ಸರ್ಕಾರ ಹಣ ಖರ್ಚು ಮಾಡಿ ವೆಂಟಿಲೇಟರ್ ಖರಿದಿಸಿ ಒದಗಿಸಿದೆ ಕಾರ್ಯನಿರ್ವಹಿಸದೆ ಎನ್‌ಐಸಿಯು ವೆಂಟಿಲೇಟರ್ ಬಾಗಿಲು ಹಾಕಿ ರೋಗಿಗಳಿಗೆ ವಂಚನೆ ಸಿಬ್ಬಂದಿಗಳಿಗೆ ಕಿಡಿಕಾರಿದ ಜಿ.ಪಂ ಸಿಇಓ
ಆಸ್ಪತ್ರೆ ವಾರ್ಡ್ ಗಳಲ್ಲಿ ಬೆಡ್ ಗಳ ಸ್ವಚತೆ ಕಾಪಾಡಿ ರೋಗಿಗಳಿಗೆ ಉತ್ತಮ ವಾತವರಣ ಕಲ್ಪಿಸಿ :ಸಿಇಓ ಗಿತ್ತೆ ಮಾಧವ ವಿಠ್ಠಲ್ ರಾವ್
ಜಗಳೂರು ಸುದ್ದಿ,
ಜಗಳೂರು,ಡಿ.5:ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವ ಚಿಕಿತ್ಸೆ ಸೌಲಭ್ಯಗಳನ್ನ ನೀಡಬೇಕು ಪ್ರತಿ ವಾರ್ಡ್ ಗಳಲ್ಲಿ ಬೆಡ್ ಗಳನ್ನ ಸ್ವಚ್ಚವಾಗಿಡಿ ತುರ್ತು ಚಿಕಿತ್ಸೆ ನಂತರ ಬೆಡ್ ಗಳಿಗೆ ರೋಗಿಗಳನ್ನು ಸ್ಥಳಂತರಿಸಿ ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಕಡಕ್ ಸೂಚನೆ ನೀಡಿದರು
ಸೋಮವಾರ ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿಗೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿ. ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಜೆ.ಜೆ.ಎಂ ಯೋಜನೆ ಬಗ್ಗೆ ಜನರಿಂದ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದರು.
ನಂತರ ಜಗಳೂರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಐಸಿಯು, ಲೇಬರ್ ವಾರ್ಡ್, ರೋಗಿಗಳ ವಾರ್ಡ್, ಆಪರೇಷನ್ ಥಿಯೇಟರ್, ಫಾರ್ಮಸಿ ಕೇಂದ್ರಕ್ಕೆ ಸೇರಿದಂತೆ ವಿವಿಧ ವಿಭಾಗಳ ಪರಿಶೀಲನೆ ನಡೆಸಿ ಆಸ್ಪತ್ರೆಯ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಸಿಬ್ಬಂಧಿಗಳಿಗೆ ತರಾಟೆ ತೆಗೆದುಕೊಂಡರು.
ಬಳಕೆಯಿಲ್ಲದೆ ಬಾಗಿಲು ಹಾಕಿದ್ದ ವೆಂಟಿಲೇಟರ್ ಲ್ಯಾಬ್ ನ ಬಾಗಿಲು ತೆರೆಸಿ ವೀಕ್ಷಿಸಿ ಎನ್‌ಐಸಿಯು ವೆಂಟಿಲೇಟರ್ ಬಂದ್ ಆಗಿರುವ ಬಗ್ಗೆ ಮಾಹಿತಿ ಪಡೆದು ಒಂದು ವಾರದೊಳಗೆ ಎನ್.ಐಸಿಯು ಘಟಕ ಕಾರ್ಯನಿರ್ವಹಿಸಬೇಕು ರೋಗಿಗಳಿಗೆ ತೊಂದರೆಯಾಗದೆ ಬಳಕೆಯಾಗಬೇಕು ಎಂದು ಡಿ.ಎಚ್.ಒ ಡಾ.ಷಣ್ಮುಖಪ್ಪಗೆ ಕರೆ ಮಾಡಿ ಸೂಚನೆ ನೀಡಿದರು.
ರೋಗಿಗಳ ಯೋಗ ಕ್ಷೇಮ ವಿಚಾರಣೆ: ರೋಗಿಗಳ ವಾರ್ಡ್ ಗಳಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿದರು. ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ನಿಜಕ್ಕೂ ಸ್ವಚ್ಛವಾಗಿದೆ. ರೋಗಿಗಳು ನೈರ್ಮಲ್ಯ ಕಾಪಾಡಬೇಕು. ಪರಿಸರ ಸ್ವಚ್ಛವಾಗಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಸ್ಪತ್ರೆಯಲ್ಲಿ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡಿ, ಎಲ್ಲೆಂದರಲ್ಲಿ ಉಗುಳುವುದು, ಗಲೀಜು ಮಾಡಬೇಡಿ ಎಂದರು.
ನಂತರ ಕೊರಟಕೆರೆ ಬಳಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ವೀಕ್ಷಿಸಿ ಗುಟಮಟ್ಟ ಕಾಪಾಡಲು ತಿಳಿಸಿದರು.
ಈ ವೇಳೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಸೋಮ್ಲಾನಾಯ್ಕ ,ಎಇಇ ಸಾಧಿಕ್ ಉಲ್ಲಾ,ತಾಪಂ ಇ.ಓ ಕೆಂಚಪ್ಪ, ವೈದ್ಯರಾದ ಡಾ.ಜಯಕುಮಾರ್, ಸರ್ಜನ್ ಡಾ.ಶಾಲಿನಿ,ಸಹಾಯಕ ಇಂಜಿನಿಯರ್ ಮಹಾಂತೇಶ್, ಸಿಬ್ಬಂದಿಗಳಾದ ಏಕಾಂತಮ್ಮ, ಅಣ್ಣೇಶ್ ಸೇರಿದಂತೆ ಇತರರು ಇದ್ದರು.
