ಜಗಳೂರಿನಲ್ಲಿ ಮೊಳಗಿದ ಕರೋಕೆ ಗಾಯನ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಬಿ ದೇವೇಂದ್ರಪ್ಪರವರು ಪ್ರಥಮ.ದ್ವೀತಿಯ ತೃತೀಯ .ಮತ್ತು ಸಮಾದಾನಕರ ಒಟ್ಟು 32 ಸಾವಿರ ರೂ ಬಹುಮಾನ ಮತ್ತು ವಿಶೇಷ ಟ್ರೋಪಿ ಬಹುಮಾನ ನೀಡಿ ಪ್ರೋತ್ಸಹಿಸಿದ್ದಾರೆ.
ಸುದ್ದಿ ಜಗಳೂರು
ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಕ್ಷೇತ್ರ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟಿಸಿ ಮಾತನಾಡಿ ವಿಜೇತರಿಗೆ ಸಂಪೂರ್ಣ ಬುಹುಮಾನವನ್ನ ಅವರ ಸ್ವಂತ ಖರ್ಚಿನಿಂದ ವೇದಿಕೆ ಕಾರ್ಯಕ್ರಮದಲ್ಲಿ ವಿತರಿಸಿ ಕಲಾಪೋಷಕರಿಗೆ ಪ್ರೋತ್ಸಹ ನೀಡಿ ಶ್ಲಾಘಿಸಿದ್ದಾರೆ.


ಶಾಸಕರ ಸಲಹೇಯಂತೆ ಸ್ವರ್ಧಾಳುಗಳನ್ನ ಅಂತಿಮ ಸುತ್ತಿನವರೆಗೂ ತೀರ್ಪುಗಾರರು ಅಳೆದು ತೂಗಿ ದಾವಣಗೆರೆ ಆಶಾರವರಿಗೆ ಪ್ರಥಮ ಬಹುಮಾನ 15000 . ದ್ವೀತಿಯ ಸ್ಥಾನ ಪಡೆದ .ಜಗಳೂರಿನ ನಿಖಿತಾರವರಿಗೆ 8000 .ತೃತೀಯ ಸ್ಥಾನಕ್ಕೆ ಹಿರಿಯೂರಿನ ನಾಗವೀಣಾರವರಿಗೆ 5000 ಸಾವಿರ ಮತ್ರು ನಾಲ್ಕು ಜನ ಗಾಯಕರಾದ ಕೆಚ್ಚೆನಹಳ್ಳಿ ಪ್ರಸನ್ನ.ದಾವಣಗೆರೆ ನಿಜಗುಣ. ಹಾಲೇಶ್ . ಪ್ರೇಮಾ ರವರಿಗೆ ತಲಾ ಒಂದು ಒಂದು ಸಾವಿರ ಸಮಾಧಾನಕರ ಬಹುಮಾನ ನೀಡಿ ಕಲಾವಿದರಿಗೆ ಪ್ರೋತ್ಸಹಿಸಿದ್ದಾರೆ.
ಮನುಷ್ಯ ಒತ್ತಡದ ಬದುಕಿನ ಜಂಜಾಟದ ಮಧ್ಯೆ ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಶಾಸಕ ಬಿ.ದೇವೇಂದ್ರಪ್ಪ
ಜಗಳೂರು ಪಟ್ಟಣದ ಗುರುಭವನದಲ್ಲಿ ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಉದ್ಗಾಟಿಸಿ ವೇದಿಕೆ ಸಮಾರಂಭವನ್ನ ಕುರಿತು ಮಾತನಾಡಿದರು ಶುಕ್ರದೆಸೆ ನ್ಯೂಸ್ ಪತ್ರಿಕೆ ಮತ್ತು ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ.ರಾಜಪ್ಪನವರು ಸಮಾಜದಲ್ಲಿ ನಡೆಯುವಂತ ಸುದ್ದಿ ಸಮಾಚಾರಗಳನ್ನು ಬಿತ್ತರಿಸುವುದರ ಜೊತೆ ಜೊತೆಗೆ ಇಂತ ಸಾಂಸ್ಕೃತಿಕ ಸರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿ ತೆರೆ ಮರೆಯಲ್ಲಿರುವ ಗಾಯಕ ಗಾಯಕೀಯರನ್ನ ಮುಖ್ಯವಾಹಿನಿಗೆ ಪರಿಚಯಿಸುವಂತ ಕೆಲಸ ಶ್ಲಾಘನೀವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಸಂಗಿತ ನಮ್ಮಗಳ ಒತ್ತಡದ ಬದುಕಿಗೆ ಅತ್ಯವಶ್ಯಕವಾಗಿದ್ದು ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಸಂಗೀತ ಆಲಿಕೆ ಕುರಿತು ಯುವಕರಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಸಂಗೀತ ಗುನುಗುವುದರಿಂದ ಬಿಪಿ.ಶುಗರ್ ಕಡಿಮೆ ಮಾಡಿ ಮಾನಸಿಕ ನೆಮ್ಮದಿಗೆ ಔಷಧಿಯಿದ್ದಂತೆ ಎಂದರು.
ನನ್ನ ರಾಜಕೀಯ ಒತ್ತಡ ಬದುಕಿನ ಮಧ್ಯೆ ನಾನು ಕೂಡ ಸಂಗೀತಕ್ಕೆ ಮೊರೆಹೋಗಿದ್ದೆನೆ ಬಿಡುವಿನ ವೇಳೆಯಲ್ಲಿ ಗಾಯನದ ಮೂಲಕ ಸಂಗೀತ ಹಾಡಲು ಕಲಿಯುವ ಉತ್ಸಾಹವಿದೆ ಕ್ಲಾಸಿಕಲ್ ಸಂಗೀತ ಕಲಿಯುವೆ ಈಗಾಗಲೇ ಬ್ಲೂಟುತ್ ಮೈಕ್ ಖರಿದಿಸಿದ್ದು ಮುಂದಿನ ಬಾರಿ ಈ ವೇದಿಕೆಯಲ್ಲಿ ನಾನು ಸ್ವರ್ಧೆಗೆ ಬಾಗವಹಿಸುವೆ .ತೀರ್ಪುಗಾರರು ಶಾಸಕರೆಂದು ಮಾರ್ಕ್ ಕೊಟ್ಟು ಆಯ್ಕೆ ಮಾಡಬೇಡಿ ಪ್ರಮಾಣಿಕವಾಗಿ ನನ್ನ ಲಯಬದ್ದ ತಾಳ ಸಂಗೀತಕ್ಕೆ ಅಂಕ ನೀಡಿ ಎಂದ ಹಾಸ್ಯಮಯವಾಗಿ ಚಟಾಕಿಯೊಂದಿಗೆ ಸಂಗೀತಕ್ಕೆ ತಲೆದೂಗಿ ಉತ್ಸಾದಾಯಕ ಮಾತುಗಳನ್ನಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿ ಶುಕ್ರದೆಸೆ ನ್ಯೂಸ್ ಮೀಡಿಯಾ ಪ್ರತಿ ವರ್ಷವು ಕೂಡ ಸಂಗೀತ ಕರೋಕೆ ಗಾಯನ ಸ್ವರ್ಧೆಯನ್ನ ಏರ್ಪಡಿಸಿ ರಾಜ್ಯಮಟ್ಟದ ಗಾಯಕರನ್ನ ಕರೆತರುವ ಮೂಲಕ ಜಗಳೂರಿನ ಸಾಂಸ್ಕೃತಿಕ ಪರಂಪರೆ ಪರಿಚಯಿಸುವಂತ ಕಾರ್ಯಕ್ರಮ ನಿಜಕ್ಕೂ ಈ ವೇದಿಕೆ ಸಾಕ್ಷಿಯಾಗಿದೆ.
ಶುಕ್ರದೆಸೆ ನ್ಯೂಸ್ ಪತ್ರಿಕೆ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಸಂಗೀತ, ಕಲೆ, ಸಾಹಿತ್ಯ, ಸಂಸ್ಕೃತಿ ಅರಿವು ಮಕ್ಕಳಲ್ಲಿ ಇತ್ತಿಚಿನ ದಿನಮಾನಗಳಲ್ಲಿ ಕ್ಷೀಣಿಸುತಾ ಬರುತ್ತದೆ ಪೋಷಕರು ಮಕ್ಕಳಿಗೆ ಕೇವಲ ಅಂಕ ಗಳಿಸಲು ಒತ್ತಡ ಹೇರದಂತೆ ಕಲೆ ಹಾಗೂ ಸಂಸ್ಕೃತಿ ಬಗ್ಗೆ ಒಲವು ಮೂಡಿಸುವ ಅಗತ್ಯವಿದೆ ಎಂದರು.ನಾವು ಮಾಡುವಂತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ
ಕ್ಷೇತ್ರದ ಶಾಸಕರು ಸದಾ ಪ್ರೋತ್ಸಾಹಿಸುವುದುದು ನಮಗೆ ಸ್ಪೂರ್ತಿದಾಯಕವಾಗಿದೆ.
ಈ ಸಂದರ್ಭದಲ್ಲಿ ಪಪಂ ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಮಾಜಿ ಪಪಂ ಅದ್ಯಕ್ಷರಾದ ನಾಗೇಂದ್ರರೆಡ್ಡಿ. ರಾಜ್ಯ ಕಾಂಗ್ರೇಸ್ ಕಾರ್ಮಿಕ ಸಂಘಟನೆ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್. ಮುಖಂಡರಾದ ಕೆಚ್ಚೆನಹಳ್ಳಿ ಹನುಮಂತಣ್ಣ. ತೀರ್ಪುಗಾರರಾದ ಅಣ್ಣಪ್ಪ ಅಜೇರ್ .ಸುರೇಶ್. ಚಿತ್ರದುರ್ಗ.ಖ್ಯಾತ ಗಾಯಕ ಹಾಲೇಶ್. ಗಾಯಕ ನಾಗೇಶ್ ಹುಚ್ಚಂಗೀಪುರ .ಮುಖಂಡ ಅರ್ಜುನಪ್ಪ .ಕಾಂಗ್ರೇಸ್ ಮಹಿಳಾ ಘಟಕದ ಜಯಲಕ್ಷ್ಮೀ .ಗಾಯಕಿ ಸುಮಾ .ಮಂಜುನಾಥ .ಹಾಲೇಶ್ ಸೇರಿದಂತೆ ಮುಂತಾದವರು ಹಾಜುರಿದ್ದರು.
