Editor by m.rajappa vyasagondanahalli

by shukradeshe news online portal Kannada news on published February 10_2_2026

ಜಗಳೂರು,ಫೆ.10:

. ಅಲ್ಪಸಂಖ್ಯಾತ ಸಮಾಜದವರು ಗೊಡ್ಡುಸಂಪ್ರದಾಗಳನ್ನ ಬಿಟ್ಟು ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿ‌
ಜ್ಘಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಶಿಕ್ಷಣದ ಜೊತೆಗೆ ಸಂಸ್ಕಾರ ಬಹುಮುಖ್ಯ ಶಾಸಕ ಬಿ ದೇವೇಂದ್ರಪ್ಪ.


ಜಗಳೂರು ವಿಧಾನಸಭಾ ಕ್ಷೇತ್ರದ ವಕ್ಫ್ ಸಂಸ್ಥೆಗಳ ದುರಸ್ಥೆ ಮತ್ತು ಜೀರ್ಣೋದ್ದಾರ .ನವೀಕರಣ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಅನುದಾನ ದಾಖಲೆ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಶಾಸಕ ಬಿ ದೇವೇಂದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿದರು ಕ್ಷೇತ್ರದಲ್ಲಿ ಸರ್ವಜನಾಂಗದ‌ ಶಾಂತಿಯ ತೋಟದಂತೆ ನನ್ನ ಆಡಳಿತಾವಧಿಯಲ್ಲಿ,ಜಾತ್ಯಾತೀತ ಧರ್ಮತೀತ ಸಾಮರಸ್ಯದೊಂದಿಗೆ ದೀನ,ದಲಿತರ ಶ್ರೇಯೋಭಿವೃದ್ದಿಗಾಗಿ ನೊಂದವರಿಗೆ ನೆರವು ವಿನೂತನ ಕಾರ್ಯಕ್ರಮ ತಂದಿರುವೆ .


ಕ್ಷೇತ್ರದಲ್ಲಿ ಒಳ್ಳೆಯ ಆಡಳಿತ ತರುವ ಉದ್ದೇಶದಿಂದ ಅಧಿಕಾರಿಗಳನ್ನ ತಿದ್ದಿ ತೀಡಿ ಕೆಲಸ ಮಾಡಿಸುವೆ ಅದು ಉತ್ತಮ ಆಡಳಿತ ದೃಷ್ಠಿಯಿಂದ ಹೊರೆತು ದುರುದ್ದೇಶದಿಂದಲ್ಲ.

ಯಾವುದೇ ಧರ್ಮ,ಜಾತಿಯವರು ಕಾನೂನನ್ನು ಗೌರವಿಸಬೇಕು.ಕಾನೂನು ಉಲ್ಲಂಘನೆಯನ್ನು ನಾನು ಸಹಿಸುವುದಿಲ್ಲ ಎಂದರು.ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳ ಜೊತೆಗೆ ಎಲ್ಲಾ ವರ್ಗದ ಪ್ರತಿಭೆಗಳ ಅನುಕೂಲಕ್ಕಾಗಿ ಸುಸಜ್ಜಿತ ಡಿಟಿಟಲ್ ಗ್ರಂಥಾಲಯ ನಿರ್ಮಿಸಲಾಗಿದೆ.ತಾಲ್ಲೂಕಿನ ಸ್ಪರ್ಧಾ ಆಕಾಂಕ್ಷಿಗಳು ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು

ಗೊಲ್ಡ್ ಮೆಡಲ್ ತಂದ ಜಗಳೂರಿನ ಬಂಗಾರದ ಜಿಂಕೆ ಸಮ್ರೀನ್
. ವಿವಿಯಲ್ಲಿ ಸಮ್ರೀನ್ ಅವರ ಉನ್ನತ ಶಿಕ್ಷಣದಲ್ಲಿ ಸಾಧನೆ ಪ್ರಥಮ ಸ್ಥಾನ ಗಳಿಸಿರುವುದು ಮುಸ್ಲಿಂ ಸಮುದಾಯಕ್ಕೆ ಕೀರ್ತಿ ಕಳಸಪ್ರಾಯವಾಗಿದೆ .ವಿದ್ಯಾರ್ಥಿನಿಗೆ ಸನ್ಮಾನಿಸಿ ಶಾಸಕರು ಬಣ್ಣಿಸಿದರು‌


ಪುಸ್ತಕವನ್ನ ಯಾರು ತಲೆ ತಗ್ಗಿಸಿ ಓದುತ್ತಾರೊ ಅದೆ ಪುಸ್ತಕ‌ ತಲೆ ಎತ್ತುವಂತೆ ಮಾಡುತ್ತದೆ.

ನೊಂದವರ ನೆರವಿನ ಮೂಲಕ ದೀನ ದಲಿತರ ಅಸಹಾಯಕರಿಗೆ ಸಹಾಯ ಅಸ್ತ ಚಾಚುತ್ತಿದ್ದೆವೆ
ಕ್ಷೇತ್ರದಲ್ಲಿ ಸರ್ವರ ಏಳ್ಗಿಗೆ ಶ್ರಮಿಸುವುದೆ ನಮ್ಮ ಗುರಿ
ನಮ್ಮ ಕಾಂಗ್ರೆಸ್ ಪಕ್ಷ ಮುಸ್ಲಿಂ ಮುದಾಯದ ಜೊತೆಯಾಗಿದೆ.
ಮುಸ್ಲಿಂ ಸಮುದಾಯದವರ ಜೊತೆ ಸದಾ ನಾವುಗಳು ನಿಮ್ಮೊಂದಿಗೆ ಇದ್ದೆವೆ ಶಾಸಕರು

ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಮುಸ್ಲಿಂ ಸಮುದಾಯದ ಬಡವರನ್ನು ಗುರುತಿಸಿ, ವಕ್ಪ್ ಭೋರ್ಡ ವತಿಯಿಂದ ವೃತ್ತಿ ಆಧಾರಿತ ವೈಯಕ್ತಿಕ ಸಾಲಸೌಲಭ್ಯಗಳನ್ನು ಒದಗಿಸಲು ಚರ್ಚಿಸಲಾಗಿದೆ.ದೇಶದಲ್ಲಿ ಕೆಲವರಿಂದ ಅರಾಜಕತೆ ಸೃಷ್ಟಿಯಾಗಿದ್ದು ಮತ್ತೊಬ್ಬರ ತಪ್ಪುಗಳಿಗೆ ಮುಸ್ಲಿಂ ಸಮುದಾಯವನ್ನೇ ಗುರಿಯನ್ನಾಗಿಸಿ ಕೋಲಾಹಲ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು ಕಾಂಗ್ರೇಸ್ ಗೆಲುವಿಗೆ ಮುಸ್ಲೀಂ ಭಾಂದವರ ಸಹಕಾರದಿಂದ ನಮ್ಮ ತಂದೆಯವರು ಶಾಸಕರಾಗಿ ಆಯ್ಕೆ ಮಾಡಿದ ಪ್ರತಿಫಲವಾಗಿ ನಾವು ಅಲ್ಪಸಂಖ್ಯಾತರ ಅಭಿವೃದ್ದಿಗೆ ಶ್ರಮಿಸುತ್ತಿದ್ದೆವೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಗೊಂದಲಗಳನ್ನ ನಿವಾರಿಸಿ ಕಾಂಗ್ರೆಸ್ ಗೆಲುವಿಗೆ ತಮ್ಮ ಬೆಂಬಲವೆ ಇದೀಗ ಅನುದಾನಗಳ ಮೂಲಕ ಫಲಪ್ರದವಾಗಿದೆ.
ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಬಳಿ ರೂ.16‌ ಕೋ ರೂ ಗಳಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಸ್ಥಾಪನೆ ಹಾಗೂ ಅಲ್ಪ ಸಂಖ್ಯಾತ ಜನವಸತಿ ನಿವಾಸಿಗಳಲ್ಲಿ ರಸ್ತೆ ಅಭಿವೃದ್ದಿಗೆ 5 ಕೋ ರೂ ಗಳ ಅಭಿವೃದ್ದಿ 39 ಮಸೀದಿಗಳಿಗೆ ಪ್ರತಿ 5 ಲಕ್ಷದಂತೆ ಮಸೀದಿ ಅಭಿವೃದ್ದಿಗೆ ಕ್ಷೇತ್ರದ ಶಾಸಕರ ಶಿಪಾರಸ್ಸಿನ ಮೇರೆಗೆ ಒತ್ತು ನೀಡಲಾಗಿದೆ ಮತ್ತು ಸಚಿವರಾದ ಜಮೀರ್ ಆಹಮ್ ಖಾನ್ ರವರ ಸಹಕಾರದಿಂದ ಕ್ಷೇತ್ರಕ್ಕೆ ಇದೆ ಮೊಟ್ಟಮೊದಲ ಬಾರಿ ಹೆಚ್ಚು ಅನುದಾನ ತಂದು ಅಲ್ಪಸಂಖ್ಯಾತ ಸಮುದಾಯದವರ ಏಳ್ಗಿಗೆ ನಮ್ಮ ಅಭಿವೃದ್ದಿ‌ ಕಾರ್ಯಗಳೆ ಸಾಕ್ಷಿಯಾಗಿವೆ.ಇನ್ನು ಕೂಡ ಆದ್ಯತೆ ಮೇರೆಗೆ ಮುಸ್ಲಿಂ ಸಮಾಜದ ಜನವಸತಿ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಶ್ರಮಿಸುತ್ತೆವೆ ಎಂದರು
,
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಬಂಗ್ಲೆ ಪರೀವಿಜ್. ಮುಖಂಡರಾದ ಜಾಕೀರ್ ಹುಸೇನ್,ಇಮಾಂ ಅಲಿ,ಇಕ್ಬಾಲ್ ಖಾನ್,ಮೆಹಬೂಬ್ ಅನ್ವರ್,ಖಲಂದರ್ ಖಾನ್,ಬರ್ಕತ್ ಅಲಿ,ಅಹಮ್ಮದ್ ಅಲಿ, ಲುಕ್ಮಾನ್ ಖಾನ್,ಅಹಮ್ಮದ್ ಅಲಿ,ಶಕೀಲ್ ಅಹಮ್ಮದ್,ಮುಖಂಡರಾದ ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ, ಶೇಕ್ ಅಹಮ್ಮದ್,ಮಾದಿಹಳ್ಳಿ ಸೈಯದ್ ಅಹಮ್ಮದ್,ಖಾಸಿಂ,ಆಜಾಮುಲ್ಲಾ,ಖಲೀಲ್ ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!