ಅಣ್ಣನ ಜೀವ ಉಳಿಸಿದ ‘ಪ್ರೇಮದ ಊರಲಿ’ ಸಿನಿಮಾ: ಮನೆಯಲ್ಲಿದ್ದ ತಮ್ಮ ಹೆ**ಣವಾದ ದುರಂತ ಕಥೆ!

ವಿಧಿಯ ಆಟ ಎಷ್ಟು ವಿಚಿತ್ರ ನೋಡಿ… ಒಂದೇ ಒಂದು ಸಿನಿಮಾಗೆ ಹೋದ ಕಾರಣಕ್ಕೆ ಅಣ್ಣ ಸಾವ*ನ ದವಡೆಯಿಂದ ಪಾರಾಗಿದ್ದಾನೆ. ಆದರೆ ಮನೆಯಲ್ಲೇ ಮಲಗಿದ್ದ ಮುಗ್ಧ ತಮ್ಮ ಮಾತ್ರ ಸ್ವಂತ ಚಿಕ್ಕಪ್ಪನ ಮಚ್ಚಿಗೆ ಬಲಿಯಾಗಿ ಹೆ=ಣವಾಗಿದ್ದಾನೆ!

ಬೆಂಗಳೂರಿನ ಸೊಲದೇವನಹಳ್ಳಿಯ ಐವರಕಂಡಪುರದಲ್ಲಿ ನಡೆದಿರುವ ಈ ಭೀಕರ ಹ**ತ್ಯೆ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ.

ಅನಾಥ ಅಣ್ಣ-ತಮ್ಮನಿಗೆ ಆ ಒಂದು ಎಕರೆ ಆಸ್ತಿಯೇ ಕಂಟಕವಾಯ್ತಾ?
ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಅಣ್ಣ ಯಶವಂತ್ ಮತ್ತು ತಮ್ಮ ಕೃಷ್ಣ ಇಬ್ಬರೇ ಇಂದಿರಾ ಕಾಲೋನಿಯ ಮನೆಯಲ್ಲಿ ಬದುಕುತ್ತಿದ್ದರು. ಕೂಲಿ ಕೆಲಸ ಮಾಡಿಕೊಂಡು ಅಣ್ಣ ತಮ್ಮನನ್ನು ಓದಿಸುತ್ತಿದ್ದರೆ, ತಮ್ಮ ಕೃಷ್ಣ SSLC ವ್ಯಾಸಂಗ ಮಾಡುತ್ತಿದ್ದ. ಇವರಿಬ್ಬರ ಬದುಕಿಗೆ ಕಂಟಕವಾಗಿದ್ದು ತಂದೆ ಮುನಿರಾಜು ಹೆಸರಲ್ಲಿದ್ದ ಕೇವಲ 1 ಎಕರೆ ಆಸ್ತಿ!

ಈ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಇವರ ಚಿಕ್ಕಪ್ಪ ಮೋಹನ್, ಅಣ್ಣನ ಮಕ್ಕಳು ಮತ್ತು ಸಹೋದರಿಯ ನಕಲಿ ಸಹಿ ಹಾಕಿ ಬಿಲ್ಡರ್‌ಗೆ ಮಾರಲು ಮುಂದಾಗಿದ್ದ. ಆದರೆ ನಕಲಿ ಸಹಿಯ ವಿಷಯ ತಿಳಿದ ಬಿಲ್ಡರ್, ಇಬ್ಬರು ಹುಡುಗರಿಗೂ ಅವರ ಹಕ್ಕಿನ ಪಾಲು ಸಿಗಲೇಬೇಕೆಂದು ಅನಾಥ ಮಕ್ಕಳ ಖಾತೆಗೆ ತಲಾ ₹13 ಲಕ್ಷ ಮುಂಗಡ ಹಣ ಜಮೆ ಮಾಡಿಸಿದ್ದರು. ಇದೇ ಹಂತಕ ಚಿಕ್ಕಪ್ಪನ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇಬ್ಬರನ್ನೂ ಮುಗಿಸಿದರೆ ಇಡೀ ಆಸ್ತಿ ಮತ್ತು ದುಡ್ಡು ತನಗೇ ದಕ್ಕುತ್ತದೆ ಎಂದು ಸಂಚು ರೂಪಿಸಿದ್ದ.

ಅಂದು ರಾತ್ರಿ ನಡೆದಿದ್ದೇನು? ಸಿನಿಮಾಗೆ ಹೋಗಿದ್ದ ಅಣ್ಣ ಬದುಕಿದ್ದೇ ರೋಚಕ!
ಸೋಮವಾರ ರಾತ್ರಿ ಯಶವಂತ್ ಥಿಯೇಟರ್‌ಗೆ ‘ಪ್ರೇಮದ ಊರಲಿ’ ಸಿನಿಮಾ ನೋಡಲು ಹೋಗಿದ್ದ. ಅಣ್ಣ ಬರುವುದು ತಡವಾಗುತ್ತದೆ ಎಂದು ಅರಿತ ತಮ್ಮ ಕೃಷ್ಣ ಮನೆಯಲ್ಲಿ ಒಬ್ಬನೇ ನಿದ್ದೆಗೆ ಜಾರಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರಾಕ್ಷಸ ರೂಪದ ಚಿಕ್ಕಪ್ಪ, ಕೈಯಲ್ಲಿ ಮಚ್ಚು ಹಿಡಿದು ಮನೆಗೆ ನುಗ್ಗಿದ್ದಾನೆ. ಮಲಗಿದ್ದ ಬಾಲಕ ಕೃಷ್ಣನ ಮೇಲೆ ಮನಬಂದಂತೆ ಎರಗಿ, ಕೊಚ್ಚಿ ಕೊ*ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಾಲಕ ಪ್ರಾಣ ಬಿಡುತ್ತಿದ್ದಂತೆ ಹಂತಕ ನೇರವಾಗಿ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಮಧ್ಯರಾತ್ರಿ ಸಿನಿಮಾ ಮುಗಿಸಿಕೊಂಡು ಮನೆಗೆ ಬಂದ ಅಣ್ಣ ಯಶವಂತ್, ತಮ್ಮನಿಗೆ ತೊಂದರೆ ಕೊಡುವುದು ಬೇಡವೆಂದು ಸದ್ದಿಲ್ಲದೆ ಬಂದು ಮಲಗಿಕೊಂಡಿದ್ದಾನೆ. ಬೆಳ್ಳಂಬೆಳಗ್ಗೆ ಪೊಲೀಸರು ಬಾಗಿಲು ತಟ್ಟಿದಾಗಲೇ ಅಣ್ಣನಿಗೆ ವಿಷಯ ಗೊತ್ತಾಗಿದ್ದು! ರೂಂ ಒಳಗೆ ಹೋಗಿ ನೋಡಿದಾಗ ಪ್ರೀತಿಯ ತಮ್ಮ ರ*ಕ್ತದ ಮಡುವಿನಲ್ಲಿ ಹೆaaಣವಾಗಿ ಬಿದ್ದಿದ್ದ.

ಒಂದು ವೇಳೆ ಅಂದು ರಾತ್ರಿ ಯಶವಂತ್ ‘ಪ್ರೇಮದ ಊರಲಿ’ ಚಿತ್ರಕ್ಕೆ ಹೋಗದೆ ಮನೆಯಲ್ಲೇ ಇದ್ದಿದ್ದರೆ, ಹಂತಕ ಇಬ್ಬರನ್ನೂ ಕೊಚ್ಚಿ ಕೊಲ್ಲುತ್ತಿದ್ದನೋ ಏನೋ! ಸಿನಿಮಾ ಅಣ್ಣನ ಪ್ರಾಣವನ್ನೇನೋ ಉಳಿಸಿತು, ಆದರೆ ಕಣ್ಣೆದುರೇ ಹೆಣವಾಗಿ ಮಲಗಿರುವ ತಮ್ಮನನ್ನು ಕಂಡು ಆ ಅಣ್ಣನ ಆಕ್ರಂದನ ಮುಗಿಲು ಮುಟ್ಟಿದೆ.

ಹಣ ಮತ್ತು ಆಸ್ತಿಗಾಗಿ ಸ್ವಂತ ರಕ್ತದ ಸಂಬಂಧವನ್ನೇ ಬaaಲಿ ಪಡೆದ ಈ ಕಲಿಯುಗದ ಕಟುಕನಿಗೆ ಕಠಿಣ ಶಿಕ್ಷೆಯಾಗaaಲಿ

Leave a Reply

Your email address will not be published. Required fields are marked *

You missed

error: Content is protected !!