ಶುಕ್ರದೆಸೆ ನ್ಯೂಸ್
ಬೆತ್ತಲೆ ವಿಡಿಯೋ ಕಾಲ್ ರೆಕಾರ್ಡ್ ಮಾಡಿ, ಶಿಕ್ಷಕಿಗೆ 4 ಲಕ್ಷ ರೂ.ಗೆ ಬೇಡಿಕೆಯಿಟ್ಟ ವಿದ್ಯಾರ್ಥಿ
26/06/2023
ಪುಣೆ: ಮಾಜಿ ವಿದ್ಯಾರ್ಥಿಯೊಬ್ಬ ತನ್ನ ಮಹಿಳಾ ಪ್ರೊಫೆಸರ್ ಗೆ ಬ್ಲಾಕ್ ಮೇಲ್ ಮಾಡಿ ನಾಲ್ಕು ಲಕ್ಷ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಬಿಹಾರ ಮೂಲದ ಮಯಾಂಕ್ ಸಿಂಗ್ ಎಂಬಾತನೇ ಆರೋಪಿಯಾಗಿದ್ದು, ಈತ ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಯಾಗಿದ್ದ. ಪರೀಕ್ಷೆಯಲ್ಲಿ ಪಾಸಾದ ನಂತರವೂ ತನ್ನ ಮಹಿಳಾ ಪ್ರೊಫೆಸರ್ ಜೊತೆ ಇನ್‌ಸ್ಟಾಗ್ರಾಂನಲ್ಲಿ ಆಗಾಗ್ಗೆ ಚಾಟ್ ಮಾಡುತ್ತಿದ್ದ. ನಂತರ ಇವರಿಬ್ಬರು ಪರಸ್ಪರ ವಾಟ್ಸ್ ಆ್ಯಪ್ ಕರೆ ಮಾಡಲು ಆರಂಭಿಸಿದ್ದರು. ಹೀಗಿರುವಾಗಲೇ ಮಯಾಂಕ್ ಪ್ರೊಫೆಸರ್ ಜತೆಗಿನ ಎಲ್ಲ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳನ್ನು ವಿಶ್ವವಿದ್ಯಾಲಯದ ಬಹಿರಂಗಗೊಳಿಸುವುದಾಗಿ ಹೆದರಿಸುತ್ತಿದ್ದನು.
ಹೀಗಾಗಿ ಆಕೆ ಅವನು ಹೇಳಿದಂತೆ ಕೇಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದು, ಇದನ್ನೇ ಮಯಾಂಕ್ ತನ್ನ ಲಾಭಕ್ಕಾಗಿ ಬಳಸಿಕೊಳ್ಳು ಯತ್ನಿಸಿದ್ದಾನೆ. ಇತ್ತೀಚೆಗಷ್ಟೇ ಮಯಾಂಕ್ ಆಕೆಗೆ ವಿಡಿಯೋ ಕಾಲ್ ಮಾಡಿ, ತಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ತಮ್ಮ ಚಾಟಿಂಗ್ ನ ಸ್ಕ್ರೀನ್ ಶಾಟ್ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಅದಕ್ಕೆ ಹೆದರಿದ ಪ್ರೊಫೆಸರ್, ವಿದ್ಯಾರ್ಥಿ ಹೇಳಿದಂತೆಯೇ ವಿಡಿಯೋ ಕಾಲ್ ನಲ್ಲಿ ಬೆತ್ತಲೆಯಾಗಿದ್ದಾಳೆ. ಕರೆ ರೆಕಾರ್ಡ್ ಮಾಡಿಕೊಂಡ ಆರೋಪಿಯು ವಿಡಿಯೋವನ್ನು ಆಕೆಯ ಪತಿಗೆ ಕಳುಹಿಸಿ 4 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ. ಕೊನೆಗೆ ಪ್ರೊಫೆಸರ್ ದಂಪತಿ ಪೊಲೀಸರನ್ನು ಸಂಪರ್ಕಿಸಿ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್ )