ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಕೆಚ್ಚೆನಹಳ್ಳಿ ಎಕೆ ಕಾಲೂನಿ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಸುದ್ದಿ ಜಗಳೂರು
By shukradeshe news
editor m.rajappa vyasgondanahalli
Kannada | online news portal |Kannada news online date october 11_10_2026

ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ ಇಂದು ಬಿಜೆಪಿ‌ ಪಕ್ಷಕ್ಕೆ ಎಕೆ ಕಾಲೂನಿಯ ಸುಮಾರು 20 ಕ್ಕೂ ಹೆಚ್ಚು ಯುವಕರು ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು .

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಯುವಕರಿಗೆ ಬಿಜೆಪಿ ಚಿಹ್ನೆಯ ಶಾಲು ಹಾರ ಹಾಕಿ ಪಕ್ಷಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಗೆಲುವ ಸಾಧಿಸಿ ಅಧಿಕಾರ ಹಿಡಿಯುವುದು ಶತ ಸಿದ್ದ ಕಾರ್ಯಕರ್ತರು
ಪಕ್ಷನಿಷ್ಠೆಗೆ ಬದ್ದರಾಗುವಂತೆ ತಿಳಿಸಿದ್ದಾರೆ.

ಗ್ರಾಮದ ಗಾಯಕ ವೃಷಬೇಂದ್ರ ಅವರು ಈಗಾಗಲೇ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಸದಸ್ಯರಾಗಿ ಆಯ್ಕೆಯಾಗಿದ್ದು ಅವರ ಸಮ್ಮುಖದಲ್ಲಿ ಗ್ರಾಮದ ಸುಮಾರು 20 ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ‌ಯಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸಲಿದ್ದಾರೆ. ಈಗಾಗಲೇ ಗ್ರಾಮೀಣ ಬಾಗದಲ್ಲಿ‌ ನಾವು ನಿರಂತರವಾಗಿ ಪಕ್ಷದ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಪಕ್ಷವನ್ನ ತಳಮಟ್ಟದಿಂದ ಸಂಘಟಿಸುವುದೇ ಮುಂದಿನ ಜಿಪಂ ತಾಪಂ ಚುನಾವಣೆ ದಿಕ್ ಸೂಜಿಯಾಗಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲ ಅದ್ಯಕ್ಷರಾದ ಎ.ಎಂ ಮರುಳಾರಾಧ್ಯ ಮಾತನಾಡಿ ನಮ್ಮ ಪಕ್ಷದ ತತ್ವಸಿದ್ದಾಂತಗಳನ್ನು ಒಪ್ಪಿಕೊಂಡು ಬರುವಂತ ಯುವಕರಿಗೆ ಸದಾ ನಮ್ಮ ಪಕ್ಷ ಸ್ವಾಗತಿಸಲಿದೆ .ದಲಿತ ಸಮುದಾಯಕ್ಕೆ ಪ್ರಾತ್ಯನಿಧ್ಯ ನೀಡಿರುವ ಏಕೈಕ ಪಕ್ಷ ಎಂದರೆ ಅದು ಬಿಜೆಪಿ
ಎಂದರು.
ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿ ಈ ದಿನ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ‌ ಪಕ್ಷಕ್ಕೆ ಸೇರ್ಪಡೆ ಆದಂತ ಯುವಕರು ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಕ್ತಿಯಾಗಲಿದ್ದಾರೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.

ಕೆಚ್ಚೆನಹಳ್ಳಿ ಗ್ರಾಮದಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಊಳಿಗಮಾನ್ಯ ಸಂಸ್ಕೃತಿಯಲ್ಲಿ ನಮ್ಮಂತಹ ಪ್ರಜ್ಘಾವಂತ‌ ಯುವಕರನ್ನ ಕಡೆಗಣಿಸಿ ತಾವೇ ಸಕಲ ಸೌಲಭ್ಯದ ಪಲಾನುಭವಿಗಳಾಗಿ ನಮ್ಮ ದಲಿತ ಸಮುದಾಯವನ್ನ ಕಡೆಗಣಿಸಲಾಗಿದೆ ಆದ್ದರಿಂದ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆವೆ ಎಂದು ಗ್ರಾಮದ ಯುವಕ ರಾಖೇಶ್ ಆರೋಪ.
ಗ್ರಾಮದ ಮಂಜುನಾಥ .ಪ್ರಸನ್ನ. ಶಿವಕುಮಾರ್ ಚಂದ್ರಪ್ಪ .ಮಹೇಶ್.ಆನಂದಪ್ಪ .ನಾಗಪ್ಪ. ಬೀಮಣ್ಣ‌.ಹಾಲೇಶ್. ರಾಘವೇಂದ್ರ. ಒಬಜ್ಜ.ನಾಗರಾಜ್. ಪರಶುರಾಮ.ಹಾಲೇಶಿ ಕುಬೇರ .ನಿಂಗರಾಜ್. ದೇವರಾಜ್ .ಸುರೇಶ್ ಸೇರಿದಂತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಘಟಕದ ಮುಖಂಡ ಚಿಕ್ಕ ಉಜ್ಜಿನಿ ಅಂಜಿನಪ್ಪ. ಜಿಲ್ಲಾ ಎಸ್ಸಿ ಮೊರ್ಚಾ ಅದ್ಯಕ್ಷ ಎಚ್ ಹನುಮಂತಪ್ಪ.ಮಾಜಿ ಗ್ರಾಮ ಪಂಚಾಯಿತಿ ಅದ್ಯಕ್ಷರಾದ.ಕೆ.ವಿ ರವಿಕುಮಾರ್. ಬಿಜೆಪಿ ಮುಖಂಡ ಬಿದರಕೆರೆ ರವಿಕುಮಾರ್. ಮುಖಂಡ ಗುತ್ತಿದುರ್ಗ ತಿಪ್ಪೇಸ್ವಾಮಿ. ಮಹಾಂತೇಶ್. ಎಸ್. ಟಿ ಮೊರ್ಚಾ ಮುಖಂಡ ಬಸವರಾಜ್. ಬಿಜೆಪಿ ಮುಖಂಡರಾದ ಧರ್ಮನಾಯ್ಕ್ .ಲ್ಯಾಬ್ ಶಿವು. ಗ್ರಾಮದ ಬಿಜೆಪಿ ಮುಖಂಡರು ವಸಂತಕುಮಾರ್ ಸಂಪತಕುಮಾರ್ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!