ಸಮಾಜ ಸೇವೆ ಡಾ. ಸುಜಾತಾಗೆ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರಿನ ಎಸ್ ಎಸ್ ಕಲಸಂಗಮ ಟ್ರಸ್ಟ್ ವತಿಯಿಂದ ಮಲ್ಲೇಶ್ವರಂ ವರದಾಚಾರ್ ಮಂತ್ರಿ ಮಾಲ್ ಸಭಾಂಗಣದಲ್ಲಿ ಆಯೋಜಿಸಿದ, ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ
ಜಗಳೂರಿನ ಸಮಾಜ ಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ದಾರಿದೀಪ ಟ್ರಸ್ ನ ಸಂಸ್ಥಾಪಕೆ ಡಾ. ಸುಜಾತ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಾಜ ಸೇವೆಯಲ್ಲಿ ನಿತ್ಯ ಸೇವೆ ಸಲ್ಲಿಸುತ್ತಿರುವ ಡಾ. ಸುಜಾತ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ಶಶಿಧರ್ ಕೋಟೆ ಚಲನಚಿತ್ರ ನಟರು ಖ್ಯಾತ ಗಾಯಕರು, dr.ಆಂಜನಪ್ಪ ಟಿ.ಎಚ್ ಖ್ಯಾತ ಆರೋಗ್ಯ ತಜ್ಞರು. ತನುಪ್ರಸಾದ್ ಚಿತ್ರ ನಟಿ . ಡಾ. ದರ್ಶನ್ ಬಿ
ಶಿವಕುಮಾರ್ ಬಿ.ಕೆ. ಚಲನಚಿತ್ರ ನಟರು ನಿರ್ಮಾಪಕರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ರಾಜುಗೌಡ ಪ್ರಗತಿಪರ ರೈತರು. ಡಾ.ಡಿ ಪೂಜಾರಿ ಹುಂಡೇಕಲ್. ಡಾ.ಭ್ರಮರ ಶಿವಶಂಕರ್. ಭಾಗ್ಯಶ್ರೀ ಬಾಬಣ್ಣ. ಡಾ. b ಶಂಕರ್. ಸಾಹಿತ್ಯ , ಸಂಗೀತ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
