ಲೇಖನ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ
ಸಮಾಜದಲ್ಲಿರುವ ಬಡ ಪೋಷಕ ಹೆಣ್ಣು ಮಕ್ಕಳ ವಿಧ್ಯಾಬ್ಯಾಸಕ್ಕೆ ಅಭಯ ಅಸ್ತ ಚಾಚುವ ಕೈಗಾರಿಕೋದ್ಯಮಿಗಳಾದ ಕೆ.ಎಸ್ ನಾಗವೇಣಿ ಓಬಣ್ಣ ಅವರ ಸೇವೆ ಅನನ್ಯವಾಗಿದೆ.
ಶ್ರೀಮತಿ ನಾಗವೇಣಿ ಇವರು ವಿಶೇಷವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಉಡುಪುಗಳ ಸಹಾಯ, ಪೌರಕಾರ್ಮಿಕರಿಗೆ ರೈನ್ ಕೋಟ್ ವಿತರಣೆ….ಸೇವಾ ಕಾರ್ಯ ಶ್ಲಾಘನೀಯ
ಇತ್ತಿಚಿಗೆ ಚಾಮರಾಜನಗರ ಜಿಲ್ಲೆಯ ಹಾಡಿಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಬಟ್ಟೆ ಮತ್ತು ಔಷಧಿ ವಿತರಣೆ ಮುಂತಾದ ಸೌಲಭ್ಯಗಳನ್ನ ನೀಡಿ ನೆರವಾಗಿದ್ದಾರೆ
ಅದರಲ್ಲೂ ಮಾದಿಗ ಜನಾಂಗದಲ್ಲಿಯೆ ಹಿಡಿ ರಾಜ್ಯದಲ್ಲಿ ಧಿನದಲಿತರ ಹಿಂದೂಳಿದವರ ಅತ್ಯಾನುತ. ಆರ್ಥಿಕ ಸಹಾಯ ಮಾಡುವ ಮೂಲಕ ಮಾದಿಗ ಸಮುದಾಯದಲ್ಲಿಯೇ ಅಧಿಕ ಆದಾಯ ತೆರಿಗೆ ಹಾಗೂ ಜಿ.ಎಸ್.ಟಿ ಪಾವತಿಸುವ ಕೈಗಾರಿಕೋದ್ಯಮಿ.. ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .
ಶ್ರೀಮತಿ ನಾಗವೇಣಿರವರ ಕಾರ್ಯವನ್ನ ಗುರುತಿಸಿದ
ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಸಮಾಜದ ಮಹಿಳಾ ಕೈಗಾರಿಕೋದ್ಯಮಿ ಎಂದು ಗುರುತಿಸಿ
ಮಾಜಿ ಸಚಿವ ಹೆಚ್ ಆಂಜನೇಯ ಹಾಗೂ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಜಿ.ಎಸ್. ಮಂಜುನಾಥ್ ಇವರು ಸನ್ಮಾನಿಸಿ ಗೌರವಿಸಿರುತ್ತಾರೆ.
ಒಟ್ಬಾರೆ ಬಡವರ
ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪಾವಾಗಿದ್ದಾರೆ.
ಪ್ರಸ್ತುತದಲ್ಲಿ ತಾವಾಯ್ತು ತಮ್ಮ ಕೆಲಸವಾಯಿತು ಎನ್ನುವ ತಂತ್ರಜ್ಘಾನ ಆಧುನಿಕತೆ ಸ್ವಾರ್ಥ ಲಾಲಸೆ ಜನರೆ ತುಂಬಿಕೊಂಡಿರುವ ಜಾಗತಿಕ ಜಗತ್ತಿನ ಕಾಲಘಟ್ಟದಲ್ಲಿ ಶ್ರೀಮತಿ ನಾಗವೇಣಿ ಮೆಡಮ್ ರವರು ಸದಾ ಬಡವರ ಶೋಷಿತರ ಎಲ್ಲಾ ವರ್ಗದ ಬಡ ಹಿಂದೂಳಿದ ಧೀನ ದಲಿತ ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳ ಬಾಳಿಗೆ ಬೆಳಕಾದ ನಂದಾದೀಪಾದಂತೆ ನಿಸ್ವಾರ್ಥ ಸೇವೆಗೆ ಮುಂದಾಗಿರುವುದು ನಿಜಕ್ಕೂ ಕೂಡ ಶ್ಲಾಘನೀಯವಾಗಿದೆ.
ಶ್ರೀಯುತರು ಜಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಅಯುಕ್ತರಾದ ಜೆ.ಪಿ ಓವಣ್ಣರವರ ಧರ್ಮಪತ್ನಿ ಶ್ರೀಮತಿ ನಾಗವೇಣಿ ರವರು ಸಮಾಜದಲ್ಲಿರುವ ಬಡ ಪೋಷಕ ಮಕ್ಕಳ ವಿಧ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಾಯ ಒಂದಲ್ಲ ಎರಡಲ್ಲ ಸಾವಿರಾರು ವಿಧ್ಯಾರ್ಥಿಗಳ ಶಾಲಾ ಶುಲ್ಕ ತುಂಬಿ ಅಸರೆಯಾಗಿದ್ದಾರೆ.
ಪ್ರಸ್ತುತದಲ್ಲಿ ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ಇವರು ಮಹಿಳೆಯರಿಗೆ ಕೌಶಲ್ಯ ವೃತ್ತಿ ತರಬೇತಿ ನೀಡಿ ಮಹಿಳೆಯರು ಕೂಡ ಸಮಾಜದಲ್ಲಿ ಯಾರಿಗೂ ಕಡಿಮೆಯಿಲ್ಲ ಸ್ವಾಲಂಭಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಒತ್ತಾಸೆಯಂತೆ ಗ್ರಾಮೀಣ ಬಾಗದಿಂದ ಉದ್ಯೋಗ ಅರಸಿ ಬರುವಂತ ಬಡ ಮಹಿಳೆಯರಿಗೆ ಸುಮಾರು 400 ಮಹಿಳೆಯರಿಗೆ ಉದ್ಯೋಗ ನೀಡಿ ಬಡ ಮಹಿಳೆಯರ ಬಾಳಿಗೆ ಬೆಳಕು ನೀಡಿದ ಆಶಾ ಕಿರಣ ಕೈಗಾರಿಕೋದ್ಯಮಿಗಳಾಗಿದ್ದಾರೆ ಯಾವುದೇ ಪ್ರಚಾರ ಇಲ್ಲದೆ ನಿಸ್ವಾರ್ಥ ಸೇವೆಯ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ, ಸರಿಯಾದ ಮಾರ್ಗ ಎನ್ನುವ ಹಾಗೆ.ಶಿಕ್ಷಣ ಮತ್ತು ಬುನಾದಿ ಶಾಲಾಪೂರ್ವ ಹಾಗೂ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಮೌಲ್ಯಗಳನ್ನು ನೀಡುವುದು ಅವರ ಮುಂದಿನ ಬದುಕಿಗೆ ಬಲವಾದ ಭವಿಷ್ಯ ಒದಗಿಸುವ ಅಸ್ತ್ರ ಯಾವುದು ಎಂದರೆ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಅಭಿಲಾಸೆಯಂತೆ ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕವಾಗಿ ಸಹಾಯ ಮಾಡುತ್ತಿರುವ ನಾಗವೇಣಿ ಜೆ.ಪಿ ಓಬಣ್ಣ ದಂಪತಿಗಳು ಕಾರ್ಯ ಅತ್ಯಂತ ಮಹತ್ವಪೂರ್ಣವಾದದ್ದು ಎಂದರೆ ತಪ್ಪಾಗಲಾರದು..
ಮೂಲತ ಜಗಳೂರಿನ ಕ್ಯಾಂಪ್ ಎಂದೇ ಪ್ರಸಿದ್ದವಾದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣರವರು ಈ ಹಿಂದೆ ಧಿನ ದಲಿತರ ಆರ್ಥಿಕವಾಗಿ ಹಿಂದೂಳಿದ ಕುಟುಂಬದ ವಿದ್ಯಾರ್ಥಿನಿಯರ ಮೆಡಿಕಲ್ ಓದಲು. ಇನ್ನಿತರೆ ಪದವಿ ಪಡೆಯಲು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡಿ ಆ ವಿದ್ಯಾರ್ಥಿಗಳ ಅತ್ಮಸ್ಥೈರ್ಯ ತುಂಬಿ ನೈತಿಕ ಬೆಂಬಲ ನೀಡಿದ ಉದಾರತೆಯನ್ನ ನಾವು ಸ್ಮರಿಸಬಹುದಾಗಿದೆ.
ಜೆ.ಪಿ ಓಬಣ್ಣ ಇವರು ಜಗಳೂರು ಪಟ್ಟಣದ ಕ್ಯಾಂಪ್ ನಿವಾಸಿಗಳಾದ ಮಾದಿಗ ಜನಾಂಗದ ಹಿರಿಯ ನಾಯಕರಾದ ದಿವಂಗತ ಪಾಪಯ್ಯ ಹಾಗೂ ಶಾರದಮ್ಮ ಇವರ ದಂಪತಿಗಳ ಪುತ್ರರಾಗಿ ಜನಿಸಿರುತ್ತಾರೆ.ಒಟ್ಟಾರೆ ಒಬ್ಬ ಸಾಮಾನ್ಯ ನೌಕರರ ಪುತ್ರ ಅತ್ಯಾನುತ ಸ್ಥಾನ ಪಡೆಯಲು ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಜೆ.ಪಿ ಓಬಣ್ಣರವರು ತನ್ನ ವಿಧ್ಯಾಬ್ಯಾಸವನ್ನ ಕಷ್ಟಸಂಕೋಲೆಯಲ್ಲಿ ಅಬ್ಯಾಸ ಮಾಡಿ ಮೂಲತಃ ಚಿತ್ರದುರ್ಗದ ಜೆ.ಎಮ್.ಐ.ಟಿ ಕಾಲೇಜಿನಲ್ಲಿ
ಉನ್ನತ ಸಿವಿಲ್ ಪದವಿದರರಾಗಿ ಪ್ರಥಮ ದರ್ಜೆಯಲ್ಲಿ ಡಿಸ್ಟಿಂಗಕ್ಷನಲ್ಲಿ.
ತೇರ್ಗಡೆ ಹೊಂದಿ ಪೋಷಕರಿಗೆ ಮತ್ತು ಕಾಲೇಜಿಗೆ ಮತ್ತು ಪ್ರಸ್ತುತ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ..
ಉನ್ನತ ಪದವಿ ಗಳಿಸಿ ಅತ್ಯಾನುತ ಹುದ್ದೆ ಗಿಟ್ಟಿಸಿಕೊಂಡು ತನ್ನ ಹಿಂದಿನ ಪರಿಶ್ರಮ ನೋವುಂಡು ಬೆಳೆದ ಸಮುದಾಯಕ್ಕೆ ತಿರುಗಿ ನೋಡುವ ಗುಣ ಸ್ವಭಾವದಂತೆ ವಿದ್ಯಾರ್ಥಿಗಳಿಗೆ ಅಸರೆಯಾಗಿರುವುದಲ್ಲದೆ ಪುನ ವಿವಿಧ ಕಲೆ ಸಾಂಸ್ಕೃತಿಕ ವೇದಿಕೆಗಳಿಗೆ ಪ್ರೋತ್ಸಾಹ ನೀಡುತಾ ಉನ್ನತ ಅಧಿಕಾರಿಯೊಳಗೊಬ್ಬ ಕಲಾಪ್ರೇಮಿ ಎಂಬುದು ಅವರ ಸಂಗೀತದ ಮೂಲಕ ಜನರೊಂದಿಗೆ ಹಾಸುಹೊಕ್ಕಾಗಿದ್ದಾರೆ.
ಇತ್ತಿಚಿಗೆ ತರಿಕೆರೆ ತಾಲ್ಲೂಕಿನಲ್ಲಿ ನಡೆದ ಮಾದಿಗ ಮಹಾಸಭಾ ನೌಕರರ ಸಂಘ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಧ್ಯಾರ್ಥಿಗಳ ಕುರಿತು ತಮ್ಮ ಅಮೂಲ್ಯವಾದ ಸಮಯವನ್ನ ವ್ಯರ್ಥ ಮಾಡಬೇಡಿ ಹಳೆಯ ಸಂಪ್ರಾದಾಯ ಮೌಡ್ಯತೆ ಕಂದಚಾರಗಳಿಗೆ ಬಲಿಯಾಗಿ ತಮ್ಮ ವಿದ್ಯಾಭ್ಯಾಸವನ್ನ ಮೊಟುಕುಗೋಳಿಸಿಕೊಳ್ಳಬಾರದು ವೈಜ್ಘಾನಿಕತೆ ಯುಗದಲ್ಲಿ ವೈಚಾರಿಕತೆ ಮನೋಭಾವನೆ ಬೆಳೆಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಹಿಡಿಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡುತ್ತಾರೆ.
ಪುನ ಅಲ್ಲಿನ ಮಾದಿಗ ಮಹಾಸಭಾ ನೌಕರರ ಸಂಘಕ್ಕೆ ವಿದ್ಯಾರ್ಥಿಗಳ ಏಳ್ಗಿಗಾಗಿ ಒಂದು ಲಕ್ಷ ರೂಗಳನ್ನ ನೀಡಿ ಪ್ರೋತ್ಸಾಹಿಸಿದ್ದಾರೆ ಇಂತ ಹತ್ತಾರು ಸಭೆ ಸಮಾರಂಭಗಳಿಗೆ ತೆರಳುವ ಜೆ.ಪಿ ಓಬಣ್ಣ ಹಾಗೂ ಅವರ ಶ್ರೀಮತಿ ಧರ್ಮಪತ್ನಿ ನಾಗವೇಣಿರವರ ಸಾಮಾಜಿಕ ಕಳಕಳಿಯ ಸಮುದಾಯದ ಏಳ್ಗಿಗೆ ಶ್ರಮಿಸುವುದಲ್ಲದೆ ಇತರೆ ಎಲ್ಲಾ ಬಡ ವರ್ಗದ ವಿಧ್ಯಾರ್ಥಿಗಳ ನೆರವಿಗೆ ಸಹಾಯಸ್ತ ಚಾಚುತ್ತಿರುವುದು ಶ್ಲಾಘನೀಯವಾಗಿದ್ದು ಇಂತ ಅಮೋಘವಾದ ಸೇವೆಗೆ ಇತ್ತಿಚಿಗೆ ಜಗಳೂರಿನಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜಗಳೂರು ಕ್ಷೇತ್ರದ ಸ್ಥಳಿಯ ಶಾಸಕರಾದ ಬಿ.ದೇವೇಂದ್ರಪ್ಪ
ಇಂತ ಆದರ್ಶ ದಂತಿಗಳ ಸೇವಾಕಾರ್ಯಕ್ಕೆ ಮತ್ತೋಷ್ಟು ಸಮಾಜಮುಖಿಯಾಗಿ ಸೇವೆ ದೊರಕಲಿ ಎಂದು ವೆದಿಕೆಯೊಂದರಲ್ಲಿ ಅಭಿನಂದಿಸಿದ್ದಾರೆ.
