ನಿಮಗೆ ಸಮಾಜದ ಬಗ್ಗೆ ಏನಾದರೂ ಕಿಂಚಿತ್ತು ಕಾಳಜಿ , ಕಳಕಳಿ ಇದ್ದರೆ ಮೊದಲು ನಿಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ಹೊರಗೆ ಬಂದು ಸಮಾಜದ ಪರ ಹೋರಾಟವನ್ನು ಮಾಡಿ ನಿಮ್ಮ ವೈಯಕ್ತಿಕ ಜೀವನಕ್ಕೆ ನಿಮಗೆ ಲಾಭಾಂಶ ಬೇಕು ಅನ್ನೋದಾದ್ರೆ ಮನೆಮನೆಯಿಂದ ದೇಣಿಗೆ ಎತ್ತಿ ನಿಮಗೆ ನಾವು ಸಹಾಯವನ್ನು ಮಾಡುತ್ತೇವೆ
ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ನಮ್ಮ ತಾಲೂಕಿನ ಹಿರಿಯರಾದ ಸಮಾಜದ ಜಯದೇವ ನಾಯ್ಕ್ ಅವರೇ
ನಿಮಗೆ ಸಮಾಜದ ಬಗ್ಗೆ ಏನಾದರೂ ಕಿಂಚಿತ್ತು ಕಾಳಜಿ , ಕಳಕಳಿ ಇದ್ದರೆ ಮೊದಲು ನಿಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ಹೊರಗೆ ಬಂದು ಸಮಾಜದ ಪರ ಹೋರಾಟವನ್ನು ಮಾಡಿ ನಿಮ್ಮ ವೈಯಕ್ತಿಕ ಜೀವನಕ್ಕೆ ನಿಮಗೆ ಲಾಭಾಂಶ ಬೇಕು ಅನ್ನೋದಾದ್ರೆ ಮನೆಮನೆಯಿಂದ ದೇಣಿಗೆ ಎತ್ತಿ ನಿಮಗೆ ನಾವು ಸಹಾಯವನ್ನು ಮಾಡುತ್ತೇವೆ
ಅದೆಲ್ಲಾ ಬಿಟ್ಟು ಈ ಹೋರಾಟದ ಮಧ್ಯೆ ಕಾಂಗ್ರೆಸ್ ಬಿಜೆಪಿ ಅನ್ನೋ ಬಣ್ಣವನ್ನು ಕಟ್ಟಬೇಡಿ
ನಮ್ಮ ಸಮಾಜದ ಮುಗ್ಧ ಜನರಿಗೆ ದಾರಿ ತಪ್ಪಿಸಬೇಡಿ
ಇದು ರಾಜಕೀಯವನ್ನು ಹೊರತುಪಡಿಸಿ ಸಮಾಜದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಸಮಾಜವನ್ನು ಬಲಿಪಶು ಮಾಡ್ಲಿಕ್ಕೆ ಹೋಗಬೇಡಿ ತಾವು ಉನ್ನತ ಸ್ಥಾನದಲ್ಲಿ ಇದ್ದುಕೊಂಡು ತಮ್ಮ ವೈಯಕ್ತಿಕ ಲಾಭಕ್ಕಾಗಿ ತಮ್ಮ ರಾಜಕೀಯ ತೀಟೆಗಾಗಿ ಸಮಾಜವನ್ನು ಬಲಿ ತೆಗೆದುಕೊಳ್ಳಬೇಡಿ ಸಮಾಜ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗು ಸರಿಯಾದ ಪಾಠ ಕಲಿಸುತ್ತೇವೆ
ಈ ಹಿಂದೆ ಬಿಜೆಪಿಯವರು ಕೂಡ ಮಣ್ಣು ತಿಂದಿದ್ದಾರೆ
ತಾವು ಹಿರಿಯರಿದ್ದೀರಿ ಯಾರಾದರೂ ತಮಗೆ ಕರೆ ಮಾಡಿದಾಗ ಒಳ್ಳೆ ಸಲಹೆಯನ್ನು ಕೊಡಿ ನಿಮ್ಮ ಬಾಯಿಂದ ಎಂಥ ಪದಗಳು ಬರುತ್ತೆ ಅಂತ ಹೇಳಿದ್ರೆ ನಿಮ್ಮನ್ನು ನೋಡಿ ಈಗಿನ ಪೀಳಿಗೆ ಏನು ಕಲಿಯಬೇಕು ನಿಜವಾಗಿಯೂ ಸಮಾಜಘಾತಕರ ರೀತಿ ವರ್ತಿಸುತ್ತಿದ್ದಿರಿ ಮಿಸ್ಟರ್ ಜಯದೇವ ನಾಯಕರೆ ನಿಮ್ಮ ಹಿರಿತನಕ್ಕೆ ನಾವು ಗೌರವವನ್ನು ಕೊಟ್ಟು ಮಾತನಾಡುತ್ತಿದ್ದೆವೆ ಹೊರತು
ನಿಮ್ಮ ಯಾವ ಗೊಡ್ಡ ಬೆದರಿಕೆಗಳಿಗೂ ಹೆದರೋದಿಲ್ಲ ನಾವು ನಮ್ಮಿಂದ ನೀವು ನಿಮ್ಮಿಂದ ನಾವಲ್ಲ ಇದು ನಿಮಗೆ ತಿಳಿದಿರಲಿ ಎಂದು ಯುವಮುಖಂಡ ಧರ್ಮನಾಯ್ಕ್ ಕಿಡಿಕಾರಿದ್ದಾರೆ. ದಿನಾಂಕ ಸೆ 10 ರಂದು ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ನಡೆಯುವ ಮೀಸಲಾತಿ ಹೆಚ್ಚಳಕ್ಕಾಗಿ ಬೃಹತ್ ಹೋರಾಟಕ್ಕೆ ಸಮಾಜದ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಧರ್ಮನಾಯ್ಕ
ಸಮಾಜದ ಮುಖಂಡರು ಜಗಳುರು ತಾ! ಹುಚ್ಚಂಗಿಪುರ
