ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಷೇರುದಾರರ ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆಯಾದ ಶಿಕ್ಷಕರಿಗೆ ಮಾತ್ರ ಸನ್ಮಾನ: ದಲಿತ ಶಿಕ್ಷಕರನ್ನ ಕಡೆಗಣಿಸಲಾಗಿದೆ ಎಂದು ಸಾರ್ವಜನಿಕರ ಆರೋಪ
By shukradeshe news
editor m.rajappa vyasgondanahalli
Kannada | online news portal |Kannada news online date august 31 _9_2026

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಶಿಕ್ಷಕ ಷೇರುದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ಇದೀಗ ಶಿಕ್ಷಕರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣಕುಮಾರ ಹೆಗಡೆ ಹಾಗೂ ತಾಲ್ಲೂಕು ಅಧ್ಯಕ್ಷ ವೀರಣ್ಣ, ಸಭೆಯ ಅಧ್ಯಕ್ಷರ ಪೂರ್ವಾನುಮತಿ ಪಡೆಯದೆ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ಸನ್ಮಾನಿಸಿರುವುದು ಸಭೆಯ ಶಿಸ್ತು ಮತ್ತು ಘನತೆಗೆ ಧಕ್ಕೆ ತಂದಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಇದಕ್ಕಿಂತಲೂ ಗಂಭೀರವಾಗಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ರಾಜ್ಯ ಸಂಘದಲ್ಲಿ ಆಯ್ಕೆಯಾಗಿರುವ ದಲಿತ ಶಿಕ್ಷಕ ಮಂಜಪ್ಪ K T ರವರನ್ನು ಹಾಗೂ ಅಲ್ಪ ಸಂಖ್ಯಾತ ಶಿಕ್ಷಕ ರಜಾಕ್ ಉಲ್ಲಾ, ಮಹಿಳಾ ಶಿಕ್ಷಕಿ ಶ್ರೀಮತಿ ತ್ರಿವೇಣಿ ರವರನ್ನ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಶಿಕ್ಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೇ ಕ್ಷೇತ್ರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ಆಯ್ಕೆ ಮಾಡಿಕೊಂಡು ಸನ್ಮಾನಿಸಿ, ಉಳಿದ ದಲಿತ, ಅಲ್ಪ ಸಂಖ್ಯಾತ, ಮಹಿಳಾ ಶಿಕ್ಷಕಿ ರವರನ್ನು ಕಡೆಗಣಿಸಿರುವ ಕ್ರಮವು ಯಾವ ಮಾನದಂಡದ ಆಧಾರದ ಮೇಲೆ ನಡೆದಿದೆ ಎಂಬುದನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕು.

ವಿಶೇಷವಾಗಿ, ಸನ್ಮಾನದಿಂದ ಹೊರಗಿಟ್ಟಿರುವ ವ್ಯಕ್ತಿ ದಲಿತ ಶಿಕ್ಷಕ ಮುಖಂಡರಾಗಿರುವ ಹಿನ್ನೆಲೆಯಲ್ಲಿ, ಇದು ಸಾಮಾಜಿಕ ತಾರತಮ್ಯದ ಮನೋಭಾವದಿಂದ ನಡೆದ ಕ್ರಮವೇ ಎಂಬ ಅನುಮಾನ ಶಿಕ್ಷಕರಲ್ಲಿ ಮೂಡಿದೆ. ಇಂತಹ ಅನುಮಾನಗಳಿಗೆ ಅವಕಾಶ ನೀಡುವ ರೀತಿಯಲ್ಲಿ ನಡೆದುಕೊಂಡಿರುವುದು ಅತ್ಯಂತ ಖಂಡನೀಯ.
ಸನ್ಮಾನ ಎನ್ನುವುದು ವೈಯಕ್ತಿಕ ಇಷ್ಟ–ಅನಿಷ್ಟಗಳ ಆಧಾರದ ಮೇಲೆ ನೀಡುವ ಗೌರವವಲ್ಲ. ಅದು ಎಲ್ಲ ಶಿಕ್ಷಕರನ್ನೂ ಸಮಾನವಾಗಿ ಗೌರವಿಸುವ ಮನೋಭಾವದ ಪ್ರತೀಕವಾಗಬೇಕು.
ಶಿಕ್ಷಕರ ಸಂಘದ ಜವಾಬ್ದಾರಿಯುತ ಪದಾಧಿಕಾರಿಗಳೇ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಬೇಕಾದ ಸಂದರ್ಭದಲ್ಲಿ, ಆಯ್ದ ವ್ಯಕ್ತಿಗಳಿಗೆ ಮಾತ್ರ ಆದ್ಯತೆ ನೀಡಿ ಮತ್ತೊಬ್ಬ ಶಿಕ್ಷಕನನ್ನ ಕಡೆಗಣಿಸಿರುವುದು ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಾಗಿದೆ.
ಇದಲ್ಲದೆ, ಇದು ಯಾವುದೇ ವ್ಯಕ್ತಿಯ ಖಾಸಗಿ ಕಾರ್ಯಕ್ರಮವಲ್ಲ. ಶಿಕ್ಷಕ ಷೇರುದಾರರ ವಾರ್ಷಿಕ ಸಾಮಾನ್ಯ ಸಭೆ. ಆದ್ದರಿಂದ ಸಭೆಯ ಅಧ್ಯಕ್ಷರ ಅನುಮತಿಯಿಲ್ಲದೆ ಕಾರ್ಯಕ್ರಮ ನಡೆಸಿರುವುದು ಮತ್ತು ಸನ್ಮಾನಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

“ಸಂಘಟನೆಯಲ್ಲಿ ಜಾತಿ–ಭೇದಕ್ಕೆ ಸ್ಥಾನವಿಲ್ಲ; ಎಲ್ಲ ಶಿಕ್ಷಕರಿಗೂ ಸಮಾನ ಗೌರವವೇ ಸಂಘಟನೆಯ ನಿಜವಾದ ಶಕ್ತಿ.”ಎಂಬುದು ಅರಿಯಬೇಕಾಗಿದೆ.

*ಈ ಘಟನೆಯ ಕುರಿತು ಸಂಬಂಧಪಟ್ಟ ಪದಾಧಿಕಾರಿಗಳು ಶಿಕ್ಷಕ ಷೇರುದಾರರಿಗೆ ಹಾಗೂ ಶಿಕ್ಷಕ ಸಮುದಾಯಕ್ಕೆ ಸ್ಪಷ್ಟನೆ ನೀಡಬೇಕು. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂಘಟನಾ ಶಿಸ್ತಿಗೆ ವಿರುದ್ಧವಾದ ಯಾವುದೇ ನಡೆ ಪುನರಾವರ್ತನೆಯಾಗಬಾರದು ಎಂದು ಶಿಕ್ಷಕರ ಪರವಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ‌

Leave a Reply

Your email address will not be published. Required fields are marked *

You missed

error: Content is protected !!