ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು ಕೆಲವೆ ಅಧಿಕಾರಿಗಳು‌ ಪೂರ್ವಭಾವಿ ಸಭೆಗೆ ಹಾಜುರು ಬಹುತೇಕ ಅಧಿಕಾರಿಗಳು ಚಕ್ಕರ್

By shukradeshe news
editor m.rajappa vyasgondanahalli
Kannada | online news portal |Kannada news online date october 19 _10_2026

ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಕೆಲ ಇಲಾಖೆ ಅಧಿಕಾರಿಗಳು
ಕನ್ನಡ ನಾಡು ನುಡಿ‌ ಸಭೆಗೆ ನಿರ್ಲಕ್ಷ್ಯೆ ತೋರಿದ್ದಾರೆ ಎಂದು ಸಾರ್ವಜನಿಕರ ಆರೋಪ

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ತಹಶೀಲ್ದಾರ್ ಗುರುಬಸವರಾಜ ತಿಳಿಸಿದ್ದಾರೆ.

ಜಗಳೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಗುರುಬಸವರಾಜ ಸಭೆಯನ್ನುದ್ದೇಶಿಸಿ ಮಾತನಾಡಿದರು

70 ನೇ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಕಾರದಿಂದ ಜಗಳೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಕನ್ನಡ ನಾಡು ನುಡಿ. ನೆಲ. ಜಲ .ನಾಡ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲು ತಮ್ಮ ತಮ್ಮ ಇಲಾಖೆಗಳಿಗೆ ನೀಡಿದ ಜವಾಬ್ದರಿಯನ್ನು ನಿರ್ವಹಣೆ ಮಾಡುವಂತೆ ಕರೆ ನೀಡಿದರು.

ಕೆಲವೆ ಅಧಿಕಾರಿಗಳು‌ ಪೂರ್ವಭಾವಿ ಸಭೆಗೆ ಹಾಜುರು ಬಹುತೇಕ ಅಧಿಕಾರಿಗಳು ಚಕ್ಕರ್
ನವೆಂಬರ್ ೧ ಕನ್ನಡ ರಾಜ್ಯೋತ್ಸವ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಬೇಕಾದ ತಾಲ್ಲೂಕು ಮಟ್ಟದ ಅಧಿಕಾರಿಗಳೆ ಗೈರಾಗಿದ್ದಾರೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ

70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಯಲು ರಂಗ ಮಂದಿರ ಆವರಣದಲ್ಲಿ‌ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಅರ್ಥಪೂರ್ಣವಾಗಿ ಆಚರಿಸುವ ಚಿಂತನೆಯಿದೆ ಎಂದರು ಈ ಸಂದರ್ಭದಲ್ಲಿ ಇಓ ಕೆಂಚಪ್ಪ ಪಪಂ ಮುಖ್ಯಾ ಅಧಿಕಾರಿ ಲೋಕ್ಯಾನಾಯ್ಕ್. ತಾಲ್ಲೂಕು ವೈಧ್ಯಾಧಿಕಾರಿ ವಿಶ್ವನಾಥ ಸೇರಿದಂತೆ ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!