ಮುಂಬರುವ 5 ಚುನಾವಣೆಗಳ ಕಣಕ್ಕೆ ಕಾಂಗ್ರೆಸ್ ಸಂಘಟನ ಸೃಜನ್ ಅಭಿಯಾನ ತಳಮಟ್ಟದ ಪಕ್ಷ ಸಂಘಟನೆಗೆ ಸಾಕ್ಷಿಯಾಗಲಿದೆ.
ಕ್ಷೇತ್ರದ ಶಾಸಕರಾದ ಬಿ.ದೆವೇಂದ್ರಪ್ಪ ಕರೆ ನೀಡಿದರು
ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ನಮ್ಮ ಕಾಂಗ್ರೆಸ್ ಪಕ್ಷ ತಳಮಟ್ಟದಿಂದ ಸಂಘಟನೆ ಮಾಡುವ ಸದುದ್ದೇಶದಿಂದ ಬಾಗ 2 ಸಂಘಟನ ಸೃಜನ್ ವಿಶೇಷ ಅಭಿಯಾನದ ಮೂಲಕ ಪಕ್ಷ ಬಲವರ್ಧನೆಗೆ ಅತ್ಯಂತ ಸಹಕಾರಿಯಾಗಲಿದೆ.
ಮುಂಬರುವ ದಿನಗಳಲ್ಲಿ 5 ಚುನಾವಣೆಗಳು ಸಮಿಪಿಸುತ್ತಿವೆ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಕಾರ್ಯಕರ್ತರು ಮುಂಬರುವ ಜಿಪಂ .ತಾಪಂ ಗ್ರಾಮ ಪಂಚಾಯಿತಿ .ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತ ನಾಯಕರನ್ನ ಸೂಚಿಸುವ ಮೂಲಕ ಬ್ಲಾಕ್ ಅದ್ಯಕ್ಷರ ಹಾಗೂ ಇನ್ನಿತರೆ ಸ್ಥಾನಗಳಿಗೆ ಸಮರ್ಥರನ್ನು ಆಯ್ಕೆ ಮಾಡಲು ಪ್ರತಿ ಕಾರ್ಯಕರ್ತರು ತಮ್ಮ ಸಹಕಾರ ಅವಶ್ಯವಾಗಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ಎನ್ನುವುದು ತಾಯಿ ಇದ್ದ ಹಾಗೇ ತಾಯಿಗೆ ದ್ರೋಹ ಬಗೆಯದಂತೆ ಪ್ರಾಮಾಣಿಕ ಕಾರ್ಯಕರ್ತರು ಅವಶ್ಯವಾಗಿದೆ ಎಂದುಕೆಪಿಸಿಸಿ ಜಿಲ್ಲಾಧ್ಯಕ್ಷ ಇಬ್ರಾಹಿಮ್ ಖಲೀಲ್ ನೂತನ ಸಂಘಟನ ಸೃಜನ್ ಅಭಿಯಾನ ಬಾಗ 2 ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು
ಕಾಂಗ್ರೆಸ್ ಶಿಸ್ತಿನ ಪಕ್ಷ ಕೆಪಿಸಿಸಿ ರಾಹುಲ್ ಗಾಂಧಿಯವರ ಕನಸಿನಂತೆ ಪಕ್ಷವನ್ನ ತಳಮಟ್ಡದಿಂದ ಸಂಘಟಿಸುವ ಚಿಂತನೆಯಂತೆ ಸಂಘಟನ್ ಸೃಜನ್ ಅಭಿಯಾನ ಬಾಗ 2 ಪ್ರಾರಂಭವಾಗಿದೆ.
ನಮ್ಮ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತ ನಾಯಕರಾಗಿ ಬೆಳೆಯಬೇಕೆಂದರು ಶಿಸ್ತಿನ ಸಂಘಟಕರಿಂದ ಪಕ್ಷ ಬೆಳವಣಿಗೆಯಾಗಿ ಅನೇಕ ನಾಯಕರುಗಳನ್ನು ಸೃಷ್ಠಿ ಮಾಡಲಾಗಿದೆ. . ದಾವಣಗೆರೆ ಜಿಲ್ಲೆಯಲ್ಲಿಯೇ ಜಗಳೂರು ಪ್ರದೇಶದಲ್ಲಿ ಕಾಂಗ್ರಸ್ ಪಕ್ಷಕ್ಕೆ ಕೊಡುಗೆ ಆಪಾರವಾಗಿದೆ.
ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಹಿರಿಯ ನಾಯಕರುಗಳು ತಮ್ಮ ಸಲಹೇ ಸೂಚನೆಗಳ ಮೂಲಕ ನೂತನ ಬ್ಲಾಕ್ ಅದ್ಯಕ್ಷರನ್ನ ಆಯ್ಕೆ ಮಾಡಿ ಮುಂಬರುವ ನೂತನ ಅದ್ಯಕ್ಷರ ಜವಾಬ್ದರಿ ಹೆಚ್ಚಿದ್ದು ಸರ್ವರನ್ನ ಸಮಾನವಾಗಿ ಕಾಣುವಂತ ಪಕ್ಷ ನಿಷ್ಠೆಗೆ ಕೆಲಸ ಮಾಡಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಪ್ರಸನ್ನ ಕುಮಾರ್ ಮಾತನಾಡಿದರು ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡದೇ ನಿರುಪಯುಕ್ತವಾಗಿರುವ ಘಟಕದ ಕೆಲ ಪದಾಧಿಕಾರಿಗಳ ಬದಲಾವಣೆ ಮಾಡಲು ಮಾಹಿತಿ ಸಂಗ್ರಹಣ ಸಭೆಯಾಗಿದೆ ಎಂದರು.ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಿರುವ ಪಕ್ಷ ಎಂದರೆ ಏಕೈಕ ಕಾಂಗ್ರೆಸ್ ಪಕ್ಷ ಎಂದರು. ನಮ್ಮ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಮುಂಬರುವ ಜಿಪಂ. ತಾಪಂ ಚುನಾವಣೆ ಒಂದು ಸವಾಲಿದೆ ಈಗಾಗಲೇ 1400 ಜಿಲ್ಲಾ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ ಎಂದು ಸಲಹೇ ನೀಡಿದರು
ಕಾಂಗ್ರೆಸ್ ವೀಕ್ಷಕರಾದ ಅನಿತಾಕುಮಾರಿ ಮಾತನಾಡಿದರು ಕಾಂಗ್ರೆಸ್ ಪಕ್ಷಕ್ಕೆ ಹಿರಿಯರು .ಯುವಕರು .ಮಹಿಳೆಯರು ಸಹ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು ಯುವಪಡೆ ಮಹಿಳಾ ಪಡೆಗೆ ಆಧ್ಯತೆ ಕೋಡಿ ಎಂದರು.
ಕೆಪಿಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗುವಂತ ಕಾರ್ಯಕರ್ತರಿಗೆ ಮುಂಬರುವ ದಿನಮಾನಗಳಲ್ಲಿ ಸಾಕಷ್ಟು ಜವಾಬ್ದರಿಗಳಿವೆ . ಪಕ್ಷ ಸಂಘಟನೆ ಒಗ್ಗಟಾಗಿ ಕೆಲಸ ಮಾಡುವುದು ಅನಿವಾರ್ಯ ಎಂದರು
ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ದೂರದೃಷ್ಠಿ ಚಿಂತನೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ .ಶಿಕಾರಿಪುರದ ಕಾಂಗ್ರೆಸ್ ಮುಖಂಡರಾದ ನಾಗರಾಜ್ ಗೌಡ. ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ. ಕಾಂಗ್ರೆಸ್ ರಾಜ್ಯ ಎಸ್ಟಿ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್. ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್ ಕಾಂಗ್ರೆಸ್ ಎಸ್ಸಿ ಘಟಕದ ಅದ್ಯಕ್ಷ ಮಹೇಶ್ವರಪ್ಪ.ಮಾಜಿ ಪಪಂ ಸದಸ್ಯ ಮಂಜುನಾಥ.
ಯರೆಬಳ್ಳಿ ಉಮಾಪತಿ. ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕಲ್ಪಾನ. ಸಾವಿತ್ರಮ್ಮ.ಶಿಲ್ಪಾ. ಅಲ್ಪಸಂಖ್ಯಾತ ಘಟಕದ ಆಹಮದ್ ಆಲಿ. ಕಾಂಗ್ರೆಸ್ ಎಸ್ಸಿ ಘಟಕದ ಅದ್ಯಕ್ಷ ಮಹೇಶ್ವರಪ್ಪ.ನಾಗರಾಜ್ ಗೌಡ್ರು. ಮುಖಂಡರಾದ ಓಮಣ್ಣ. ಮುಖಂಡರಾದ ಜಿ.ಎಚ್.ಶಂಭುಲಿಂಗಪ್ಪ. ಸಿ ತಿಪ್ಪೇಸ್ವಾಮಿ. ಸೇರಿದಂತೆ ಹಾಜುರಿದ್ದರು.
