ಜಗಳೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಿಂತಿ ಅಂಗವಾಗಿ ಮಹಾನ್ ಚೇತನ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಭಾಗಿಯಾಗಿದ್ದರು.
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅದ್ಯಕ್ಷರಾದ ತಹಶೀಲ್ದಾರ್ ಗುರುಬಸವರಾಜ್ ಶುಭಾ ಕೋರಿದರು..
ವಾಲ್ಮೀಕಿ ಮಹರ್ಷಿಗಳು ವಿಶ್ವಕ್ಕೆ ಮಾದರಿಯಾಗಿದ್ದಾರೆ ಹಿರಿಯ ಪತ್ರಕರ್ತ ಎಂ.ಎಚ್ ಚೌಡಪ್ಪ ಬಸವನಕೋಟೆ ವಿಶ್ವಾಸ ವ್ಯಕ್ತಪಡಿಸಿದರು
ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ ಮಹರ್ಷಿ ವಾಲ್ಮೀಕಿ ಅವರು ಇಡೀ ವಿಶ್ವಕ್ಕೇ ಒಂದು ಅತ್ಯುನ್ನತ ಮಾದರಿ ಮತ್ತು ಪ್ರೇರಣೆಯಾಗಿದ್ದಾರೆ. ವಿಶ್ವದ ಮಹಾನ್ ಆದಿಕಾವ್ಯವಾದ ‘ರಾಮಾಯಣ’ವನ್ನು ರಚಿಸಿದ ಅವರು, ಕೇವಲ ಒಬ್ಬ ಸಾಹಿತಿ ಅಥವಾ ಕವಿಯಷ್ಟೇ ಅಲ್ಲ; ಮಾನವೀಯ ಮೌಲ್ಯಗಳು, ಸಂಸ್ಕಾರ ಮತ್ತು ಧರ್ಮದ ತಳಹದಿಯನ್ನು ಜಗತ್ತಿಗೆ ಬೋಧಿಸಿದ ಯುಗಪುರುಷರಾಗಿದ್ದಾರೆ.ಎಂದರು
ರೈತ ಸಂಘದ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿದರು ಒಬ್ಬ ಸಾಮಾನ್ಯ ಬೇಡನಾಗಿದ್ದ (ರತ್ನಾಕರ) ವ್ಯಕ್ತಿ, ತನ್ನ ಕಠಿಣ ತಪಸ್ಸು ಮತ್ತು ಸಾಧನೆಯ ಮೂಲಕ ಮಹರ್ಷಿಯಾಗಿ ಮಾರ್ಪಟ್ಟಿದ್ದು ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ಉದಾಹರಣೆ. ಮನುಷ್ಯ ತನ್ನ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಸನ್ಮಾರ್ಗದಲ್ಲಿ ನಡೆದರೆ ಉನ್ನತ ಸ್ಥಾನಕ್ಕೇರಬಹುದು ಎಂಬ ಭರವಸೆಯನ್ನು ಇವರ ಜೀವನ ನೀಡುತ್ತದೆ.ಎಂದರು .
ಕಾಂಗ್ರೆಸ್ ಮುಖಂಡ ಸಿ ತಿಪ್ಪೇಸ್ವಾಮಿ ಮಾತನಾಡಿದರು
ಜಗತ್ತಿನ ಪ್ರಪ್ರಥಮ ಮಹಾಕಾವ್ಯವಾದ ರಾಮಾಯಣವನ್ನು ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿ ಇವರಿಗೆ ಸಲ್ಲುತ್ತದೆ. ಇದರಲ್ಲಿರುವ ಶ್ಲೋಕಗಳು, ಕಾವ್ಯ ರಚನೆಯ ಶೈಲಿ ಮತ್ತು ಸಾಹಿತ್ಯಿಕ ಮೌಲ್ಯಗಳು ಇಂದಿಗೂ ಜಗತ್ತಿನಾದ್ಯಂತ ಅಧ್ಯಯನಕ್ಕೊಳಪಟ್ಟಿವೆ.
- ಆದರ್ಶ ಮೌಲ್ಯಗಳ ಬೋಧನೆ: ಸತ್ಯ, ಧರ್ಮ, ಕರ್ತವ್ಯ ನಿಷ್ಠೆ, ತಂದೆ-ತಾಯಿಯ ಗೌರವ, ಭ್ರಾತೃತ್ವ ಮತ್ತು ಆದರ್ಶ ರಾಜಧರ್ಮ ಹೇಗಿರಬೇಕೆಂದು ರಾಮನ ಪಾತ್ರದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
- ಸಾಮಾಜಿಕ ಸಮಾನತೆ ಮತ್ತು ಕರುಣೆ: ಬೇಡನೊಬ್ಬನು ಹಕ್ಕಿಯನ್ನು ಕೊಂದಾಗ ಇವರ ಬಾಯಿಂದ ಮೂಡಿಬಂದ “ಮಾ ನಿಷಾದ…” ಎಂಬ ಮೊದಲ ಶ್ಲೋಕವೇ ಹಿಂಸೆಯ ವಿರುದ್ಧದ ಧ್ವನಿಯಾಗಿದೆ. ಪ್ರಾಣಿ-ಪಕ್ಷಿಗಳ ಮೇಲಿನ ಕರುಣೆ ಮತ್ತು ಪ್ರಕೃತಿ ಪ್ರೇಮವನ್ನು ಅವರು ಅಂದೇ ಜಗತ್ತಿಗೆ ಸಾರಿದ್ದರು ಎಂದು ವಿಶ್ಲೇಸಿದರು.
ನೀರಾವರಿ ಹೋರಾಟಗಾರ ವಕೀಲರಾದ ಆರ್ ಒಬಳೇಶ್ ಮಾತನಾಡಿ ರಾಜ್ಯದಲ್ಲಿ ನಮ್ಮ ನಾಯಕ ಸಮುದಾಯ ಬಹುಸಂಖ್ಯೆಯಲ್ಲಿದ್ದು 7.5 ಮೀಸಲಾತಿ ಗೊಂದಲಮಯವಾಗಿದೆ. ಆಳುವ ವರ್ಗದವರು ನಮ್ಮ ಹಕ್ಕಿನ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು .ಅನೇಕ ವರದಿಗಳು ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರು ನೂರುಂದು ತಳುಕು ಹಾಕಿ ಇನ್ನಿತರೆ ಸಮುದಾಯಗಳನ್ನು ಎಸ್ಟಿಗೆ ಸೇರಿಸಿ ಸಮಾಜವನ್ನ ತುಳಿಯುವ ಷಡ್ಯಂತ್ರ್ಯ ಸರ್ಕಾರಗಳು ಕೈಬಿಟ್ಟು ನಮಗೂ ಸಹ ಒಳ ಮೀಸಲಾತಿ ಅನಿವಾರ್ಯ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ಅಧ್ಯಕ್ಷ ಬುಳನಹಳ್ಳಿ ನಾಗರಾಜ್. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಇಓ ಕೆಂಚಪ್ಪ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರರಾವ್ .ಸಮಾಜದ ಮುಖಂಡ ಸಿದ್ದಣ್ಣ. ಮುಖಂಡರಾದ ಜಗಳೂರಯ್ಯ. ಮುಖಂಡರಾದ . ಡಿ ಆರ್ ಹನುಮಂತಪ್ಪ. ಮಾಜಿ ನಾಯಕ ಸಮಾಜದ ಕಾರ್ಯಧರ್ಶಿ ಲೋಕಣ್ಣ. ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್. ಮುಖಂಡ ಬಿಸ್ತುವಳ್ಳಿ ಬಾಬು.ನಾಗರಾಜ್ ವಕೀಲರಾದ ಲಕ್ಷ್ಮಣ .ಮಾಜಿ ತಾಪಂ ಸದಸ್ಯ ಕಾನನಕಟ್ಟೆ ಕುಬೇಂದ್ರಣ್ಣ ಸೇರಿದಂತೆ ಮುಂತಾದವರು ಹಾಜುರಿದ್ದರು.
*
