ಮನುಷ್ಯರಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಹಕ್ಕಿ ಪಕ್ಷಿ ಜೀವ ಸಂಕುಲಗಳಿಗೆ ತಮ್ಮ ಮನೆ ಅಂಗಳದಲ್ಲಿ ಚಿಕ್ಕ ಚಿಕ್ಕ ಮಡಿಕೆಗಳಲ್ಲಿ ನೀರು ಇಡೋಣ ಜೀವಸಂಕುಲಗಳನ್ನ ಸಂರಕ್ಷಿಸೊಣ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಮಾಲತೇಶ ಅರಸ್ ತಿಳಿಸಿದ್ದಾರೆ.
ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ನೀರಿನ ದಾಹ ಅರಸಿ ಬರುವ ಹಕ್ಕಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆಯಬಾಕಾಗಿದೆ. ಸಾರ್ವಜನಿಕ ಉದ್ಯಾನವನ ಇನ್ನಿತರೆ ಸ್ಥಳಗಳಲ್ಲಿ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಜೀವ ಸಂಕುಲಗಳ ಸಾವನ್ನಪ್ಪುತ್ತವೆ ಇತ್ತಿಚಿನ ದಿನಮಾನಗಳಲ್ಲಿ ಮನುಷ್ಯನ ಅತಿಯಾದ ಸ್ವಾರ್ಥದಿಂದ ಜೀವ ಸಂಕುಲಗಳು ಕ್ರಮೇಣ ಕ್ಷಿಣಿಸುತ್ತಿವೆ . ಪರಿಸರ ಉಳಿದರೆ ಜೀವಸಂಕುಲ ಉಳಿಯುತ್ತವೆ ಸಂಬಂಧಿಸಿದ ಪ್ರಾದೇಶಿಕ ವನ್ಯ ಜೀವಿ ಸಂರಕ್ಷಣಾ ಇಲಾಖೆಯೊಂದಿಗೆ ಕೈಜೋಡಿಸಿ ನಮ್ಮ ಅಳಿಲು ಸೇವೆ ಮಾಡೋಣ ಎಂದರು.
ಜಗಳೂರು ತಾಲ್ಲೂಕಿನಲ್ಲಿ ವಿಶೇಷ ವನ್ಯಜೀವಿ ಕೊಂಡುಕುರಿ ಪ್ರಾಣಿ ವಾಸಿಸುವ ರಂಗಯ್ಯನ ದುರ್ಗದ ವನ್ಯಜೀವಿ ಸಂರಕ್ಷಣಾ ಪ್ರದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಶೇಷವಾಗಿ ನೀರಿನ ಪಾಥಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿ ಇತರೆ ಎಲ್ಲಾ ಜೀವಸಂಕುಲಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದಾರಿದೀಪಾ ಸೇವಾ ಟ್ರಸ್ಟ್ ನ ರಾಜ್ಯಾದ್ಯಕ್ಷೆ ಸುಜಾತ ಮಾತನಾಡಿ ಆಧುನಿಕ ಕಾಲಘಟದಲ್ಲಿ ಮನುಷ್ಯರಾದ ನಾವುಗಳು ಅತಿಯಾದ ಹಣದಾಸೆಗೆ ಬಲಿಯಾಗಿ ಇತರೆ ಜೀವಸಂಕುಲಗಳ ಬಗ್ಗೆ ಗಮನಹರಿಸದೆ ಸ್ವಾರ್ಥ ಲಾಲಸೆಗೆ ಬಲಿಯಾಗಿರುವ ಅನೇಕ ರಿಯಲ್ ಎಸ್ಟಟ್ ಏಜಿನ್ಸಿಗಳು ಗುತ್ತಿಗೆದಾರರು ಇತರೆ ವರ್ಗದ ಜನ ಹಣ ಮಾಡುವುದೇ ಒಂದು ಕಾಯಕ ಎಂದು ತಿಳಿದಿದ್ದಾರೆ ಆದರೆ ಹಣ ಮಾಡುವುದರ ಜೊತೆಗೆ ಇಂತ ಸೇವಾಮನೋಭಾವನೆ ಬೆಳೆಸಿಕೊಳಲ್ಲಿ ಎಂದು ತಿಳಿಸಿದರು.
ದಾರಿದೀಪಾ ಸೇವಾ ಟ್ರಸ್ಟ್ ನ ಉಪಾದ್ಯಕ್ಷ ಮನು ಮಾತನಾಡಿ ನಾವು ಇಂತ ಸತ್ಕಾರ್ಯಗಳನ್ನ ಮಾಡುವುದರಿಂದ ನಮಗೆ ಪುಣ್ಯಪ್ರಾಪ್ತಿಯಾಗಲಿದೆ ಆದ್ದರಿಂದ ಪಟ್ಟಣದ ವಿವಿಧ ಲೇಔಟ್ ಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದರು .ಈ ಸಂದರ್ಭದಲ್ಲಿ ಜಯನ್ .ದಾರಿದೀಪಾ ಸೇವಾ ಟ್ರಸ್ಟ್ ಪ್ರಧಾನ ಕಾರ್ಯಧರ್ಶಿ ಎಸ್ ನೇತ್ರಾವತಿ.ಸಂಘಟನಾ ಕಾರ್ಯಧರ್ಶಿ ಉಮಾದೇವಿ. ಖಜಾಂಚಿ ಗಾಯಿತ್ರಿ .ಸಂಚಾಲಕರಾದ ಚೌಡಪ್ಪ.ನಿರ್ದೇಶಕರಾದ ಎಸ್ ಜಿ. ರಾಜಪ್ಪ ಸೇರಿದಂತೆ ಹಾಜುರಿದ್ದರು
