ಶಿಕ್ಷಕ ರಂಗಪ್ಪ ವೆಂಕಪ್ಪನವರಿಗೆ ಮತ್ತೊಂದು ಪ್ರಶಸ್ತಿ ಗರಿ ಬಿದರ್ ನಲ್ಲಿ ನಡೆದ ರಾಜ್ಯಮಟ್ಟದ ಸಾವಿತ್ರಿ ಭಾಪುಲೆ ಜಯಿಂತಿ ಅಂಗವಾಗಿ ವಿವಿಧ ಗಣ್ಯರು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.
ದಿನಾಂಕ _11_1_2026 ಭಾನುವಾರ ಗದಗ್ ಜಿಲ್ಲೆಯಲ್ಲೆ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾವಿತ್ರಿ ಭಾಪುಲೆ ಜಯಂತಿ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಗಳೂರು ತಾಲ್ಲೂಕಿನ ತೋರಣಗಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ರಂಗಪ್ಪ ವೆಂಕಪ್ಪನವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.
ಶ್ರೀಯುತರು ಕನ್ನಡ ಶಾಲೆ ಬಗ್ಗೆ ಆಪಾರವಾದ ಕಾಳಜಿ ವಹಿಸಿ ಶಾಲೆಯ ಅಭಿವೃದ್ದಿ ಸೇರಿದಂತೆ ಪಾಠ ಪ್ರವಚನ ಚಟುವಟಿಕೆಗಳನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಕನ್ನಡ ಶಾಲೆ ಉಳಿವಿಗೆ ಸಾಕ್ಷಿಯಾಗಿದ್ದಾರೆ.
ಶ್ರೀಯುತರು ಈ ಹಿಂದೆ ಕನ್ನಡ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿ ಸಿ.ಸಿ ಕ್ಯಾಮರ್ ಕಣ್ಣುಗಾವಲು ಆಳವಡಿಕೆ ಮಾಡಿ ಕನ್ನಡ ಶಾಲೆ ಕಾಯುವ ಕಾವಲುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಒಟ್ಟಾರೆ ಕನ್ನಡ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕ ರಂಗಪ್ಪ ವೆಂಕಪ್ಪನವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತಪಡಿಸಿ
ಕನ್ನಡ ಶಾಲಾ ಅಭಿಮಾನಿಗಳಿಂದ ಸಾರ್ವಜನಿಕರ ಸಹಾಯದಿಂದ ತೋರಣಗಟ್ಟೆ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಕಣ್ಣುಗಾವಲು ಸಿ.ಸಿ ಕ್ಯಾಮರ ಅಲ್ಲದೆ ಶಾಲೆಗೆ. 10 ಡೆಸ್ಕ್ 250 ಊಟದ ತಟ್ಟೆ. 250 ನೀರಿನ ಲೋಟ… ಹಾಗು ಒಂದು ಇಡ್ಲಿ ಸ್ಟಾಂಡ್ ಕೊಡುಗೆಯಾಗಿ ನೀಡಿ ಗ್ರಾಮೀಣ ಶಾಲೆಗ ಪೋಷಣೆಗೆ ನಿಂತ ಪೋಷಕರ ಕಾರ್ಯಕ್ಕೆ ಶರಣು ಸರಣರ್ಥಿಗಳು ಏಕೆಂದರೆ ಕನ್ನಡ ಶಾಲೆ ಎಂದರೆ ಕೆಲವರಲ್ಲಿ ಮೂಗು ಮುರಿಯುವ ಕಾಲ ಅಸಡ್ಡೆ ತೋರುವ ಕಾಕಘಟದಲ್ಲಿ ಕನ್ನಡ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಚಿಂತನೆ ನಡೆಸಿ ಬೇಕು ಬೇಡಿಕೆಗಳನ್ನ ಜನರು ಕ್ರೂಡಿಕರಿಸಿ ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತಿರುವ ಅಲ್ಲಿನ ಎಸ್ ಡಿ ಎಂ ಸಿ ಅದ್ಯಕ್ಷರು ಹಾಗೂ ಶಿಕ್ಷಕ ರಂಗಣ್ಣನವರ ಕಾರ್ಯಕ್ಕೆ ಶ್ಲಾಘನೀಯವಾದದ್ದು.
ತಾಲ್ಲೂಕಿನ ಯಾವ ಸರ್ಕಾರಿ ಶಾಲೆಯಲ್ಲಿಯು ಇಂತ ಹೈಟೆಕ್ ಸ್ಪರ್ಶ ನೀಡಿಲ್ಲ ಇದೆ ಮೊದಲ ಬಾರಿಗೆ ಗ್ರಾಮದ ಕೆಲ ಜನರ ಸಹಕಾರದಿಂದ ತೋರಣಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಸಹ ಶಿಕ್ಷಕ ರಂಗಪ್ಪ ವೆಂಕಪ್ಪನವರು ಕನ್ನಡ ಶಾಲೆಯಲ್ಲೊಂದು ಸಿ ಸಿ ಕ್ಯಾಮರದಿಂದ ಆಳವಡಿಕೆ ಮಾಡಿರುವುದರಿಂದ ಶಾಲೆಯ ರಕ್ಷಣೆ ಕೆಲ ಕನ್ನಡ ಶಾಲೆಗಳಲ್ಲಿ ನಡೆಯುವ ಗುಣಮಟ್ಟದ ಶಿಕ್ಷಣ ಮತ್ತು ಚಲನವಲನಗಳ ಮೂಲಕ ಕಾರ್ಯ ಚಟುವಟಿಕೆಗಳಿಗೆ ಚುರುಕು ಮುಟ್ಟಿಸಲು ಸಹಕಾರಿಯಾಗಿದೆ .
ಒಟ್ಟಾರೆ ತಾಲೂಕಿನಲ್ಲೇ ಪ್ರಥಮ ಬಾರಿಗೆ ತೋರಣಗಟ್ಟೆ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸಿ ಸಿ ಕ್ಯಾಮರ ಅಳವಡಿಸಿರುವುದು ಒಂದು ವಿಶಿಷ್ಠತೆಯಾಗಿದೆ ಮತ್ತು ಇಲ್ಲಿನ ಮುಖ್ಯ ಶಿಕ್ಷಕ ರಂಗಣ್ಣನವರು ಕಳೆದ ದಿನಗಳ ಹಿಂದೆ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇವರು ಮಾದರಿ ಶಾಲೆಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾರೆ ಇವರ ಕಾರ್ಯಕ್ಕೆ ಸಾರ್ವಜನಿಕ ಕ್ಷೇತ್ರ ಶಿಕ್ಷಣ ಅಧಿಕಾರಿ ಹಾಲಮೂರ್ತಿ ಸೇರಿದಂತೆ ಸಿ ಆರ್ ಪಿ ಇನ್ನಿತರೆ ಗ್ರಾಮಸ್ಥರು ಮಕ್ಕಳ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ
