ನೆಪ ಬಿಡಿ ಜನರ ಸಮಸ್ಯೆಗಳಿಗೆ ಸ್ವಂದಿಸಿ‌ ಕೆಲಸ ಮಾಡಿ ಜಗಳೂರು ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಶೀಘ್ರವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಹಿತ್ಯ ಆಲದಕಟ್ಟೆ ಪಿಡಿಓ ಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.

ಜಗಳೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಹಿತ್ಯ ಆಲದಕಟ್ಟೆ ನೇತೃತ್ವದಲ್ಲಿ ಪ್ರಗತಿಪರ ಪರಿಶೀಲನೆ ಸಭೆ ಏರ್ಪಡಿಸಲಾಗಿತ್ತು. ಒಂದು ವಾರದೊಳಗೆ ಗ್ರಾಮಗಳಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಶಶ್ವಾತ ಪರಿಹಾರ ನೀಡಲು ಕರ್ತವ್ಯ ಪಾಲನೆ ಮಾಡಿ .ಶುದ್ದ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಿ ಶುದ್ದ ನೀರು ಒದಗಿಸಬೇಕು. ಕುಡಿಯುವ ನೀರಿಗೆ ಅನುದಾನ ಕೊರತೆಯಿಲ್ಲ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅವಶ್ಯಕತೆಯಿರುವ ಸೌಲಭ್ಯಗಳನ್ನು ಒದಗಿಸಿ ಗ್ರಾಮಗಳ ನೈರ್ಮಲ್ಯ ಕಾಪಾಡಿ ಪಂಚಾಯಿತಿಗಳಿಗೆ ಜನರನ್ನು ಅಲೆದಾಡಿಸದೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ನನ್ನ ವ್ಯಾಪ್ತಿಗೆ ಜಿಲ್ಲೆಯಲ್ಲಿ 852 ಹಳ್ಳಿಗಳು ಬರಲಿದ್ದು ಪ್ರತಿ ಗ್ರಾಮ ಪಂಚಾಯಿತಿಗೆ ತಮ್ಮ ಗಮನಕ್ಕಿಲ್ಲದೆ ದಿಡೀರನೆ ಭೇಟಿ‌ ನೀಡಿ ಜನರ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕುವೆ ಪಿಡಿಓ ಅಧಿಕಾರಿಗಳು‌ ಬೆಜವಾಬ್ದರಿ ಬಿಟ್ಟು ಕರ್ತವ್ಯ ಪಾಲನೆ ಮಾಡುವಂತೆ ಮಾರ್ಮಿಕವಾಗಿ ತಾಕಿತು ಮಾಡಿದರು.

ಸಭೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಂತಹ ಸಾರ್ವಜನಿಕರು‌ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ರೈತ ಸಂಘದ ಮುಖಂಡರು‌.ದಲಿತ ಸಂಘಟನೆ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ನೇರವಾಗಿ ಆರೋಪಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಭರಮಸಮುದ್ರ ಕುಮಾರ್ ಮಾತನಾಡಿ‌ ಹನುಮಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಚರಂಡಿ ಸ್ವಚತೆ . ಕುಡಿಯುವ ನೀರಿನ ಸಮಸ್ಯೆ. ವಿದ್ಯುತ್ . ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರ ಮೂಲ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ನಿರ್ಲಕ್ಷ್ಯೆವಹಿಸಿದ್ದಾರೆ ಸರಿಯಾದ ರೀತಿ ಕರ್ತವ್ಯಕ್ಕೆ ಹಾಜುರಾಗುತ್ತಿಲ್ಲ .ಆರ್ಹ ಫಲಾನುಭವಿಗಳಿಗೆ ಇಸ್ವತ್ತು ನೀಡದೇ ಸತಾಹಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಂತೆ ಪಿಡಿಓ ಶಶಿಧರ ಪಾಟೀಲ್ ಗ್ರಾಮದಲ್ಲಿ ಚರಂಡಿ ಇನ್ನಿತರೆ ಸ್ವಚತೆ ಕೈಗೊಂಡಿದ್ದೆವೆ ಗ್ರಾಮದ ಜನರ ಸಹಕಾರ ಬೇಕೆಂದರು

ದಸಂಸ ಸಂಚಾಲಕ ಸೂರಗೊಂಡನಹಳ್ಳಿ ಕುಬೇರಪ್ಪ ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತಾಲ್ಲೂಕಿನ ವಿವಿಧ ಎಸ್ಸಿ ಕಾಲೂನಿಗಳಿಗೆ ಭೇಟಿ ನೀಡುತ್ತಿಲ್ಲ ಎಸ್ಸಿ ಎಸ್.ಟಿ ಸಮುದಾಯಗಳ ಬಗ್ಗೆ ಕುಂದು ಕೊರತೆ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ ಈ ಸಮುದಾಯಕ್ಕೆ ಮಿಸಲಿರುವ 22.5 ಅನುದಾನವನ್ನ ಸಮರ್ಪಕವಾಗಿ ಬಳಕೆ ಮಾಡದೇ ಕಾಲೂನಿಗಳಲ್ಲಿ ಚರಂಡಿ ಅಶುಚಿತ್ವದಿಂದ ಕೂಡಿದ್ದು ರೋಗರುಜಿನೆಗಳು ಬರುವ ಅತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಜಗಳೂರು ಬರಪೀಡಿತ ಪ್ರದೇಶ ಮಳೆ ಬೆಳೆ ಇಲ್ಲದೆ ದುಡಿಯುವ ಕೈಗಳಿಗೆ ಕೆಲಸವಿಲ್ಲ ವಿಬಿಜಿರಾಮಜೀ ಖಾತ್ರಿ ಯೋಜನೆಡಿಯಲ್ಲಿ ಕೂಲಿಕಾರರಿಗೆ ಸರಿಯಾದ ರೀತಿ ಕೆಲಸ ನೀಡುತ್ತಿಲ್ಲ . ಸರ್ಕಾರದ ಮಹತ್ವದ ಜಲಜೀವನ್ ಮಿಷನ್ ಯೋಜನೆಯೊಂದು‌ ಗ್ರಾಮಗಳಿಗೆ ವರವಾಗಬೇಕಿದ್ದ ಯೋಜನೆ ಹಳ್ಳ ಹಿಡಿದಿದೆ .ಅಧಿಕಾರಿಗಳು ಗುತ್ತಿಗೆದಾರರು ಲಾಭಿ ಮಾಡಿಕೊಂಡು ಹೆಸರಿಗೆ‌ ಮಾತ್ರ ಯೋಜನೆ ಅಷ್ಟೆ ಪ್ರಯೋಜನವಿಲ್ಲ‌ ಸಂಬಂಧಿಸಿದ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯೆದಿಂದ ಮನೆ ಮನೆ ಜಲ ಗಂಗೆ ಮನೆ ಮನೆಗಳಿಗೆ ನೀರು ಬರದೆ ಅಂತರ ಗಂಗೆಯಾಗಿದೆ .ಶೀಘ್ರವೆ ಸರಿಪಡಿಸುವಂತೆ ಗಮನಹರಿಸಬೇಕೆಂದರು.

ವಿಬಿಜಿ ರಾಮಾಜಿ ಕೂಲಿಕಾರರಿಗೆ ಉದ್ಯೋಗ ಸಮರ್ಪಕವಾಗಿ ಸಿಗದೆ ಬಡವರ್ಗದ ಜನ ಗುಳೆ ಹೋಗುತ್ತಿದ್ದಾರೆ . ಮಾನವ ದಿನಗಳನ್ನು ಹೆಚ್ಚಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಲು ಕ್ರಮಗೈಗೊಳ್ಳಬೇಕೆಂದರು

ರೈತ ಯುವಮುಖಂಡ ಹನುಮಂತಾಪುರದ ಹನುಮಂತಪ್ಪ ಮಾತನಾಡಿ ಗ್ರಾಮದ ಶಾಲೆಯಲ್ಲಿರುವ ಕುಡಿಯುವ ನೀರು ಕಲುಷಿತ ನೀರು ಮಿಶ್ರಣವಾಗಿ ಬರುತ್ತಿವೆ ಸರಿಪಡಿಸಿ ಎಂದರು .

ಕ್ಯಾಸೆನಹಳ್ಳಿ ಮರಿಯಪ್ಪ ಮಾತನಾಡಿ
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲಿನ ಮೂಲಸೌಲಭ್ಯ ಒದಗಿಸಲು ವಿಫಲರಾಗಿದ್ದಾರೆ. ಈ ಹಿಂದೆ ಖಾತ್ರಿ ಯೋಜನೆ ಇದ್ದ ಸಂದರ್ಭದಲ್ಲಿ ಕೂಲಿಕಾರರಿಗೆ ನಿರಂತರ ಕೆಲಸ ಸಿಗುತ್ತಿತ್ತು ಆದರೆ ಇದೀಗ ವಿಬಿಜಿ ರಾಮಾಜಿ ಕೆಲಸ ನೀಡುತ್ತಿಲ್ಲ ಎಂದು ನೇರವಾಗಿ ಜಿಪಂ ಮುಖ್ಯಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರಿನ ಮೇರೆಗೆ ಮನವಿ ಸಲ್ಲಿಸಿ ಒತ್ತಾಯಿಸಿದರು..
ಕರ್ನಾಟಕ ರಾಜ್ಯ ರೈತ ಸಂಘ ಯುವ ಮುಖಂಡ ಬೈರನಾಯಕನಹಟ್ಟಿ ರಾಜು ಮಾತನಾಡಿ‌ ಬುಡಕಟ್ಟು ಸಮುದಾಯದ ಅನೇಕ ರೈತರು ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡುವಂತೆ ಗ್ರಾಮ ಪಂಚಾಯಿತಿ ಅರ್ಜಿ ಸಲ್ಲಿಸಲಾಗಿದೆ ಅರ್ಜಿಗಳನ್ನು ವಿಲೆವಾರಿ ಮಾಡಿ ಎಂದು ರೈತ ಸಂಘದ ರಾಜು ಸಭೆಯಲ್ಲಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಉಪಾ ಕಾರ್ಯದರ್ಶಿ ಮಮತಾ ಹೊಸಗೌಡರ ಇಓ ಕೆಂಚಪ್ಪ.ಎಇಇ.ನಾಗೇಂದ್ರಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!