ಲೇಖನ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ‌

ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪಾವಾದ ಕೈಗಾರಿಕೋಧ್ಯಮಿಗಳಾದ ನಾಗವೇಣ ಜೆ.ಪಿ ಓಬಣ್ಣರವರ ಸೇವೆ ಅನನ್ಯವಾಗಿದೆ

ಮಕ್ಕಳು ಒಂದು ದೇಶದ ಅತ್ಯ ಅಮೂಲ್ಯ ಸಂಪನ್ಮೂಲ ಮತ್ತು ಭವಿಷ್ಯದ ಅತ್ಯುತ್ತಮ ಭರವಸೆಯ ಪ್ರತಿಭೆಗಳು .
“ಮಕ್ಕಳು ತೋಟದ ಮೊಗ್ಗುಗಳಂತೆ ಮತ್ತು ಅವರನ್ನು ಕಾಳಜಿ ಮತ್ತು ಪ್ರೀತಿಯಿಂದ ಪೋಷಿಸಬೇಕು, ಏಕೆಂದರೆ ಅವರು ದೇಶದ ಭವಿಷ್ಯ ಮತ್ತು ನಾಳಿನ ನಾಗರಿಕರು” ಎಂದು ಜವಾಹರಲಾಲ್ ನೆಹರು ಅವರ ಕನಸಿನ ದೂರದೃಷ್ಠಿ ಚಿಂತನೆಯಂತೆ. ಪ್ರಸ್ತುತದಲ್ಲಿ ತಾವಾಯ್ತು ತಮ್ಮ ಕೆಲಸವಾಯಿತು ಎನ್ನುವ ತಂತ್ರಜ್ಘಾನ ಆಧುನಿಕತೆ ಸ್ವಾರ್ಥ ಲಾಲಸೆ ಜನರೆ ತುಂಬಿಕೊಂಡಿರುವ ಜಾಗತಿಕ ಜಗತ್ತಿನ ಕಾಲಘಟ್ಟದಲ್ಲಿ ಶ್ರೀಮತಿ ನಾಗವೇಣ ಮೆಡಮ್ ರವರು ನನ್ನದೊಂದು ಸಮಾಜಕ್ಕೆ ಅಳಿಲು ಸೇವೆ ಎನ್ನುವ ಹಾಗೆ ಸದಾ ಬಡವರ ಶೋಷಿತರ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳ ಬಾಳಿಗೆ ಬೆಳಕಾದ ನಂದಾದೀಪಾದಂತೆ ನಿತ್ಯ ನಿಸ್ವಾರ್ಥ ಸೇವೆಗೆ ಮುಂದಾಗಿರುವುದು ನಿಜಕ್ಕೂ ಕೂಡ ಶ್ಲಾಘನೀಯವಾಗಿದೆ.
ಶ್ರೀಯುತರು ಜಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಅಯುಕ್ತರಾದ ಜೆ.ಪಿ ಓವಣ್ಣರವರ ಧರ್ಮಪತ್ನಿ ಶ್ರೀಮತಿ ನಾಗವೇಣ ಮೆಡಮ್ ರವರು ಬಡ ವಿದ್ಯಾರ್ಥಿಗಳ ಭವಿಷ್ಯ ಬರೆಯಲು ಮುಂದಾಗಿದ್ದಾರೆ.
ಸಮಾಜದಲ್ಲಿರುವ ಬಡ ಪೋಷಕ ಮಕ್ಕಳ ವಿಧ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಾಯ ಒಂದಲ್ಲ ಎರಡಲ್ಲ ಸಾವಿರಾರು ವಿಧ್ಯಾರ್ಥಿಗಳ ಶಾಲಾ ಶುಲ್ಕ ತುಂಬಿ ಅಸರೆಯಾಗಿದ್ದಾರೆ.

.ಪ್ರಸ್ತುತದಲ್ಲಿ ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ಇವರು ಮಹಿಳೆಯರಿಗೆ ಕೌಶಲ್ಯ ವೃತ್ತಿ‌ ತರಬೇತಿ ನೀಡಿ ಮಹಿಳೆಯರು ಕೂಡ ಸಮಾಜದಲ್ಲಿ‌ ಯಾರಿಗೂ ಕಡಿಮೆಯಿಲ್ಲ ಸ್ವಾಲಂಭಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಒತ್ತಾಸೆಯಂತೆ ಗ್ರಾಮೀಣ ಬಾಗದಿಂದ ಉದ್ಯೋಗ ಅರಸಿ ಬರುವಂತ ಬಡ ಮಹಿಳೆಯರಿಗೆ ಸುಮಾರು 400 ಮಹಿಳೆಯರಿಗೆ ಉದ್ಯೋಗ ನೀಡಿ ಬಡ ಮಹಿಳೆಯರ‌ ಬಾಳಿಗೆ ಬೆಳಕು ನೀಡಿದ ಆಶಾ ಕಿರಣ ಕೈಗಾರಿಕೋದ್ಯಮಿಗಳೆಂದರೆ ಅದು ನಾಗವೇಣಾರವರು ಯಾವುದೇ ಪಬ್ಲಿಸಿಟಿಯಿಲ್ಲದೆ ಅವರ ನಿಸ್ವಾರ್ಥ ಸೇವೆಯ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ, ಸರಿಯಾದ ಸಂಸ್ಕಾರ ಮತ್ತು ಆರ್ಥಿಕ ಭದ್ರತೆ ಅತ್ಯಂತ ಮುಖ್ಯವಾದ ಮೂಲಮಂತ್ರಗಳಾಗಿವೆ.ಶಿಕ್ಷಣ ಮತ್ತು ಬುನಾದಿ ಶಾಲಾಪೂರ್ವ ಹಾಗೂ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಮೌಲ್ಯಗಳನ್ನು ನೀಡುವುದು ಅವರ ಮುಂದಿನ ಬದುಕಿಗೆ ಬಲವಾದ ಭವಿಷ್ಯ ಒದಗಿಸುವ ಅಸ್ತ್ರ ಯಾವುದು ಎಂದರೆ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಅಭಿಲಾಸೆಯಂತೆ ಅಂದಿನ ಕಾಲಘಟ್ಟದಲ್ಲಿ ಶೋಷಿತ ಬಡ ಸಮುದಾಯಗಳಿಗೆ ಅಕ್ಷರ ಕಲಿಸಲು ಪಣತೊಟ್ಟ ಸಾವಿತ್ರಿಭಾಪುಲೆ ಜ್ಯೋತಿಭಾಪುಲೆಯಂತೆ ಪ್ರಸ್ತುತ ದಿನಗಳಲ್ಲಿ ನಾಗವೇಣ ಜೆ.ಪಿ ಓಬಣ್ಣ ದಂಪತಿಗಳು ಕಾರ್ಯ ಅತ್ಯಂತ ಮಹತ್ವಪೂರ್ಣವಾದದ್ದು ಎಂದರೆ ತಪ್ಪಾಗಲಾರದು..

ಮೂಲತ ಜಗಳೂರಿನ ಕ್ಯಾಂಪ್ ಎಂದೇ ಪ್ರಸಿದ್ದವಾದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣರವರು ಈ ಹಿಂದೆ ಧಿನ ದಲಿತರ ಆರ್ಥಿಕವಾಗಿ ಹಿಂದೂಳಿದ ಕುಟುಂಬದ ವಿದ್ಯಾರ್ಥಿನಿಯರ ಮೆಡಿಕಲ್ ಓದಲು. ಇನ್ನಿತರೆ ಪದವಿ ಪಡೆಯಲು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡಿ ಆ ವಿದ್ಯಾರ್ಥಿಗಳ ಅತ್ಮಸ್ಥೈರ್ಯ ತುಂಬಿ ನೈತಿಕ ಬೆಂಬಲ ನೀಡಿದ ಉದಾರ ಮನೋಭಾವನೆ ವ್ಯಕ್ತಿತ್ವ ವ್ಯಕ್ತಿಯ ನಡೆ ಹಿಡಿ ಸಮಾಜಕ್ಕೆ ಮಾಧರಿಯಾಗಿದೆ.

ಶ್ರೀಮತಿ ನಾಗವೆಣಾ ಮತ್ತು ಜೆ‌ಪಿ ಓಬಣ್ಣರವರ ಸಾಮಾಜಿ ನಿಸ್ವಾರ್ಥ ಸೇವೆಯೇ ಇತರರಿಗೆ ಸ್ಪೂರ್ತಿಯಾಗಿದೆ. ಜಗಳೂರಿನ ಜನರ ಮನಸ್ಸೆ ಹಾಗೆ ಹೃದಯ ಶ್ರೀಮಂತಿಕೆ ಹೊಂದಿರುವಂತ ಮಣ್ಣಿನ ಗುಣವೆ ಹಾಗೆ ಸಂಕಷ್ಠದಲ್ಲಿರುವ ಮತ್ತೊಬ್ಬರಿಗೆ ನೆರವಾಗಿ ಔದರ್ಯದ ಸ್ಚಭಾವವುಳ ಜೆ.ಪಿ ಓಬಣ್ಣ ಅತ್ಯಂತ ಕೆಳ ಸಮುದಾಯದ ಸಾಮಾನ್ಯ ಒಬ್ಬ ನೌಕರರ ಪುತ್ರರಾಗಿ ಜನಿಸಿದ ಇವರು ತನ್ನ ವಿಧ್ಯಾಬ್ಯಾಸವನ್ನ ಕಷ್ಟಸಂಕೋಲೆಯಲ್ಲಿ ಅಬ್ಯಾಸ ಮಾಡಿ ಉನ್ನತ ಪದವಿ ಗಳಿಸಿ ಅತ್ಯಾನುತ ಹುದ್ದೆ ಗಿಟ್ಟಿಸಿಕೊಂಡು ತನ್ನ ಹಿಂದಿನ ಪರಿಶ್ರಮ ನೋವುಂಡು ಬೆಳೆದ ಸಮುದಾಯಕ್ಕೆ ತಿರುಗಿ ನೋಡುವ ಗುಣ ಸ್ವಭಾವದಂತೆ ವಿದ್ಯಾರ್ಥಿಗಳಿಗೆ ಅಸರೆಯಾಗಿರುವುದಲ್ಲದೆ ಪುನ ವಿವಿಧ ಕಲೆ ಸಾಂಸ್ಕೃತಿಕ ವೇದಿಕೆಗಳಿಗೆ ಪ್ರೋತ್ಸಾಹ ನೀಡುತಾ ಉನ್ನತ ಅಧಿಕಾರಿಯೊಳಗೊಬ್ಬ ಕಲಾಪ್ರೇಮಿ ಎಂಬುದು ಅವರ ಸಂಗೀತದ ಮೂಲಕ ಜನರೊಂದಿಗೆ ಹಾಸಹೊಕ್ಕಾಗಿದ್ದಾರೆ.

  • ಇತ್ತಿಚಿಗೆ ತರಿಕೆರೆ ತಾಲ್ಲೂಕಿನಲ್ಲಿ ನಡೆದ ಮಾದಿಗ ಮಹಾಸಭಾ ನೌಕರರ ಸಂಘ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಧ್ಯಾರ್ಥಿಗಳ ಕುರಿತು ತಮ್ಮ ಅಮೂಲ್ಯವಾದ ಸಮಯವನ್ನ ವ್ಯರ್ಥ ಮಾಡಬೇಡಿ ಹಳೆಯ ಸಂಪ್ರಾದಾಯ ಮೌಡ್ಯತೆ ಕಂದಚಾರಗಳಿಗೆ ಬಲಿಯಾಗಿ ತಮ್ಮ ವಿದ್ಯಾಭ್ಯಾಸವನ್ನ ಮೊಟುಕುಗೋಳಿಸಿಕೊಳ್ಳಬಾರದು ವೈಜ್ಘಾನಿಕತೆ ಯುಗದಲ್ಲಿ ವೈಚಾರಿಕತೆ ಮನೋಭಾವನೆ ಬೆಳೆಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಹಿಡಿಯುವಂತೆ ತಿಳಿಸಿ ಕರೆ ನೀಡಿದ್ದಾರೆ.

ಪುನ ವಿದ್ಯಾರ್ಥಿಗಳ ಏಳ್ಗಿಗಾಗಿ ಒಂದು ಲಕ್ಷ ರೂಗಳನ್ನ ನೀಡಿ ಪ್ರೋತ್ಸಾಹಿಸಿದ್ದಾರೆ ಇಂತ ಹತ್ತಾರು ಸಭೆ ಸಮಾರಂಭಗಳಿಗೆ ತೆರಳುವ ಜೆ.ಪಿ ಓಬಣ್ಣ ಹಾಗೂ ಅವರ ಧರ್ಮಪತ್ನಿ ನಾಗವೇಣಾರವರ ಸಾಮಾಜಿಕ ಕಳಕಳಿಯ ಸಮುದಾಯದ ಏಳ್ಗಿಗೆ ಶ್ರಮಿಸುವುದಲ್ಲದೆ ಇತರೆ ಎಲ್ಲಾ ಬಡ ವರ್ಗದ ವಿಧ್ಯಾರ್ಥಿಗಳ ನೆರವಿಗೆ ಸಹಾಯಸ್ತ ಚಾಚುತ್ತಿರುವುದು ಶ್ಲಾಘನೀಯವಾಗಿದ್ದು ಇಂತ ಅಮೋಘವಾದ ಸೇವೆಗೆ ನಮ್ಮ ಶುಕ್ರದೆಸೆ ನ್ಯೂಸ್ ಪತ್ರಿಕೆ ಶ್ಲಾಘೀಸುತ್ತಿದೆ…..

ಇಂತ ಆದರ್ಶ ದಂತಿಗಳ ಸೇವಾಕಾರ್ಯ ಮತ್ತೋಷ್ಟು ಸಮಾಜಮುಖಿಯಾಗಿ ಸೇವೆ ದೊರಕಲಿ ಎಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರು ವೆದಿಕೆಯೊಂದರಲ್ಲಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!