filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಜಗಳೂರು ಬ್ರೇಕಿಂಗ್ ನ್ಯೂಸ್

ರಸ್ತೆ ಗುಂಡಿಗಳ ಕಾರುಬಾರು ರೋಸಿ ಹೋದ ವಾಹನ ಸವಾರರು ಯಾಮಾರಿದರೆ ಸಾಕು ಯಮರಾಯನ ಪಾದಕ್ಕೆ‌‌ ಸೇರುವುದು ಖಚಿತ ಸಾಮಾಜಿಕ ಕಾರ್ಯಕರ್ತ‌ ಹೊಸಕೆರೆ ಮುಕುಂದ ಆರೋಪ

ಜಗಳೂರು ಪಟ್ಟದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು ತಾಲ್ಲೂಕಿನಾದ್ಯಂತ ರಸ್ತೆಗಳು‌ ಸಂಪೂರ್ಣ ಹಾಳಾಗಿದ್ದು ದೊಡ್ಡ ದೊಡ್ಡ ತಗ್ಗು ಗುಂಡಿ‌ಗಳು ಬಿದ್ದು ವಾಹನ ಸವಾರರು ರೋಸಿಹೋಗಿದ್ದಾರೆ .

ಎರಡು ಮೂರು ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದೆ ಹೋದರೆ ವಾಹನ ಸವಾರರು ಒಕ್ಕೂರಲಿನಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ .

ತಾಲ್ಲೂಕಿನ ಗಡಿಮಾಕುಂಟೆ ಬಿಳಿಚೋಡು ಮುಖ್ಯರಸ್ತೆ ಸೇರಿದಂತೆ ವಿವಿಧ ರಸ್ತೆಗಳು‌ ತಗ್ಗು ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿವೆ.

ಸರ್ಕಾರದಿಂದ ರಸ್ತೆ ಗುಂಡಿ ಮುಚ್ಚಲು ಎರಡು ಕೋಟಿ ಅನುದಾನ ಬಂದಿದ್ದು ಕೇವಲ ಒಂದು ಟ್ರ್ಯಾಕ್ಟರ್ ಲೊಡು ಮಿಕ್ಸರ್ ಹಾಕಿ ಕೈತೊಳೆದುಕೊಂಡಿದ್ದಾರೆ ಸಂಬಂಧಿಸಿದ ಲೋಕಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ಸಂಚಾರಿಸುವ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ

ಶೀಘ್ರವೆ ರಸ್ತೆ ಗುಂಡಿಗಳನ್ನ ಸರಿಪಡಿಸದೇ ಹೋದರೆ ಉಗ್ರ ಹೋರಾಟಕ್ಕಿಳಿಯಲಾಗುವುದು ಎಂದು ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಹೊಸಕೆರೆ ಮುಕುಂದ ಎಚ್ಚರಿಕೆ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!