ಜಗಳೂರು ತಾಲ್ಲೂಕಿನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತ
ಶೇ. 77.09 ರಷ್ಟು ಮತದಾನ ನಡೆದಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.
By shukradeshe news
editor m.rajappa vyasgondanahalli
Kannada | online news portal |Kannada news online date october 23 _10_2026

ಜಗಳೂರು ಪಟ್ಟಣದ ಸರ್ಕಾರಿ‌ ಪದವಿ‌ಪೂರ್ವ ಕಾಲೇಜಿನಲ್ಲಿ ಶಾಂತಿಯುತವಾಗಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದೃಶ್ಯ ಕಂಡ ಬಂದಿತು.ಇನ್ನು ಕ್ಷೇತ್ರದ ಶಾಸಕರ ಪುತ್ರ ಎಂ.ಡಿ ಕೀರ್ತಿಕುಮಾರ್ ಮತಗಟ್ಟೆ ಬಳಿ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು..

ಜಗಳೂರು‌ ತಾಲ್ಲೂಕಿನಲ್ಲಿ ಈ ಬಾರಿ ಸಹ ಅಗ್ನೆಯ ಪದವಿದರ ಚುನಾವಣೆ ಮತದಾನ ಶಾಂತಿಯುತವಾಗಿ ಜರುಗಿತು. ಬೆಳಿಗ್ಗೆಯಿಂದ ಆರಂಭವಾದ ಮತದಾನ ಸಂಜೆ ನಾಲ್ಕು ಗಂಟೆವರೆಗೆ ಮತದಾನ ನಡೆಯಿತು ಜಗಳೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ಹೊಸಕೆರೆ .ಬಿಳಿಚೋಡು ಮತದಾನ ಕೇಂದ್ರಗಳಲ್ಲಿ ಸೇರಿದಂತೆ ಒಟ್ಟು : ಶೇ.77.09 ರಷ್ಟು ಮತದಾನ ದಾಖಲಾಗಿದೆ.

  • .
    ಮತಗಳ ಎಣಿಕೆಯು ಅಕ್ಟೋಬರ್ ಇದೆ 27, 2026 ರಂದು ನಡೆಯಲಿದೆ.

ಜಗಳೂರು ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ ಆಗ್ನೇಯ ಪದವೀಧರ ಕ್ಷೇತ್ರದ ಮತಗಟ್ಟೆಗಳು ವಿಸ್ತರಣೆಯಾಗಿರುವುದು ವಿಶೇಷ.
ಎನ್ ಡಿ ಎ ಅಭ್ಯರ್ಥಿ ಕೆ.ಎಂ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ ಇವರ ನಡುವೆ ಬಿಗ್ ಪೈಟ್ ನೇರ ಹಣಾಹಣಿ ನಡೆದಿದೆ ಎನ್ನಲಾಗಿದೆ .ಕಾಂಗ್ರೆಸ್ ಅಭ್ಯರ್ಥಿ ಪರ ಕಳೆದ‌ ದಿನಗಳಿಂದಲೂ ಸಹ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಅವರ ಪುತ್ರ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ಅವರು ಪಟ್ಟಣ ಸೇರಿದಂತೆ ಗ್ರಾಮೀಣ ಬಾಗದಲ್ಲಿನ ಪದವಿದಾರ ಮತದಾರನ್ನ ಭೇಟಿ ನಿಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿ ಕಾಂಗ್ರೆಸ್ ಪರವಾಗಿ ಬಿರುಸಿನ ಪ್ರಚಾರ ನಡೆಸಿ ಗಮನ ಸೆಳೆದು ತನ್ನ ಕಾಂಗ್ರೆಸ್ ಅಸ್ಥಿತ್ವವನ್ನ ಉಳಿಸಿಕೊಳ್ಳಲು ಶ್ರಮಿಸಿದ್ದಾರೆ. ಅದೇ ರೀತಿಯಾಗಿ ಎನ್ ಡಿ ಎ ಅಭ್ಯರ್ಥಿ ಪರ ತಾಲ್ಲೂಕಿನಾದ್ಯಂತ ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ ಹಾಗೂ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಸೇರಿಂದತೆ ಮಾಜಿ ಸಚಿವ ಶಿವಯೋಗಿ ಸ್ವಾಮಿ ಅನೇಕರು ಪ್ರಚಾರ ನಡೆಸಿ ಅಭ್ಯರ್ಥಿ ಪರ ಮತದಾರರನ್ನ ಗಮನ ಸೆಳೆದಿದ್ದಾರೆ.

ಒಟ್ಟಾರೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ 10 ಮಂದಿ ಕಣದಲ್ಲಿದ್ದಾರೆ. ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್‌ , ಕಾಂಗ್ರೆಸ್‌ ಅಭ್ಯರ್ಥಿ ಶಶಿ ಹುಲಿಕುಂಟೇಮಠ ನಡುವೆ ನೇರ ಹಣಾಹಣಿ ಇದೆ. ಉಳಿದಂತೆ ಸರ್ವ ಜನತಾ ಪಾರ್ಟಿಯ ಜಿ.ಸಿ.ಪಟೇಲ್ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಕಪನಿಗೌಡ, ಚಿಕ್ಕರಾಜು ಯಾದವ್, ಲಕ್ಷ್ಮಯ್ಯ ಆರ್., ಲಕ್ಷ್ಮಿಕಾಂತ ಎಸ್.ಯಾದವ್, ಶಶಿ ಹುಲೀಕಟ್ಟೆ, ಸೈಯದ್ ಅಫಾಖ್ ಅಹಮದ್, ಅಡ್ವೊಕೇಟ್ ಬರೀದ್ ಅಖಾಡಲ್ಲಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರವು ಐದು ಜಿಲ್ಲೆಗಳಿಗೆ ವ್ಯಾಪಿಸಿದ್ದು ಒಟ್ಟು 1,77,017 ಮಂದಿ ಮತದಾರರಿದ್ದಾರೆ. ಒಟ್ಟಾರೆ ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರ ಇದೆ ಅಕ್ಟೋಬರ್ 27 ರಂದು ಹಣೆಬರಹ ಹೊರಬಿಳಲಿದ್ದು ಅಭ್ಯರ್ಥಿಗಳ ಭವಿಷ್ಯವನ್ನ ಮತದಾರರು ತನ್ನ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿ ಹಣೆಬರಹ ಬರೆಯಲಿದ್ದಾರೆ…

ಪ್ರಾಶಸ್ತ್ಯ ಮತದಾನ ಪದ್ಧತಿ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತದಾನ ಪದ್ಧತಿ ಅನುಸರಿಸಲಾಗುತ್ತದೆ. ಸಾರ್ವತ್ರಿಕ ಚುನಾವಣೆಯಂತೆ ಈ ಚುನಾವಣೆಯಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿ ಗೆಲ್ಲುವುದಿಲ್ಲ. ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 50 ಮತ ಪಡೆದ ಅಭ್ಯರ್ಥಿ ಗೆಲ್ಲುತ್ತಾರೆ.

ಮತದಾರರು ತಮ್ಮ ಆದ್ಯತೆಯ ಆಧಾರದಲ್ಲಿ ಅಭ್ಯರ್ಥಿಗಳಿಗೆ 1, 2, 3 ಹೀಗೆ ಪ್ರಾಶಸ್ತ್ಯ ಸೂಚಿಸಬಹುದು. ಆದರೆ, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯವಾಗಿ ‘1’ ಎಂದು ಗುರುತಿಸಿದರೆ ಅಥವಾ ನಿಯಮಾನುಸಾರ ಮತದಾನ ಮಾಡದಿದ್ದರೆ ಮತ ಅಸಿಂಧು ಆಗಲಿದೆ.

.

.

Leave a Reply

Your email address will not be published. Required fields are marked *

You missed

error: Content is protected !!