್ದಾರೆ .ಮುಖ್ಯ ರಸ್ತೆ ಅಯ ಬಾಗದಲ್ಲಿ ಒಂದು ಕಡೆ 30
ಅಡಿ ಮತ್ತೊಂದು ಕಡೆ 20 ಅಡಿ ಬೇಕಾ ಬಿಟ್ಟಿಯಾಗಿ ರಸ್ತೆ ಅಗಲಿಕರಣ ಕೇವಲ ಪ್ರಚಾರಕ್ಕೆ ಸಾಕ್ಷಿಯಾಗಿದೆ ವಿನಾ ಅಭಿವೃದ್ದಿಯಾಗುವ ಬದಲು ಜಗಳೂರಿನ ನಾಗರೀಕರಿಗೆ ದೂಳು ಕುಡಿಸಿ ಅಸ್ತಮಾ ರೋಗ ತಂದುಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ವಕೀಲರ ಸಂಘದ ಅದ್ಯಕ್ಷ ಮರೆನಹಳ್ಳಿ ಬಸವರಾಜ್ ಮಾತನಾಡಿ ಕಳೆದ ದಿನಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರೊಂದಿಗೆ ಸೇರಿದಂತೆ 69 ಅಡಿ ರಸ್ತೆ ಆಗಲಿಕರಣ ಶತಸಿದ್ದ ಎಂದು ಪತ್ರಿಕಾ ಹೇಳಿಕೆ ನೀಡಿ ಪ್ರಚಾರ ಮಾಡಿದಂತೆ 69 ಅಡಿ ರಸ್ತೆ ಅಭಿವೃದ್ದಿಪಡಿಸಬೇಕು ಖಾಸಗಿ ಅಂಗಡಿ ಮುಗ್ಗುಟುಗಳ ಮಾಲಿಕರು ಕೊರ್ಟ್ ಮೆಟ್ಟಿಲೇರಿದ್ದಾರೆ ಎಂದು ನೆಪಾ ಹೇಳುವುದಕ್ಕಿಂತ ತಾವುಗಳು ಏಕೆ ಅವರ ವಿರುದ್ದ ಧಾವೆ ಪ್ರಕರಣ ದಾಖಲಿಸಲಿಲ್ಲ ಅವರ ಮೂಲ ದಾಖಲಾತಿ ಪರಿಶೀಲಿಸಿ ಪರಿಹಾರ ನೀಡಿ ಇಲ್ಲ ಅಕ್ರಮವಾಗಿ ಕಟ್ಟಿಕೊಂಡವರ ವಿರುದ್ದ ಪ್ರಕರಣ ದಾಖಲಿಸಿ ರಸ್ತೆ ಅಭಿವೃದ್ದಿಪಡಿಸುವಂತೆ ಒತ್ತಾಯಿಸಿದರು.
ಅಂಬೇಡ್ಕರ್ ಪುತ್ಥಳಿ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ ರಸ್ತೆ ಅಗಲಿಕರಣ ವಿಚಾರದಲ್ಲಿ ರಾಜಕೀಯ ಬೇಡ ಅಭಿವೃದ್ದಿಯಾಗಬೇಕು 69 ಅಡಿ ರಸ್ತೆ ಹೊಡೆದು ಅಭಿವೃದ್ದಿ ಮಾಡಲು ಅಧಿಕಾರಿಗಳು ಮುಂದಾಗುವಂತೆ ತಿಳಿಸಿದರು.
ಕಿಸ್ಕೆಂದೆಯಂತ ರಸ್ತೆಯಲ್ಲಿ ಜನಸಾಮಾನ್ಯರು ಪ್ರಾಣ ಕಳೆದುಕೊಂಡಿದ್ದಾರೆ ಶೀಘ್ರವೆ ರಸ್ತೆ ಅಭಿವೃದ್ದಿಪಡಿಸದೇ ಹೋದರೆ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಲೊಕ್ಯಾನಾಯ್ಕ್ ಹಾಗೂ ಲೋಕಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ ರವರು ಹೋರಾಟಗಾರರ ಪ್ರಶ್ನೇಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ.ವಕೀಲರಾದ ಸಣ್ಣ ಒಬಯ್ಯ. ದಸಂಸ ಸಂಚಾಲಕರುಗಳಾದ ಸತೀಶ್ ಮಲೆಮಾಚಿಕೆರೆ .ಕುಬೇರಪ್ಪ. ರಾಜ್ಯ ರೈತ ಸಂಘದ ಮುಖಂಡ ಭರಮಸಮುದ್ರ ಕುಮಾರ್. ಎಸ್ ಎಪ್ ಐ. ಅನಂತರಾಜ್. ನಮ್ಮ ಕರ್ನಾಟಕ ಸೇನೆ ರಾಜ್ಯ ಮಹಿಳಾ ಸಂಚಾಲಕಿ ಸುಜಾತ. ಪ್ರಗತಿಪರ ಮುಖಂಡರು ಹಾಗೂ ಪತ್ರಕರ್ತರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ .ಧನ್ಯಕುಮಾರ್ .ಮಾದಿಹಳ್ಳಿ ಮಂಜುನಾಥ.ವಕೀಲರಾದ ರುದ್ರೇಶ್ .ತಿಪ್ಪೇಸ್ವಾಮಿ.ನಾಗೇಶ್.ಮಹಾಂತೇಶ್.ಅಂಜಿನಪ್ಪ..ಕೆ ಆರ್ ಎಸ್ ಪಕ್ಷದ ಮುಖಂಡ ಮಹಾಂತೇಶ್. ಮಹಿಳಾ ಸಂಚಾಲಕಿ ಇಂದ್ರಮ್ಮ.ಬೊಮ್ಮಕ್ಕ. ರೈತರ ಸಂಘದ ಮುಖಂಡ ತಿಪ್ಪೇಸ್ವಾಮಿ.ಮರೆನಹಳ್ಳಿ ನಾಗರಾಜ್. ಮುಖಂಡ ಬರಕತ್ ಆಲಿ .ಯುವ ಕರ್ನಾಟಕ ವೇದಿಕೆ ಮುಖಂಡ ನಜೀರ್ .ಮಲ್ಲಿಕಾರ್ಜನ. ದಲಿತ ಮುಖಂಡ ಗೌರಿಪುರದ ಸತ್ಯಮೂರ್ತಿ. ಮರೆನಹಳ್ಳಿ ಒಬಳೇಶ್ .ಕೆಇಬಿ ನಿವೃತ್ತ ನೌಕರ ಹಾಗೂ ರೈತ ಸಂಘದ ಮುಖಂಡ ಕ್ಯಾಂಪ್ ಶಿವಪ್ಪ ಸೇರಿದಂತೆ ಅನೇಕ ಹೋರಾಟಗಾರರು ವಿವಿಧ ಸಂಘಟನೆ ಪದಾಧಿಕಾರಿಗಳು ಹಾಜುರಿದ್ದರು.

