
ಬಹುಮುಖ ಪ್ರತಿಭೆ, ಗಾನ ಕೋಗಿಲೆ ಹನುಮಂತ ನಾಯ್ಕ ಸಿ ಗೆ ಒಲಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಜೀವನದಲ್ಲಿ ಕಷ್ಟ, ಸಂಕಷ್ಟಗಳು ಬಂದಾಗ ಬಹಳಷ್ಟು ಜನರು ದಣಿದುಕೊಳ್ಳುತ್ತಾರೆ ಜಿಗುಪ್ಸೆ ಹೊಂದುತ್ತಾರೆ ಆದರೆ ಕೆಲವರು ಮಾತ್ರ ಆ ಕಷ್ಟಗಳನ್ನು ಹೆಜ್ಜೆಗಳನ್ನಾಗಿ ಮಾಡಿಕೊಂಡು ಯಶಸ್ಸಿನ ಮೆಟ್ಟಿಲು ಹತ್ತುತ್ತಾರೆ. ಅಂತಹ ಅಪರೂಪದವರಲ್ಲಿ ಒಬ್ಬರು ನಮ್ಮ ನಾಗರಕಟ್ಟೆಯ ಹನುಮಂತನಾಯ್ಕ ಸಿ ಶಿಕ್ಷಕರು
ಒಂದು ವರ್ಷದ ಮಗುವಿದ್ದಾಗಲೇ ಪೋಲಿಯೋ ಎಂಬ ಕಾಯಿಲೆಯಿಂದ ವಿಕಲಚೇತನರಾದರೂ, ತಂದೆ-ತಾಯಿಯ ತ್ಯಾಗ, ಗುರುಗಳ ಪ್ರೀತಿ ಹಾಗೂ ಸರಸ್ವತಿ ದೇವಿಯ ಅನುಗ್ರಹದಿಂದ ಅವರು ವಿದ್ಯಾಭ್ಯಾಸದಲ್ಲಿ ಅತ್ಯಂತ ಶಿಸ್ತಿನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಯಾಗಿ ಮುಂದುವರಿದರು. ಅವರ ತಂದೆಯವರು 3ನೇ ತರಗತಿ ವರೆಗೆ ಹೆಗಲ ಮೇಲೆ ಹೊತ್ತು ಶಾಲೆಗೆ ಕರೆದೊಯ್ದರು. ನಂತರ ಪಕ್ಕೆ ಕೋಲಿನ ಸಹಾಯದಿಂದ ನಡೆಯಲು ಕಲಿತ ಅವರು ಬಡತನ, ದೇಹದ ಅಸಮರ್ಥತೆ ಎಂಬ ಅಡೆತಡೆಗಳನ್ನು ಲೆಕ್ಕಿಸದೆ ತಮ್ಮ ಕನಸುಗಳನ್ನು ಬೆನ್ನಟ್ಟಿ ಮುಂದೆ ಸಾಗಿದರು.
ಬಿ ಎ, ಬಿ ಎಡ್, ಎಂ ಎ ಪದವಿ ಯನ್ನು ಪಡೆದಿರುವ ಇವರು 2010ರಲ್ಲಿ ಅವರು ತಮ್ಮ ಹೃದಯದಲ್ಲಿ ಬಹಳ ಇಷ್ಟಪಟ್ಟುಕೊಂಡಿದ್ದ ಶಿಕ್ಷಕ ವೃತ್ತಿ ಪಡೆಯುವ ಮೂಲಕ ಜೀವನದ ಮಹತ್ತರ ಸಾಧನೆ ಸಾಧಿಸಿದರು.
ಹನುಮಂತು ಸರ್ ಅವರು ಬಾಲ್ಯದಿಂದಲೇ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡವರು. 4ನೇ ತರಗತಿಯಿಂದಲೇ ವಿವಿಧ ಪ್ರಕಾರದ ಸಂಗೀತ,ಸಾಹಿತ್ಯ,ಲಾವಣಿ ಕೋಲಾಟ, ಪ್ರಬಂಧ ಮುಂತಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ, ಇದುವರೆಗೆ 135ಕ್ಕೂ ಹೆಚ್ಚು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದು ತಮ್ಮ ಸಾಧನೆಗೆ ಮೆರಗು ತಂದಿದ್ದಾರೆ.
ಅವರು ಕೇವಲ ಶಿಕ್ಷಕರಷ್ಟೇ ಅಲ್ಲ, ಸಮಾಜ ಸೇವಕರೂ ಹೌದು. ತಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ಹಾಗೂ ವಿಶೇಷ, ವಿಶಿಷ್ಟ, ಹೈ ಟೆಕ್ ಬೋಧನೆ ಮಾಡುತ್ತಾ ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ಅಳಿಲು ಸಹಾಯ ಮಾಡುತ್ತಾ ಬಂದಿದ್ದಾರೆ. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುತ್ತ ಸಮಾಜಸೇವೆಯಲ್ಲಿ ತೊಡಗಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ವಿಶೇಷ ಚೇತನರಾದ ಇವರು ವಿಶೇಷ ಪ್ರತಿಭೆ ಹೊಂದಿದ್ದಾರೆ ಇವರ ಸರ್ಕಾರಿ ಶಾಲೆಯ ಕಾಳಜಿ ಮಕ್ಕಳ ಗುಣ ಮಟ್ಟದ ಕಲಿಕೆ ಬೋಧನೆಯನ್ನು ಪರಿಗಣಿಸಿ
ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯು ದಿನಾಂಕ 05/09/2025 ರಂದು ದಾವಣಗೆರೆ ಯ ಶಾಮನೂರು ಶಿವ ಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ ದಲ್ಲಿ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ನೀಡಿದ್ದು ಅವರ ಜೀವನ ಸಾಧನೆಗೆ ಇನ್ನೊಂದು ಮೆರಗು ನೀಡಿದೆ
ಸದರಿ ಕಾರ್ಯಕ್ರಮದಲ್ಲಿ ಲೋಕ ಸಭಾ ಸಂಸದರು ಆದ ಡಾ ಪ್ರಭಾ ಮಲ್ಲಿಕಾರ್ಜುನ. ಮಾನ್ಯ ಶಾಸಕರಾದ ಸರ್ ಬಸವಂತಪ್ಪ. ಜಿಲ್ಲಾಧಿಕಾರಿಗಳಾದ ಡಾ ಗಂಗಾ ಧರ ಸ್ವಾಮಿ, ಜಿಲ್ಲಾ ಕಾರ್ಯ ನಿರ್ವಹಣ ಅಧಿಕಾರಿಗಳು. ಉಪ ನಿರ್ದೇಶಕರು. ಡಯಟ್ ಪ್ರಾಂಶುಪಾಲರು ಗಣ್ಯಾತಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು
ಹನುಮಂತು ಸರ್ ಅವರ ಜೀವನ ನಮಗೆ ಒಂದು ದೊಡ್ಡ ಪಾಠವನ್ನು ಕಲಿಸುತ್ತದೆ – ಇವರು ಪ್ರಶಸ್ತಿ ಸ್ವೀಕರಿಸಿ ತಮ್ಮ ಮನದಾಳದಿಂದ “ದೇಹದ ಅಸಮರ್ಥತೆ ಜೀವನದಲ್ಲಿ ಅಡೆತಡೆಯಾಗುವುದಿಲ್ಲ; ಆದರೆ ಮನಸ್ಸಿನ ಬಲ, ಪರಿಶ್ರಮ ಮತ್ತು ಧೈರ್ಯ ಇದ್ದರೆ ಯಾವ ಕನಸೂ ಸಾಧನೆಗೆ ತಡೆಗೋಡೆಯಾಗುವುದಿಲ್ಲ.”
ಎಂದು ಕಂಬನಿ ಮಿಡಿದರು
ಇವರು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ಊರು ದುಗ್ಗಮ್ಮ ಪೇಟೆ ದಾವಣಗೆರೆಯಲ್ಲಿ
ಆಂಗ್ಲ ಭಾಷ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
ಇವರ ಸಾಧನೆಯನ್ನು ಮೆಚ್ಚಿ ನೀವು ನಮ್ಮ ಸಮಾಜ ಅಮೂಲ್ಯವಾದ ಆಸ್ತಿ ಎಂದು ಅಭಿಮಾನ ಮೆಚ್ಚುಗೆ ಯಿಂದ ನಾಗರಕಟ್ಟೆಯ ಎಲ್ಲಾ ಗ್ರಾಮಸ್ಥರು ಗುರು- ಹಿರಿಯರು,ಸ್ನೇಹಿತರು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರು ಶಾಲೆಯ ಮುಖ್ಯ ಗುರುಗಳು ಸಿಬ್ಬಂದಿ ಎಸ್ ಡಿ ಎಂ ಸಿ ಅಧ್ಯಕ್ಷರು. ಸದಸ್ಯರು ಶುಭ ಕೋರಿದ್ದಾರೆ
