Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 11
ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಇವರಿಗೆ ಡಾ ಬಿ ಆರ್ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ ಪ್ರದಾನ
ಡಾ ಬಿ ಆರ್ ಅಂಬೇಡ್ಕರ್ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿ ಜಗಳೂರು ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಕುಗ್ರಾಮದಲ್ಲಿ ಜನಿಸಿದ ಇವರು ಪ್ರಸ್ತುತದಲ್ಲಿ ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಮತ್ತು ದಲಿತ ಮತ್ತು ಪ್ರಗತಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಲ್ಲದೆ ಸಾಹಿತಿ ಶುಕ್ರದೆಸೆ ನ್ಯೂಸ್ ಪತ್ರಿಕೆ ಸಂಪಾದಕರಾಗಿ ತನ್ನ ವೃತ್ತಿ ಪ್ರವೃತ್ತಿ ಎಂಬಂತೆ ಕನ್ನಡ ಸಾಹಿತ್ಯ ಪರಿಷತ್ ಹೊಬಳಿ ಘಟಕದ ಅಧ್ಯಕ್ಷರಾಗಿ ಕನ್ನಡ ನಾಡು ನುಡಿ ಸೇವೆ ಸಲ್ಲಿಸುತಾ ಬಂದಿರುವ ಇವರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ರಿ ವತಿಯಿಂದ ಬೆಂಗಳೂರು ರವೇಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ದಿ .8 ರಂದು ಗಾಂಧಿ ಜಯಂತಿ ಹಾಗೂ ಸಂವಿಧಾನ ಪೀಠಿಕೆ ವಿಚಾರ ಸಂಕಿರಣ ಕನ್ನಡ ಜಾಗೃತಿ ವಿಚಾರ ಸಂಕಿರಣ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಕೊಡಮಾಡುವ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಗಳೂರಿನ ಪತ್ರಕರ್ತ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಇವರಿಗೆ ರಾಜ್ಯ ಡಾ ಬಿ ಆರ್ ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಅದ್ಯಕ್ಷರಾದ ಗುಣುವಂತ ಮಂಜು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಾಹಿತಿಗಳು ಡಿ ಎಸ್ ವೀರಯ್ಯ.ಡಾ ಅರುಣ್ ಗುರೂಜಿ ಖ್ಯಾತ ಹಿನ್ನೆಲೆಯಲ್ಲಿ ಗಾಯಕ ರಮೇಶ್ ಚಂದ್ರ .ಬಹುಭಾಷ ನಟಿ ಭೂಮಿಕಾ .ರಂಗಕಲಾವಿದೆ ವಿಜಯಲಕ್ಚ್ಮೀ.ಭಾರತೀಯ ಅಂಬೇಡ್ಕರ್ ಸೇನೆ ರಾಜ್ಯಾದ್ಯಕ್ಷ ಸಂಪಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ವೈಚಾರಿಕ ವಿಚಾರ ಮಂಡಿಸಿದರು ರಾಜ್ಯದ ಅಭೂತಪೂರ್ವ ಕಾರ್ಯಕ್ರಮದಲ್ಲಿ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಇವರು ಡಾ ಬಿ ಆರ್ ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ ಸ್ವೀಕರಿಸಿರುತ್ತಾರೆ.