ದಾವಣಗೆರೆ ಜಿಲ್ಲಾ ಸುದ್ದಿ :-ಜಗಳೂರು

editor by m.rajappa vyasagondanahalli

By shukradeshe news Kannada online news portal published September 5_9_2025

ತೋರಣಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಶಿಕ್ಷಕ ರಂಗಪ್ಪ ವೆಂಕಪ್ಪನವರಿಗೆ
ಜಿಲ್ಲಾ ಮಟ್ಟದ ಅತ್ಯತ್ತಮ ಪ್ರಶಸ್ತಿಗೆ ಆಯ್ಕೆ

2025 ನೇ ಸಾಲಿನ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಮಾಡಿ ಆದೇಶಿಸಿದೆ. ಜಗಳೂರು ತಾಲ್ಲೂಕಿನ ತೋರಣಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಸಹ ಶಿಕ್ಷಕ ರಂಗಪ್ಪ ವೆಂಕಪ್ಪನವರನ್ನ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಮಾಡಿರುವುದು ಶ್ಲಾಘನೀಯ.

ಜಿಲ್ಲಾ ಆಡಳಿತ ಹಾಗೂ ದಾವಣಗೆರೆ ಶಾಲಾ ಶಿಕ್ಷಣ ಇಲಾಖೆ ಉಪಾ ನಿರ್ದೇಶಕರ ಕಛೇರಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ದಿನಾಂಕ ಸೆ. 5 ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಆಚರಿಸಲಿರುವ ಕಾರ್ಯಕ್ರಮದಲ್ಲಿ ಜಗಳೂರಿನ ತೋರಣಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ರಂಗಪ್ಪ ವೆಂಕಪ್ಪನವರನ್ನರ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಲಿದ್ದಾರೆ..
ಶಾಲಾ ಶಿಕ್ಷಣ ಇಲಾಖೆ ಉಪಾನಿರ್ದೇಶಕರ ಕಛೇರಿ ಆದೇಶಿಸಿದೆ.
ಇದೆ ದಿನ ಸೆ. 5 ರಂದು ದಾವಣಗೆರೆ ಶ್ರೀ ಶಾಮನೂರು ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಅದ್ಯಕ್ಷತೆಯಲ್ಲಿ ಜರುಗುವ ಅದ್ದೂರಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ ರವರು ಹಾಗೂ ಸಂಸದರಾದ ಡಾ.ಪ್ರಭಾಮಲ್ಲಿಕಾರ್ಜನ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಅತ್ಯತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಶ್ರೀಯುತ ರಂಗಪ್ಪ ವೆಂಕಪ್ಪನವರು ಸುಮಾರು ವರ್ಷಗಳಿಂದ ಶಿಕ್ಷಕ ವೃತ್ತಿ ಪಾವಿತ್ರತೆಗೆ ಪ್ರಾಮಾಣಿಕ ಸೇವಾ ಕಾರ್ಯದಲ್ಲಿ ಅಮೋಘವಾದ ಸೇವೆಗೈಯುವ ಮೂಲಕ ಶಿಕ್ಷಕ ವೃತ್ತಿಯಲ್ಲಿ ತನ್ನದೆಯಾದ ಛಾಪು ಮೂಡಿಸುತಾ ಬಂದಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಪ್ರವಚನಗಳು ಸಾಂಸ್ಕೃತಿಕ ಚಟುವಟಿಕೆ .ಸ್ವಚತೆ ಶಾಲೆ ಅಭಿವೃದ್ದಿಗಾಗಿ ಶ್ರಮಿಸುತಾ ಬಂದಿರುವ ಶ್ರೀಯುತರಿಗೆ ಅತ್ಯತ್ತಮ ಪ್ರಶಸ್ತಿ ಲಭಿಸಿರುವುದು ಶ್ಲಾಘನಿಯವಾಗಿದೆ ಎಂದು ಗ್ರಾಮಸ್ಥರು ಸ್ನೇಹಿತರು ಶಿಕ್ಷಣ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಂಪಾದಕ :-ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

Leave a Reply

Your email address will not be published. Required fields are marked *

You missed

error: Content is protected !!