By shukradeshe news
editor m.rajappa vyasgondanahalli
Kannada | online news portal |Kannada news online July 23_7_2026

ನೊಂದ ಕುಟುಂಬಕ್ಕೆ 25000 ಸಾವಿರ ಧನಸಹಾಯ ನೀಡಿ ಸಾಂತ್ವನ ಹೇಳಿ ಅಭಯ ಅಸ್ತ ಚಾಚಿದ ರಾಜ್ಯ ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ಅದ್ಯಕ್ಷ ಕೆ ಪಿ.ಪಾಲಯ್ಯ

ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿ ಬಿಲ್ ಕಲ್ಕಟರ್ ಶಿವಣ್ಣ ಇತ್ತಿಚಿಗೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪಿದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಎಸ್ ಟಿ ಘಟಕದ ಮಾಜಿ ರಾಜ್ಯಾದ್ಯಕ್ಷರು ಮತ್ತು ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯರವರು ತಾಲ್ಲುಕಿನ ಕಾಟೇನಹಳ್ಳಿ ಗ್ರಾಮದಲ್ಲಿರುವ ಮೃತ ಶಿವಣ್ಣನ ಸ್ವಗೃಹಕ್ಕೆ ಇಂದು ಭೇಟಿ ನೀಡಿ ನೊಂದ ಕುಟುಂಬ ವರ್ಗದವರಿಗೆ ಹಣದ ಸಹಾಯ ನೀಡಿ ದೈರ್ಯ ತುಂಬಿದ್ದಾರೆ .

ಈ ವೇಳೆ ಅವರು ಮಾತನಾಡಿ ಯಾವುದೇ ಮನುಷ್ಯನಿಗೆ ಸಮಸ್ಯೆಗಳು ಸಾವಿರಾರು ಬರಲಿ ಆದರೆ ಆತ್ಮಹತ್ಯೆ ಪರಿಹಾರವಲ್ಲ ನೊಂದ ಕುಟುಂಬವು ಕಣ್ಣಿರಿನಲ್ಲಿದೆ ಮನೆ ಯಜಮಾನ ಮನೆ ನಿರ್ವಹಣೆಗೆ ಬಹುಮುಖ್ಯವಾಗಿದ್ದ ವ್ಯಕ್ತಿಯನ್ನ ಕಳೆದುಕೊಂಡ ಕುಟುಂಬಕ್ಕೆ ನಮ್ಮದೊಂದು ಅಳಿಲು ಸೇವೆಯಾಗಿದ್ದು ಮೃತ ಶಿವಣ್ಣ ಅವರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನನ್ನ ವೈಯಕ್ತಿಕವಾಗಿ . 25000 ಸಾವಿರ ಧನ ಸಹಾಯ ನೀಡಿದ್ದೆವೆ.ತಾವುಗಳು ನಿಮ್ಮ ಅಗತ್ಯಕ್ಕೆ ಬಳಕೆ ಮಾಡಿಕೊಂಡು ಉತ್ತಮ ವಿದ್ಯಾಬ್ಯಾಸ ಮಾಡುವಂತೆ ಮಕ್ಕಳಿಗೆ ಆತ್ಮಸ್ಥೈರ್ಯದ ಮೂಲಕ ಸಾಂತ್ವನ ಹೇಳಿದ್ದಾರೆ.

ಸಂದರ್ಭದಲ್ಲಿ ಬೋವಿ ಸಮಾಜದ ಅಧ್ಯಕ್ಷರಾದ ಅರ್ಜುನ್ ಪ್ಪ ನಿವೃತ್ತ ಶಿಕ್ಷಕರಾದ ಗುರಪ್ಪ ಮಾಳಮ್ಮನಹಳ್ಳಿ ವೆಂಕಟೇಶ್. ಪಲ್ಲಾಗಟ್ಟೆ ಬಸವರಾಜ್. ಚಿಕ್ಕಮಲ್ಲನಹೊಳೆ ಮಾರುತಿ. ಸುರೇಶ್ ಬಿದರಕೆರೆ ಗೊಲ್ಲರಹಟ್ಟಿ ವಿರೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು*

Leave a Reply

Your email address will not be published. Required fields are marked *

You missed

error: Content is protected !!