ವಿಶೇಷ ವರದಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

Ediror m.rajappa vyasagondanahalli.by shukradeshe news online news portal Kannada News january 14_1_2026 davanagere (di )Davanagere

ಗಣರಾಜ್ಯೋತ್ಸವಕ್ಕೆ ಪೂರ್ವತಯಾರಿಯಾಗಿ ಅಂಬೇಡ್ಕರ್ ಪ್ರತಿಮೆ ಸ್ವಚತೆ ಮಾಡಿಸುತ್ತಿರುವ ಜಗಳೂರು ಕಾಂಗ್ರೇಸ್ ಎಸ್ಸಿ ಘಟಕದ ಅದ್ಯಕ್ಷ ಬಿ.ಮಹೇಶ್ವರಪ್ಪ ರವರ ಕಾರ್ಯ ಶ್ಲಾಘನೀಯ

ಕಾಂಗ್ರೇಸ್ ಎಸ್ಸಿ ಘಟಕದ ಅದ್ಯಕ್ಷರ ಕಾರ್ಯಕ್ಕೆ ಜನಮೆಚ್ಚುಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಸುತ್ತ ಸ್ವಚತೆ ಮಾಡಿಸಲು ಪೌರ ಕಾರ್ಮಿಕರಿಗೆ ಸಾಥ್ ನೀಡಿದ ಬಿ.ಮಹೇಶ್ವರಪ್ಪ

ದೂಳಿನಿಂದ ಕೂಡಿದ್ದ ಅಂಬೇಡ್ಕರ್ ಪ್ರತಿಮೆ ಸ್ವಚತೆ ಮಾಡಿಸಿದ ಮಹೇಶ್

ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಸ್ವಚತೆ ಮಾಡಿಸಲು ಮುಂದಾದ ನಿವೃತ್ತ ಅಧಿಕಾರಿ ಮಹೇಶ್ .ನಿತ್ಯ ವಾಹನಗಳ ಸಂಚಾರದಿಂದ ದೂಳಿನಿಂದ ಕೂಡಿದ ಪ್ರತಿಮೆಗೆ ನೀರು ಹಾಕಿಸಿ ಸ್ವಚತೆ ಮಾಡಿಸಿ ಜನರ ಮೆಚ್ಚುಗಗೆ ಪಾತ್ರರಾದ ಮಹೇಶ್ವರಪ್ಪ .

ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಈ ದೇಶದಲ್ಲಿ ಜನಿಸದೇ ಹೋಗಿದ್ದರೆ ನಾವುಗಳು ಯಾರು ಸಹ ಶಿಕ್ಷಣ ಕಲಿತು ಉನ್ನತ ಉದ್ಯೋಗಗಳನ್ನು ಪಡೆದು ಆಸ್ತಿ ಅಂತಸ್ತು ಗೌರವ ಸಿಗುತ್ತಿರಲಿಲ್ಲ ಈ ದೇಶವೇ ಒಂದು ರೀತಿ ಅನಾಗರಿಕತೆಯಿಂದ ಬಳಲುವಂತಾಗುತ್ತಿತ್ತು ಅದರಲ್ಲೂ ಅಸ್ಪೃಶ್ಯ ಸಮುದಾಯಗಳು ಆರ್ಥಿಕ .ಸಾಮಾಜಿಕ ಸಂಕಟಗಳಿಂದ ನಲುಗುತ್ತಿದ್ದವು ಎಂಬುದನ್ನ ನಾವು ಸ್ಮರಿಸಿಕೊಂಡು ಇಂತ ಮಹಾತ್ಮ ಬಾಬಾ ಸಾಹೇಬ ಅಂಬೇಡ್ಕರ್ ರವರ ಸಂವಿಧಾನ ಪ್ರತಿಯೊಬ್ಬರ ಬಾಯಿಲ್ಲಿ ನಿತ್ಯ ಆಡುವಂತೆ ಅವರ ಪ್ರತಿಮೆ ಸಹ ಕಂಗೋಳಿಸುವಂತೆ ಶುಚಿಯಾಗಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಬಿ ಮಹೇಶ್ವರಪ್ಪ

ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಜನಪಯೋಗಿ ಕಾರ್ಯಗಳ ಮೂಲಕ ಜನರ ಮನೆ ಮಾತಾಗಿರುವ ಬಿ ಮಹೇಶಣ್ಣ ಎಂದರೆ ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೆ ಚಿರಪರಿತನಾಗಿರುವ ಏಕೈಕ ವ್ಯಕ್ತಿತ್ವದ ಸನ್ನಡತೆಯ ಹೃದಯ ಶ್ರೀಮಂತಿಕೆಯ ಸಾಹುಕಾರ ಎಂದರೆ ತಪ್ಪಾಗಲಾರದು .
ಕ್ಷೇತ್ರದಲ್ಲಿ ನಡೆಯವ ಶಾಸಕ ಬಿ ದೇವೇಂದ್ರಪ್ಪರವರ ಸೂಚನೆಯಂತೆ ಸರ್ಕಾರಿ ವಿವಿಧ ಕಛೇರಿ ಕಾರ್ಯಕ್ರಮಗಳ ಬಗ್ಗೆ ಹಾಗೂ ರಾಷ್ಟ್ರೀಯ ಹಬ್ಬಗಳ ಅಚರಣೆ ಜಯಂತಿ ಮತ್ತು ಗಣರಾಜ್ಯೋತ್ಸವದಂತ ಅನೇಕ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಿ ಸಲಹೇ ಸೂಚನೆ ನೀಡುವ ಮೂಲಕ ಯಶಸ್ವಿ ಕಾರ್ಯಕ್ರಮಗಳು ನಡೆಯಲು ಇವರ ಸಹಕಾರ ಅತ್ಯಮೂಲ್ಯವಾಗಿದೆ.ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!