ಲೋಕಿಕೆರೆಯಲ್ಲಿ “ಬಯೋ ಜೆಮ್ ” ನಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ…….
ದಾವಣಗೆರೆ ಸೆ. 6
ಪ್ರತಿಷ್ಠಿತ ದೇಶದ ಸಾವಯವ ಗೊಬ್ಬರ ಕಂಪನಿ ತನ್ನ ಒಂದಿಷ್ಟು ಲಾಭಾಂಶದಲ್ಲಿ ರೈತರ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರ ವಿತರಿಸಿ ದೇಶದ ಬಡ ಮಕ್ಕಳಿಗೆ ಕೈಜೋಡಿಸಿದ್ದು ಇತರೆ ಕಂಪನಿಗಳಿಗೆ ಮಾದರಿ ಕೂಡ ಎನಿಸಿತು.
ಲೋಕಿ ಕರಿಯ ಮಾರುತಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರೈತರ ಮಕ್ಕಳಿಗೆ ಅತಿ ಹೆಚ್ಚಿನ ಅಂಕ ಪಡೆದ ಸುಮಾರು 14 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ಪ್ರಮಾಣ ಪತ್ರ ವಿದ್ಯಾರ್ಥಿ ವೇತನ ನೀಡಿ ಶೈಕ್ಷಣಿಕವಾಗಿ ಸಮಾಜಮುಖಿಯಲ್ಲಿ ಅವರು ಕೂಡ ಮುಂದುವರೆಯಲು ಅನುವು ಮಾಡಿಕೊಡುವ ಕಾರ್ಯಕ್ರಮ ಜರಗಿತು.
ಬಯೋಜನ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್ ಪಾಟೀಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ಮಾತನಾಡಿದ ಅವರು ಇಡೀ ದೇಶಾದ್ಯಂತ ಎಲ್ಲಾ ರಾಜ್ಯಗಳ ಕೃಷಿ ಕಾರ್ಮಿಕ ಮಕ್ಕಳಿಗೆ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಬಯೋ ಝೆಮ್ ಕಂಪನಿಯು ಸುಮಾರು ಎರಡು ಮೂರು ಕೋಟಿಗೂ ಹೆಚ್ಚು ಒಂದಿಷ್ಟು ಲಾಭದ ಆದಾಯವನ್ನು ಬಡ ಕೃಷಿ ರೈತರ ಮಕ್ಕಳಿಗೆ ನೀಡುವ ಮೂಲಕ ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಉತ್ತೇಜಿಸುತ್ತಿದೆ. ಅಷ್ಟೇ ಅಲ್ಲ ಸರ್ಕಾರಿ ಶಾಲೆಯಲ್ಲಿ ಬಡ ಕೃಷಿ ತರ ಮಕ್ಕಳೇ ಓದುವಂತಹ ಶಾಲೆ ಆಯ್ಕೆ ಮಾಡಿಕೊಂಡು ಶಾಲೆಗೆ ಅಗತ್ಯ ಇರುವ ಪೀಠೋಪಕರಣ, ಬೋಧನಾ ಸಾಮಗ್ರಿಗಳು, ಹೀಗೆ ಅವಶ್ಯಕತೆ ಇರುವ ವಸ್ತುಗಳನ್ನ ಉಚಿತವಾಗಿ ಕೊಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಂಪನಿಯ ಟೆರಿಟರಿ ರಿಸನಲ್ ಮ್ಯಾನೇಜರ್ ಮೋಹನ್ ಕುಮಾರ್, ಫೀಲ್ಡ್ ಆಫೀಸರ್ ಗೋಪಾಲಪ್ಪ, ಲೋಕಿ ಕರಿಯ ವೆಂಕಟೇಶ್ವರ ಆಗ್ರೋ ಏಜೆನ್ಸಿ ಶಿವಣ್ಣ, ಮಂಜುನಾಥ ಆಗ್ರೋ ಫ್ಯಾಟಿಲೈಜ್ನ ರಾಮಚಂದ್ರ, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಾರ್ವತಮ್ಮ ಕವಿತಾ ಕೃಷ್ಣಮೂರ್ತಿ, ಹಿರಿಯ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪುರಂದರ ಲೋಕಿಕೆರೆ, ಶಾಲಾ ಮುಖ್ಯಶಿಕ್ಷಕ ಶ್ರೀಮತಿ ವಾಣಿಶ್ರೀ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ವಿದ್ಯಾರ್ಥಿನಿ ಕುಮಾರಿ ಸಂಜನಾ ಮತ್ತು ಸಂಗಡಿಗರಿಂದ ಪ್ರಾರ್ಥನೆ, ಪರಮೇಶ್ವರಪ್ಪ ಸ್ವಾಗತಿಸಿ ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಶಿಕ್ಷಕಿ ಶ್ರೀಮತಿ ಪಾರ್ವತಮ್ಮ ವಂದಿಸಿದರು,
ಕಾರ್ಯಕ್ರಮದಲ್ಲಿ ಲೌಕಿಕರಿಯ ಗ್ರಾಮದ ಹಿರಿಯರು ರೈತರು, ಶ್ರೀ ಮಾರುತಿ ಪ್ರೌಢಶಾಲೆ ಶಿಕ್ಷಕ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ವರದಿ ಪುರಂದರ ಲೋಕಿಕೆರೆ ಹಿರಿಯ ವರದಿಗಾರರು ದಾವಣಗೆರೆ
