ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕಿನ ಹಣತೆ ಹಚ್ಚಿದ ದಸಂಸ ನಾಯಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ ಅಭಿಪ್ರಾಯಪಟ್ಟರು
ಜಗಳೂರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಪ್ರೊ ಬಿ.ಕೃಷ್ಣಪ್ಪರವರ 89 ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಶೋಷಿತ ಜನಾಂಗಕ್ಕಾಗಿ ದಸಂಸ ಎಂಬ ಸಾಮಾಜಿಕ ಚಳವಳಿ ಕಟ್ಟಿ ರಾಜ್ಯದಲ್ಲಿ ದಲಿತ ಸಮೂಹಕ್ಕೆ ಸ್ವಾಭಿಮಾನದ ಬದುಕನ್ನ ತೋರಿಸಿಕೊಟ್ಟ ಮಹಾನಾಯಕ ಬಿ.ಕೃಷ್ಣಪ್ಪರವರ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪಾವಾಗಿವೆ. ಅವರ ಕಟ್ಟಿದ ಚಳವಳಿಯಿಂದ ರಾಜ್ಯದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಸಂವಿಧಾನ ಹಕ್ಕುಗಳನ್ನು ಪಡೆಯಲು ಸಹಕಾರಿಯಾಗಿದೆ .ಆದರೆ ಇತ್ತಿಚೀನ ದಿನಮಾನಗಳಲ್ಲಿ ಸಂಘಟಿತರು ವಿಘಟನೆಯಾಗಿ ಒಗ್ಗಟಿನ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾರು ಒಂದಾಗಿ ಅವರ ಜಯಿಂತಿ ಕಾರ್ಯಕ್ರಮವನ್ನ ಅರ್ಥಪೂಣವಾಗಿ ಮಾಡಬೇಕೆಂದು ಸಲಹೇ ನೀಡಿದರು.
ದಲಿತ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಮಾತನಾಡಿ ದಸಂಸ ಪ್ರೊ ಬಿ.ಕೃಷ್ಣಪ್ಪರವರ ಅಂದಿನ ಹೋರಾಟದ ದಿನಗಳಲ್ಲಿ ರಾಜ್ಯದ ಯಾವುದೇ ಸಮುದಾಯಕ್ಕೆ ಅನ್ಯಾಯವಾದಾಗ ಚಳವಳಿ ಮೂಲಕ ಖಂಡಿಸಿ ದ್ವನಿ ಎತ್ತಿ ಹೋರಾಟ ರೂಪಿಸುವ ಕ್ರಾಂತಿಕಾರಿಗಳಾಗಿದ್ದಾರು. ಆದರೆ ಈಗಿನ ದಸಂಸ ಸಂಚಾಲಕರು ರೂಪಿಸುವ ಹೋರಾಟಗಳು ಪ್ರತಿಭಟನೆ ಹಾಸ್ಯಸ್ಪದಂತಿವೆ . ತಾವುಗಳು ಗಟ್ಟಿತನ ನಿಲುವಿನ ಹೋರಾಟದ ಮೂಲಕ ಸಮಾಜದಲ್ಲಿ ಆಗುವಂತ ಅನ್ಯಾಯವನ್ನ ಮೆಟ್ಟಿ ನಿಂತು ಹೋರಾಟ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡರಾದ ಕಾನನಕಟ್ಟೆ ಪ್ರಭುಗೌಡ್ರು . ದಸಂಸ ಸಂಚಾಲಕ ಸೂರಗೊಂಡನಹಳ್ಳಿ ಕುಬೇರಪ್ಪ. ಮಾಜಿ ತಾಪಂ ಸದಸ್ಯ ಅಮರೇಂದ್ರಪ್ಪ. ರೈತ ಮುಖಂಡ ಭರಮಸಮುದ್ರ ಕುಮಾರ್. ದೋಣಿಹಳ್ಳಿ ಗ್ರಾಪಂ ಅದ್ಯಕ್ಷ ತಿಪ್ಪೇಸ್ವಾಮಿ.ದಸಂಸ ಮುಖಂಡ ಪಲ್ಲಾಗಟ್ಟೆ ರಂಗಪ್ಪ.ಗೌರಮ್ಮನಹಳ್ಳಿ.ವೆಂಕಟೇಶ್. ಮುಸ್ಟೂರು ನಿಂಗಪ್ಪ.ತಾಯೊಟೋಣಿ.ಬಾಬು.ಮಹಾಂತೇಶ್.ಮರೆನಹಳ್ಳಿ ಒಬಳೇಶ್.ಚಂದಾಪುರ ನಾಗರಾಜ್.ಪ್ರಗತಿಪರ ಮುಖಂಡರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಲ್ಲೇಶಿ.ಮೂಗಣ್ಣ ಸೇರಿದಂತೆ ಉಪಸ್ಥಿತರಿದ್ದರು.
