ಜಗಳೂರು ಬ್ರೇಕಿಂಗ್ ನ್ಯೂಸ್

ಜಗಳೂರು ಪಟ್ಟಣದ ಬಿದರಕೆರೆ ರಸ್ತೆ ಬದಿ ಮರವೊಂದಕ್ಕೆ ಸುಮಾರು 53 ವರ್ಷದ ರೇಣುಕಮ್ಮ ಎಂಬ ಮಹಿಳೆಯೊಬ್ಬಳು ನೇಣಿಗೆ ಶರಣಾಗಿದ್ದಾಳೆ

ಜಗಳೂರು ಪಟ್ಟಣದ ಬಿದರಕೆರೆ ರಸ್ತೆ ಬದಿ ಜೀವನ್ ಡಾಬ ಎದುರುಗಡೆ ಮರವೊಂದಕ್ಕೆ ಜಗಳೂರು ಟೌನ್ ನ ಕ್ಯಾಂಪ್ ರೇಣುಕಮ್ಮ ಗಂಡ ರಾಜ ಎಂಬುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ..


ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯ
ದಿನಾಂಕ:26.10.2026 ರಂದು ಬೆಳಿಗ್ಗೆ 08-00 ರಿಂದ 11-30 ಸಮಯದಲ್ಲಿ ಸ್ಥಳ ಬಿದರಕೆರೆ ರಸ್ತೆ ಕೆ.ಇ.ಬಿ ಆಫೀಸ್ ರಸ್ತೆಯ ಪಕ್ಕದಲ್ಲಿ ಜಗಳೂರು ಟೌನ್.
ಮೃತರ ಸಂಬಂಧಿ ಆಶಾ ಭೋವಿ ಜನಾಂಗದ ನೀಡಿದ ದೂರಿನ ಮೇರೆಗೆ ಸಾಲಬಾಧೆಯಿಂದ ಮನನೊಂದು ಮನೆಯಿಂದ ಸ್ಯಾರಿಯನ್ನು ತೆಗೆದುಕೊಂಡು ಬಂದು ಮರಕ್ಕೆ ನೇಣು ಬಿಗಿದುಕೊಂಡು ಹತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಪ್ರಕರಣ ನೀಡಿದ ದೂರಿನಲ್ಲಿ ದಾಖಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಸಿದಂತೆ ಪೊಲೀಸ ಇನ್ಸ್ಪಕ್ಟರ್ ಸಿದ್ದರಾಮಯ್ಯ ಹಾಗೂ ಅವರ ಸಿಬ್ಬಂದಿಗಳು‌ ಧಾವಿಸಿ ಮೃತ ರೇಣುಕಮ್ಮ‌ನನ್ನು‌ ಶವಗಾರ ಕೋಠಡಿಗೆ ಸ್ಥಳಂತರಿಸಿ‌ ತನಿಖೆ ಮುಂದುವರೆಸಿದ್ದಾರೆ.. ಮತ್ತಷ್ಟು ನಿಖರ ಮಾಹಿತಿಗಾಗಿ ತನಿಖೆ ನಡೆಸಲಿದ್ದೆವೆ ಎಂದು ಪೊಲೀಸ್ ಇನ್ಸ್ಪಕ್ಟರ್ ಸಿದ್ದರಾಮಯ್ಯ ತಿಳಿಸಿದ್ದಾರೆ..

Leave a Reply

Your email address will not be published. Required fields are marked *

You missed

error: Content is protected !!