ಮಾಜಿ ರಾಷ್ಟ್ರಪತಿ ಮಹಾನಾಯಕ ಸರ್ವಪಲ್ಲಿ ರಾಧಕೃಷ್ಣನ್ ರವರ ಆದರ್ಶ ಮೌಲ್ಯಗಳನ್ನು ಶಿಕ್ಷಕರು ಆಳವಡಿಸಿಕೊಳ್ಳುವಂತೆ ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು.
ಸುದ್ದಿ ಜಗಳೂರು
ಶುಕ್ರವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ 137ನೇ ಡಾ.ರಾಧಕೃಷ್ಣನ್ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ರಾಧಕೃಷ್ಣನ್ ಮೌಲ್ಯಗಳನ್ನ ಆಳವಡಿಸಿಕೊಂಡು ವೃತ್ತಿ ಪಾವಿತ್ರ್ಯತೆ ಮೆರೆಯಬೇಕು ಆಧುನಿಕತೆಯಲ್ಲಿ ಅತಿಯಾದ ತಂತ್ರಜ್ಘಾನದಿಂದ ಮೊಬೈಲ್ ಸಂಸ್ಕೃತಿಯಿಂದ ಮಕ್ಕಳು ಸಂಸ್ಕಾರದಿಂದ ವಿಮುಖಗೊಂಡು ಶ್ವೇಚ್ಯಾಚಾರ ಮೆರೆದು ಕೌಟುಂಬಿಕ ವಿಘಟನೆ,ಅತ್ತೆ ಸೊಸೆಯರಲ್ಲಿ ವಿರಸ ಉಂಟಾಗಿ ಮನೆತನಗಳನ್ನು ಬೀದಿಗೆ ತರುವಂತ ಆತಂಕಕಾರಿ ಬೆಳವಣಿಗೆ ವಿಷಾಧ ವ್ಯಕ್ತಪಡಿಸಿದರು
ಶಿಕ್ಷಕರ ದಿನಾಚರಣೆ ಗುರುಶಿಷ್ಯರ ಪರಂಪರೆ ಮಹತ್ವ ನೀಡುವಂತ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.ಮನುಷ್ಯ ಯಾವುದೇ ಉನ್ನತ ಸ್ಥಾನಕ್ಕೆ ಬೆಳೆದರೂ ಸಹ ಅದರ ಹಿಂದಿನ ಪರಿಶ್ರಮ ಗುರುವಿಗೆ ಮತ್ತು ಪೋಷಕರಿಗೆ ಅಭ್ಯಾಸ ಮಾಡಿದ ಶಾಲೆಗೆ ಜನ್ಮ ನೀಡಿದ ಭೂಮಿಗೆ ಕೀರ್ತಿ ತರುವಂತ ಮಹಾನ್ ಸಾಧನೆಗೆ ಭದ್ರಬುನಾದಿಯಾಗಲಿದೆ. ಸಾಹಿತಿ ದೇವನೂರವರ ವ್ಯಾಖ್ಯೆನುದಂತೆ ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಮುಂದೊಂದು ದಿನ ಫಲ ಕೊಡುತ್ತದೆ ಎನ್ನುವುದಕ್ಕೆ ಗುರುಪರಂಪರೆ ನಾವು ನೀವುಗಳೆ ಸಾಕ್ಷಿಯಾಗಿದ್ದೆವೆ . ಶಿಕ್ಷಕರು ವೃತ್ತಿ ಪಾವಿತ್ರ್ಯತೆಗೆ ತಕ್ಕಂತೆ ಮಕ್ಕಳಿಗೆ ಉತ್ತಮ ಮೌಲ್ಯಯುತ ಸಂಸ್ಕಾರಯುತ ಶಿಕ್ಷಣ ಕಲಿಕೆ ಕ್ರಮ ಆಳವಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು..
ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳು ಬೇಸರ ತಂದಿದೆ:ಶಿಕ್ಷಕರ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು,ಶಿಸ್ತು ಕಾಪಾಡಬೇಕಾದ ಶಿಕ್ಷಕರೇ ವೇದಿಕೆ ಕಾರ್ಯಕ್ರಮದ ಮಧ್ಯೆ ಎದ್ದು ಹೋಗಿದ್ದು ಖಾಲಿ ಕುರ್ಚಿಗಳಿರುವುದು ಬೇಸರ ತಂದಿದೆ ಎಂದರು.
.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ರಾಧಕೃಷ್ಣನ್,ಸಾವಿತ್ರಿ ಭಾಯಿಫುಲೆ, ಭಾವಚಿತ್ರದೊಂದಿಗೆ ಬೆಳ್ಳಿ ಸಾರೋಟು,ಉರಿಮೆ,ತಮಟೆ,ಕಹಳೆ,ವಿವಿಧ ವಾದ್ಯವೃಂದಗಳೊಂದಿಗೆ ಮಹಾತ್ಮಗಾಂಧಿ ವೃತ್ತದ ಮೂಲಕ ವೇದಿಕೆಗೆ ಆಗಮಿಸಿತು.ಇದೇ ವೇಳೆ ಎಸ್ ಎಸ್ ಎಲ್ ಸಿ,ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ಯತ ಶ್ರೇಣಿಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ,ನಿವೃತ್ತ ಶಿಕ್ಷಕ,ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದ ನಾನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಂವಿಧಾನದಿಂದ ಶಿಕ್ಷಣ ಮತ್ತು ಮೀಸಲಾತಿ ಹಕ್ಕಿನಡಿ ನಾನು ನನ್ನ ಕುಟುಂಬ ಉನ್ನತ ಸ್ಥಾನಮಾನಕ್ಕೆ ಸಾಕ್ಷಿಯಾಗಿದ್ದೆವೆ. ನನ್ನನ್ನು ಕ್ಷೇತ್ರದ ಮತದಾರರು ಕೈಹಿಡಿದು ಶಾಸಕನನ್ನಾಗಿ ಆಯ್ಕೆಮಾಡಿರುವ ತೃಪ್ತಿ ನನಗಿದೆ. ನನ್ನ ಆಡಳಿತಾವಧಿಯಲ್ಲಿ ತಮ್ಮ ಋಣ ತೀರಿಸುವೆ.ಕ್ಷೇತ್ರದಲ್ಲಿ ಅಧಿಕಾರಿಗಳಿಂದ ಅಭಿವೃದ್ದಿ ಕೆಲಸ ನಿರೀಕ್ಷಿಸುವೆ,ಹೊರೆತು ಭಯಪಡಿಸುವ ಶಾಸಕನಲ್ಲ ಕೆಲಸ ಮಾಡುವ ಸೇವಕ —— ಬಿ.ದೇವೇಂದ್ರಪ್ಪ,ಶಾಸಕ
ಸಾಹಿತಿ ಸಹಾಯಕ ಪ್ರಾಧ್ಯಾಪಕ ಅರುಣ್ ಜೋಳದ ಕೂಡ್ಲಿಗಿ ವಿಶೇಷ ಉಪಾನ್ಯಾಸ ನೀಡಿದರು ಪ್ರಸ್ತುತ ಶಿಕ್ಷಕರ ಖಾಸಗಿ ಶಿಕ್ಷಣ ಸಂಸ್ಥೆಗಳ ಮದ್ಯೆ ಸರ್ಕಾರಿ ಶಾಲೆಗಳ ಉಳಿವಿಗೆ ದಾಖಲಾತಿ ಕಾಪಾಡುವುದು ದೊಡ್ಡ ಸವಾಲಾಗಿದೆ.ಸರ್ಕಾರಿ ಶಾಲೆಗಳ ಸಂಖ್ಯೆ ರಾಜ್ಯದಲ್ಲಿ ಶೇ.74ರಿಂದ ಶೇ.50 ಕ್ಕೆ ಇಳಿಮುಖವಾಗುತ್ತಿರುವುದು ಬೇಸರ ಸಂಗತಿ .ಜಿಲ್ಲೆಯಲ್ಲಿ 1282 ಮಕ್ಕಳು ಶಾಲೆಯಿಂದ ಹೊರಗಡೆ ಉಳಿದಿದ್ದಾರೆ.ಶಾಲೆಗಳಲ್ಲಿ ಫಲಿತಾಂಶ ಕುಸಿತಕ್ಕೆ ಶಿಕ್ಷಕರು ಮಾತ್ರ ಹೊಣೆಯಾಗದೆ ಪೋಷಕರ ಹೊಣೆಗಾರಿಕೆಯಿದೆ ಎಂದರು.ಭಾರತ ದೇಶ ಪುರಷ ಪ್ರಧಾನ ವ್ಯವಸ್ಥೆಯಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಭಾಯಿಫುಲೆ ಶಿಕ್ಷಕಿಯಾಗಿ ಮಹಿಳೆಯರಿಗೆ ಶೋಷಿತರಿಗೆ ಶಿಕ್ಷಣ ನೀಡುವ ಮೂಲಕ ಮುನ್ನಲೆಗೆ ತಂದ ಸ್ತ್ರೀ ಗೌರವಿಸಿ ಅವರ ಜಯಂತಿ ಆಚರಣೆ ಗೌರವಿಸುಂತಾಗಲಿ .
ಈ ಸಂದರ್ಭದಲ್ಲಿ ತಿಪ್ಪಮ್ಮದೇವೇಂದ್ರಪ್ಪ, ಡಿಡಿಪಿಐ ಕರಿಸಿದ್ದಪ್ಪ,ತಾ.ಪಂ ಇಓ ಕೆಂಚಪ್ಪ, ಬಿಇಓ ಹಾಲಮೂರ್ತಿ,ಬಿಆರ್ ಸಿ ಡಿಡಿ ಹಾಲಪ್ಪ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಗ್ಯಾರಂಟಿ ಸಮಿತಿ ಅಧ್ಯಕ್ಷ ಷಂಷೀರ್ ಅಹಮ್ಮದ್,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಲ್ ತಿಪ್ಪೇಸ್ವಾಮಿ,ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಪ್ಪ,ಪ್ರೌ.ಶಾ.ಶಿ.ಸಂಘದ ತಾಲೂಕು ಅಧ್ಯಕ್ಷ ಸಿ.ಮಹಾಂತೇಶ್,ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹಾಲಸ್ವಾಮಿ,ಸಮಾಜಲಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ ಹಾಗೂ ಪ.ಪಂ ಸದಸ್ಯರು,ನಿವೃತ್ತ ಶಿಕ್ಷಕರು,ಶಿಕ್ಷಕರ ಸಂಘದ ಪದಾಧಿಕಾರಿಗಳು,ನೌಕರರ ಸಂಘದ ಪದಾಧಿಕಾರಿಗಳು,ಸಿಆರ್ ಪಿ ಗಳು,ಸೇರಿದಂತೆ ಇತರರು ಇದ್ದರು.