editor by m.rajappa vyasagondanahalli shukradeshe news|online portel. kannada online news portal |Kannada news online news october 10/2025

ನಿಧನ ವಾರ್ತೆ

ಜಗಳೂರು ಬ್ರೇಕಿಂಗ್ ನ್ಯೂಸ್

ಸಾಲದಬಾಧೆಯಿಂದ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಗತಿಯಾಗಿರುವ ಘಟನೆ ಜರುಗಿದೆ.

ಜಗಳೂರು ತಾಲ್ಲೂಕಿನ ಚಿಕ್ಕ ಅರೆಕೆರೆ ಗ್ರಾಮದ ತಿಪ್ಪೇರುದ್ರಪ್ಪ . ಎಂಬುವ ರೈತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಅ್ಯಕ್ಸಸ್ ಬ್ಯಾಂಕಿನಲ್ಲಿ ಸಾಲ ಮಾಡಿ ಚಿಕ್ಕ ಅರೆಕೆರೆ ಗ್ರಾಮದ ಜಮೀನಿನಲ್ಲಿ ಅಡಿಕೆ ಬೆಳೆ ಹಾಕಿದ್ದ ರೈತನಿಗೆ ಅಡಿಕೆ ಬೆಳೆ ನಷ್ಠವಾಗಿದೆ

ರೈತ ತನ್ನ ಜಮೀನಿನಲ್ಲಿ ಕೊರೆಸಲಾಗಿದ್ದ ಬೋರವೆಲ್ ಸಹ ಪೆಲಾಗಿ ಅತಿಯಾದ ಸಾಲ ಸೂಲ ಮಾಡಿಕೊಂಡು ಸಾಲಭಾದೆಯಿಂದ ಪರಿತಪ್ಪಿಸುತ್ತಿದ್ದ

ರೈತನಿಗೆ ಬೆಳೆ ಕೈಕೊಟ್ಟು ಸರಿಯಾದ ರೀತಿ ಬೆಳೆ ಪಲವತ್ತತೆ ಬರದೆ ಅಡಿಕೆ ಬೆಳೆ ಒಣಗಿಹೋಗಿದೆ ಈ ಹಿನ್ನಲೆಯಲ್ಲಿ ರೈತ ಚಿಂತೆಗೀಡಾಗಿ ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದ ರೈತ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.

ಮೊನ್ನೆ ಜಗಳೂರು ತಾಲ್ಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ರೈತ‌ ತಾನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಚಿಕ್ಕ ಅರೆಕೆರೆ ಗ್ರಾಮದ ಮತ್ತೊಬ್ಬ ರೈತ‌
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಾಲ್ಲೂಕಿನ ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ

70 ವರ್ಷದ ರೈತ ತಿಪ್ಪೇರುದ್ರಪ್ಪ ಲೇಟ್ ಹನುಮಂತಪ್ಪ ದಾವಣಗೆರೆ ಅ್ಯಕ್ಸಸ್ ಬ್ಯಾಂಕ್ ನಲ್ಲಿ ಸುಮಾರು ಲಕ್ಷ ಸಾಲ ಮಾಡಿದ್ದ ಇತ್ತಿಚಿಗೆ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ವ್ಯವಸ್ಥಾಪಕರು ನೋಟಿಸ್ ಕಳುಹಿಸಿದ ಹಿನ್ನಲೆಯಲ್ಲಿ ಸಾಲಬಾದೆ ತಾಳಲಾರದೆ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಈ ಸಂಬಂಧವಾಗಿ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪಿ.ಐ ಇನ್ಸಪಕ್ಟರ್ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!