By shukradeshe news
editor m.rajappa vyasgondanahalli
Kannada | online news portal |Kannada news online date 13_11_2026

ಅಂಜಿನಪ್ಪ ಅವರು ಮಾಜಿ ಮುಖ್ಯಮಂತ್ರಿ ಯಡಿಯೊರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೆಂದ್ರ ಹಾಗೂ ಸಚಿವರುಗಳಿಗೆ ಸ್ವಾಮಿಜಿಗಳಿಗೆ .ಮತ್ತು ಗಣ್ಯರಿಗೆ ಕಂಬಳಿ ಹಾಕಿ ಸನ್ಮಾನಿಸುತ್ತಿರುವುದು ಒಂದು ವೈಶಿಷ್ಟಪೂರ್ಣವಾಗಿದೆ.ಕಂಬಳಿ ಒಂದು ಧಾರ್ಮಿಕ ಸಂಕೇತ ಪೂಜೆ ಪುನಾಸ್ಕರಗಳಿಗೆ ಹೆಚ್ಚು ಬಳಕೆಯಾಗುವ ಕಂಬಳಿ ಶುಭಾ ಸಂಕೆತವಾಗಿದೆ. ಬಹುತೇಕ ಜನರು ಹಿರಿಯರಿಗೆ ಮತ್ತು ಗಣ್ಯರಿಗೆ ಶಾಲು ಹಾರ ಹಾಕಿ ಸನ್ಮಾನಿಸುವುದು ವಾಡಿಕೆ ಆದರೆ ಇಲ್ಲೊಬ್ಬ ಬಿಜೆಪಿ ಪಕ್ಷದ ಯುವ ರಾಜಕಾರಣಿ ಟೈಗರ್ ಅಂಜಿನಪ್ಪ ಅವರು ಗಣ್ಯರಿಗೆ ಅತಿ ಹೆಚ್ಚು ಕಂಬಳಿ ಹಾಕಿ ಗೌರವ ಸಲ್ಲಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 500 ಕಂಬಳಿ ಹಾಕಿ ಸನ್ಮಾನಿಸಿರುವ ಏಕೈಕ ವ್ಯಕ್ತಿ ಅಂಜಿನಪ್ಪ .

ಚಿಕ್ಕ ಉಜ್ಜಿನಿ ಗ್ರಾಮದ ಟೈಗರ್ ಅಂಜಿನಪ್ಪ ಸೊಕ್ಕೆ ಜಿಪಂ ಕ್ಷೇತ್ರದ ಪ್ರಬಲ ಆಕಾಂಕ್ಷಿ

.

ಮುಂಬರುವ ಜಿಪಂ ಚುನಾವಣೆಯಲ್ಲಿ‌ ಸೊಕ್ಕೆ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾನೆ ಈಗಾಗಲೆ ನನಗೆ ಟಿಕಿಟ್ ಕೊಡಿಸುವಂತೆ ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಎಸ್ .ವಿ ರಾಮಚಂದ್ರಪ್ಪ .ಹೆಚ್ ಪಿ ರಾಜೇಶ್ ಮತ್ತು ಮಾಜಿ ಜಿಲ್ಲಾ ಸಂಸದರಾದ ಜಿ.ಎಂ.ಸಿದ್ದೇಶ್ ಪಕ್ಷದ ವರಿಷ್ಠರಿಗೆ, ಬಳಿ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಬಿಜೆಪಿ ಪಕ್ಷದಲ್ಲಿ ನಾನೊಬ್ಬ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಮೂಲಕ ಈ ಬಾಗದಲ್ಲಿ ಅತಿ ಹೆಚ್ಚು ಮತದಾರರ ವಿಶ್ವಾಸ ನನಗೆ ಒಲವು ಇದೆ ಹಾಗಾಗಿ ಪಕ್ಷದ ವರಿಷ್ಠರು ಮುಂಬರುವ ಜಿಪಂ ಚುನಾವಣೆ ಸ್ವರ್ಧಿಸಲು ನನಗೆ ಟಿಕಿಟ್ ನೀಡುತ್ತಾರೆ ಎಂಬ ಭರವಸೆ ನನಗಿದೆ ಮುಂಬರುಬ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ‌ ಸ್ವರ್ಧಿಸಲು ಬಿಜೆಪಿ ಟಿಕಿಟ್ ಗಾಗಿ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದೆನೆ ಎಂದು ನಮ್ಮ ಶುಕ್ರದೆಸೆ ಪತ್ರಿಕೆಗೆ ಪ್ರತಿಕ್ರಿಯೆಸಿದ್ದಾರೆ ಎಂದಿದ್ದಾರೆ ಅಂಜಿನಪ್ಪ .

ಕುರುಬರ ಕಂಬಳಿ ಕರಿ ಕಂಬಳಿ ಶುಭಾ ಸಂಕೇತ ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ರಾಜ್ಯದ ವರಿಷ್ಠರ ಹೆಗಲಿಗೆ ಕಂಬಳಿ ಹಾಕಿ ಸನ್ಮಾನಿಸುವುದು ನಮ್ಮ ಸಂಪ್ರದಾಯದ ಮೂಲ ವಾಡಿಕೆ ಇದೊಂದು ಕರ್ನಾಟಕದ ಕುರುಬ ಸಮುದಾಯದ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಕಲೆಯಾಗಿದೆ. ಇದು ಕೇವಲ ಬಟ್ಟೆಯಲ್ಲದೆ, ಆ ಸಮುದಾಯದ ಹೆಮ್ಮೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ

Leave a Reply

Your email address will not be published. Required fields are marked *

You missed

error: Content is protected !!