By shukradeshe news
editor m.rajappa vyasgondanahalli
Kannada | online news portal |Kannada news online July 27_7_2026

ಸುದ್ದಿ ಮಾಧ್ಯಮಗಳು ಸಾರ್ವಜನಿಕರಿಗೆ ದೇಶ-ವಿದೇಶಗಳ ಮಾಹಿತಿಯನ್ನು ತಲುಪಿಸುವ ಪ್ರಮುಖ ಸಂಸ್ಥೆಗಳಾಗಿವೆ. ಪತ್ರಕರ್ತರು ನೇರ ದಿಟ್ಟ ನಿರಂತರ ಸೇವೆ ಪಾರದರ್ಶಕವಾಗಿರಲಿ ಶಾಸಕ.ಬಿ ದೇವೇಂದ್ರಪ್ಪ ಕಿವಿ ಮಾತು .

ಸಮಾಜದ ಅಂಕುಡೊಂಕನ್ನ ತಿದ್ದಿ ತಿಡುವ‌ ಶಕ್ತಿ ಪತ್ರಿಕಾ ರಂಗಕ್ಕಿದ್ದು ಪತ್ರಕರ್ತರು ವಸ್ತುನಿಷ್ಟ ವರದಿಗೆ ಒತ್ತು ನೀಡಬೇಕು . ಮಾಧ್ಯಮ ಅಂಗವು ಸಂವಿಧಾನದ ನಾಲ್ಕನೆ ಅಂಗವಾಗಿದ್ದು ಜನರ ದ್ವನಿಯಾಗಿಯಾಗಲಿ .ಪತ್ರಕರ್ತರ ಸಂಘ ಒಗ್ಗಟ್ಟಿನಿಂದ ನಿಮಗೆ ಸಿಗುವ ಸೌಲಭ್ಯಗಳನ್ನ ಪಡೆಯಲು ಅತ್ಯಂತ ಸಹಕಾರಿಯಾಗಲಿದೆ ಪತ್ರಿಕಾ ಭವನಕ್ಕೆ 10 ಲಕ್ಷ ಅನುದಾನ ಕಲ್ಪಿಸಿ ಉತ್ತಮ ಕಟ್ಟಡಕ್ಕೆ ಬದ್ದವಾಗಿದ್ದೆನೆ ಎಂದರು‌.

ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಮಾಧ್ಯಮಗಳು ಬಂಡವಾಳಶಾಹಿಗಳ ಕೈವಶವಾಗಿ ಬಡವರ ರೈತರಪರ ಸಮಸ್ಯೆಗಳ ಸುದ್ದಿ ಸಮಾಚಾರ ಕಣ್ಮರೆಯಾಗುತ್ತಿವೆ. ಸಾಮಾಜಿಕ ಜಾಲತಾಣ ಜನರ ಮಾದ್ಯಮವಾಗಿ ಮಾರ್ಪಟ್ಟಿದೆ .ಲಕ್ಷ್ಮಣ ಹೊಗಾರ

ಜಗಳೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಲಾಗಿದ್ದ
ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು

ಪ್ರಸ್ತುತ ದಿನಗಳಲ್ಲಿ ಮಾಸ್ ಮೀಡಿಯಾಗಳು ಕಾರ್ಪೋರೇಟರ್ ಪ್ರಮುಖ ಅಂಗಗಳಾಗಿ ಮಾರ್ಪಟ್ಟಿವೆ. ಲಾಭ ಗಳಿಕೆ, ಜಾಹೀರಾತುದಾರರ ಪ್ರಭಾವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳು ಮಾಧ್ಯಮಗಳ ಧೋರಣೆಯನ್ನು ನಿಯಂತ್ರಿಸುತ್ತಿವೆ.ಮಾಧ್ಯಮಗಳ ಬಂಡವಾಳಶಾಹಿ ಸ್ವರೂಪಲಾಭದ ಗುರಿ ಸುದ್ದಿಗಿಂತ ವ್ಯಾಪಾರ ಮತ್ತು ಹಣ ಗಳಿಕೆಯೇ ಪ್ರಮುಖವಾಗಿ ಜಾಹೀರಾತು ಪ್ರಭಾವ ದೊಡ್ಡ ಕಂಪನಿಗಳ ಹಣದ ನೆರವಿನಿಂದ ನಡೆಯುವುದರಿಂದ ಜನಪರ ಧ್ವನಿಗಳಿಗೆ ಬೆಲೆ ಇಲ್ಲದಂತಾಗಿದೆ. ಗ್ರಾಮೀಣ ಪತ್ರಕರ್ತರ ಸೇವೆ ಅನನ್ಯವಾಗಿದೆ ದೊಡ್ಡ ದೊಡ್ಡ ಸುದ್ದಿ ಸಂಸ್ಥೆಗಳು

ಇತ್ತಿಚಿನ ದಿನಗಳಲ್ಲಿ ರೈತರು ಕೇವಲ ಲಾಭದಾಯಕ ಅಡಿಕೆ ಬೆಳೆಗೆ ಮಾರುಹೋಗುವುದನ್ನ ತಪ್ಪಿಸಿ ಸಿರಿದಾನ್ಯ ಬೆಳೆಯನ್ನ ಬೆಳೆದು ಆಹಾರ ಕೊರತೆ ನೀಗಿಸಬೇಕು.ಅಂತರ್ಜಲ ಕೊರತೆ ಹೆಚ್ಚಾಗುತ್ತಿದೆ ಒಂದೇ ಬೇಳೆ ಬೇಸಾಯಿ ಪದ್ದತಿ ಅನುಸರಿಸಿರುವುದರಿಂದ ಕೃಷಿ ಪದ್ದತಿಯಲ್ಲಿ ಅಸಮತೋಲನ ಉಂಟಾಗಿ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಎದುರಾಗಲಿದೆ.
ರೈತರು ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ನಾವೇ ಪಡೆದುಕೊಳ್ಳಬೇಕು ನಮ್ಮ ಬಯಲು ನಾಡಿಗೆ ವಾರದಾನವಾಗಬೇಕಿದ್ದ ಅಪ್ಪರ್ ಭದ್ರಾ ನೀರಾವರಿ ಕಾಮಗಾರಿ ಕುಂಟುತಾ ಸಾಗುತ್ತಿದೆ ಕೇವಲ ರಾಜ್ಯ ಸರ್ಕಾರ ಅನುದಾನ ನೀಡಿದೆ. ಕೇಂದ್ರ ಸರ್ಕಾರ 5000 ಕೋ ಅನುದಾನ ಒದಗಿಸುತ್ತೆವೆ ಎಂದು ರಾಷ್ಟ್ರೀಯ ಯೋಜನೆ ಜಾರಿಗೆ ತಂದಿದ್ದೆವೆ ಎಂದು ಜಾಹಿರಾತು ಘೋಷಿಸಿಕೊಂಡು ಅವರ ಬೆನ್ನು ಅವರೆ ತಟ್ಟಿಕೊಂಡು ತಣ್ಣಿರು ಎರಚಿದ್ದಾರೆ. ಕರ್ನಾಟಕ ಅನೇಕ ಸಂಸದರು ಆಯ್ಕೆಯಾಗಿ ಹೋದ ರಾಜಕಾರಣಿಗಳು ಸಭೆಯಲ್ಲಿ ಬಾಯಿ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ವಕೀಲರಾದ ಡಿ .ಶ್ರೀನಿವಾಸ . ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ. ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು.ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅದ್ಯಕ್ಷ ಜಿ.ಎಸ್ ಚಿದಾನಂದ .ಹಾಲಿ ಪತ್ರಕರ್ತರ ಸಂಘದ ಅದ್ಯಕ್ಷ ಲೋಕೇಶ್ ಐಹೊಳೆ ವಕೀಲರಾದ ವೈ ಹನುಮಂತಪ್ಪ. ಪೊಲೀಸ್ ಇಲಾಖೆ ಪಿ.ಐ ಸಿದ್ದರಾಮಯ್ಯ ‌.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್. ಪತ್ರಕರ್ತರಾದ ಬಿ.ಪಿ ಸುಭಾನ್.ಅಣಬೂರು ಕೊಟ್ರೇಶ್. ಹೆಚ್ ಆರ್ ಬಸವರಾಜ್. ದಲಿತ ಮುಖಂಡ ಜಿ.ಎಚ್ ಶಂಭುಲಿಂಗಪ್ಪ .ಕರವೇ ಮಹಾಂತೇಶ್. ಕರವೇ ಶಾಹಿನ್ ಬಾನು.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಬದ್ರಿನಾಥ .ವೀರೇಶ್ .ರೈತ ಮುಖಂಡ ಭರಮಸಮುದ್ರ ಕುಮಾರ್. ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!